ಉಜಿರೆ: ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮುಂಡತ್ತೋಡಿ ಪೆರ್ಲ ಇದರ ವಿವೇಕ ಕಟ್ಟಡ ಉದ್ಘಾಟನೆ ಮತ್ತು ಪ್ರತಿಭಾ ಸಿಂಚನ ಡಿ.23 ರಂದು ಜರಗಿತು.
ವಿವೇಕ ಕಟ್ಟಡವನ್ನು ಉಜಿರೆ ಗ್ರಾಮ ಪಂಚಾಯತ್ ಅಧ್ಯಕ್ಷೆ ಉಷಾ ಕಿರಣ್ ಕಾರಂತ್ ಉದ್ಘಾಟಿಸಿ ಶುಭ ಕೋರಿದರು.ಪ್ರತಿಭಾ ಸಿಂಚನ ಕಾರ್ಯಕ್ರಮವನ್ನು ಚಾವಡಿ ಮನೆ ಅರ್ಚಕ ಸುಮೇದ್ ಭಟ್ ನೆರವೇರಿಸಿದರು.
ಅಧ್ಯಕ್ಷತೆಯನ್ನು ಶಾಲಾ ಎಸ್ ಡಿ ಎಂ ಸಿ ಅಧ್ಯಕ್ಷೆ ರೇವತಿ ವಹಿಸಿದ್ದರು.ಉಜಿರೆ ಗ್ರಾಮ ಪಂಚಾಯತ್ ಉಪಾಧ್ಯಕ್ಷ ರವಿ ಕುಮಾರ್ ಬರೆಮೇಲು, ಲಕ್ಹ್ಮೀ ಗ್ರೂಪ್ ಕನಸಿನ ಮನೆಯ ಕೆ.ಮೋಹನ್ ಕುಮಾರ್, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ಸಿ.ಕೆ.ಚಂದ್ರಕಲ, ಗ್ರಾಮ ಪಂಚಾಯತ್ ಸದಸ್ಯರುಗಳಾದ ಮಂಜುನಾಥ, ಗುರುಪ್ರಸಾದ್, ಲಲಿತ, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ನಮಿತಾ ಕೆ., ಬ್ಲಾಕ್ ಕಾಂಗ್ರೆಸ್ ಗ್ರಾಮೀಣ ಅಧ್ಯಕ್ಷ ನಾಗೇಶ್ ಕುಮಾರ್ ಗೌಡ, ಭಾಗವಹಿಸಿದ್ದರು.
ಪ್ರತಿಭಾ ಸಿಂಚನ ಸಮಿತಿ ಅಧ್ಯಕ್ಷ ಗಣೇಶ್ ಡಿ.ಪಿ, ಸ್ವಾಗತಿಸಿ, ಮುಖ್ಯ ಶಿಕ್ಷಕಿ ಸೇವಂತಿ ವಂದಿಸಿದರು.ಶಿಕ್ಷಕಿ ಉಷಾಲತಾ ನಿರೂಪಿಸಿ ಶಿಕ್ಷಕರಾದ ಸಚಿನ್, ರಂಜಿತಾ, ಎಸ್ ಡಿ ಎಂ ಸಿ ಸದಸ್ಯರು, ಹೆತ್ತವರು ಸಹಕರಿಸಿದರು.