Site icon Suddi Belthangady

ಶಿರ್ಲಾಲು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಬ್ರಹ್ಮಕಲಶೋತ್ಸವಕ್ಕೆ ಚಾಲನೆ, ಭವ್ಯ ಹೊರೆಕಾಣಿಕೆ ಮೆರವಣಿಗೆ

ಶಿರ್ಲಾಲು : ಶಿರ್ಲಾಲು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಪುನಃಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶೋತ್ಸವವು ಡಿ.24 ರಿಂದ 28 ರವರೆಗೆ ವಿವಿಧ ವೈದಿಕ, ಧಾರ್ಮಿಕ,ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ವಿಜೃಂಭಣೆಯಿಂದ ನಡೆಯಲಿದ್ದು, ಪೂರ್ವಭಾವಿಯಾಗಿ ಹೊರೆಕಾಣಿಕೆ ಮೆರವಣಿಗೆ ಡಿ.24 ರಂದು ಸಂಜೆ ನಡೆಯಿತು.

ಅಳದಂಗಡಿಯಲ್ಲಿ ದೈವ ದೇವರುಗಳ ಆಭರಣಗಳ ರಥಕ್ಕೆ ಹಾಗೂ ಕುಣಿತಾ ಭಜನೆಗೆ ಶಿರ್ಲಾಲು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷೆ ಗುಣಮ್ಮ ಅವರು ಚಾಲನೆ ನೀಡಿದರು.

ಕುಣಿತ ಭಜನೆ, ಕೀಲು ಕುದುರೆ, ಚೆಂಡೆ ವಾದ್ಯ ವಿವಿಧ ವೇಷ ಭೂಷಣಗಳೊಂದಿಗೆ ವೈಭವಯುತ ಅಭೂತಪೂರ್ವ ಹಸಿರುವಾಣಿ ಹೊರೆಕಾಣಿಕೆ ಮತ್ತು ದೈವ-ದೇವರ ಆಭರಣಗಳ ವೈಭವಯುತ ಮೆರವಣಿಗೆ ಅಳದಂಗಡಿಯಿಂದ ನಡೆಯಿತು.

ಶಿರ್ಲಾಲು ಬ್ರಹ್ಮ ಬೈದರ್ಕಳ ಗರಡಿ ಹತ್ತಿರ ನಡೆದ ಹಸಿರುವಾಣಿ ಹೊರೆಕಾಣಿಕೆ ಮತ್ತು ದೈವ ದೇವರ ಆಭರಣಗಳ ಮೆರವಣಿಗೆಗಳ ಉದ್ಘಾಟನೆಯನ್ನು ಬ್ರಹ್ಮಕಲಶೋತ್ಸವ ಸಮಿತಿ ಗೌರವಾಧ್ಯಕ್ಷ, ಶಾಸಕ ಹರೀಶ್ ಪೂಂಜರ ಉದ್ಘಾಟಿಸಿ ಶುಭ ಕೋರಿದರು.

ಮುಂಬೈ ಉದ್ಯಮಿ, ದಾನಿ ಸುರೇಶ್ ಪೂಜಾರಿ ಊರ ಕಲಶಕ್ಕೆ ಭತ್ತ ಹಾಕುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು.

ವೇದಿಕೆಯಲ್ಲಿ ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಪ್ರಶಾಂತ್‌ ಎಂ. ಪಾರೆಂಕಿ,ಬ್ರಹ್ಮಕಲಶೋತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ರವಿರಾಜ್ ಗೌಡ,ಸೇವಾ ಸಮಿತಿ ಅಧ್ಯಕ್ಷ ಆನಂದ ಸಾಲಿಯಾನ್ ಒಡಿಮಾರು, ಮೆರವಣಿಗೆ ಸಮಿತಿ ಸಂಚಾಲಕ ಪ್ರಕಾಶ್ ಕಟ್ರಬೈಲು,ಹರೀಶ್ ಮಿತ್ತೊಟ್ಟು, ಹಸಿರುವಾಣಿ ಸಂಚಾಲಕ ವಿಜಯ್ ಕುಮಾರ್, ಹರೀಶ್ ಕುಂಞಲೊಟ್ಟು, ಹರೀಶ್ ಕಲ್ಲಾಜೆವಿವಿಧ ಸಮಿತಿಗಳ ಪದಾಧಿಕಾರಿಗಳು, ಊರವರು, ಭಕ್ತರು ಸಹಕರಿಸಿದರು.

ಸತೀಶ್ ನೆಲ್ಲಿಗುಡ್ಡೆ ಸ್ವಾಗತಿಸಿದರು, ದೀಕ್ಷಿತ್ ಅಂಡಿಂಜೆ ನಿರೂಪಿಸಿದರು.

ಗಮನ ಸೆಳೆದ ಕುಣಿತಾ ಭಜನೆ: ಅಳದಂಗಡಿಯಿಂದ ಶಿರ್ಲಾಲು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದವರೆಗೆ ಹೆಚ್ಚಿನ ಭಜಕರಿಂದ ಕುಣಿತಾ ಭಜನೆ ಆಕರ್ಷಣೀಯವಾಗಿತ್ತು.

Exit mobile version