Site icon Suddi Belthangady

ರಾಜಕೇಸರಿ ರತ್ನ ಟ್ರೋಫಿ: ಕ್ರಿಕೆಟ್ ಟೂರ್ನಿಗೆ ಚಾಲನೆ

ಬೆಳ್ತಂಗಡಿ: ಒಂದು ಬಡ ಕುಟುಂಬದ ವ್ಯಕ್ತಿಯ ಶಸ್ತ್ರಚಿಕಿತ್ಸೆಗಾಗಿ ಹಾಕಿಕೊಂಡಿರುವ ಸೇವಾ ಯೋಜನೆ ಹಿನ್ನಲೆಯಲ್ಲಿ ಅಖಿಲ ಕರ್ನಾಟಕ ರಾಜಕೇಸರಿ ಟ್ರಸ್ಟ್(ರಿ) ಬೆಳ್ತಂಗಡಿ ತಾಲೂಕು ಇವರ ಆಶ್ರಯದಲ್ಲಿ ಬೆಳ್ತಂಗಡಿ ತಾಲೂಕಿನ ವಿವಿಧ ಇಲಾಖೆಯ ತಂಡಗಳ ನಡುವಿನ ಓವರ್ ಆರ್ಮ್ ಕ್ರಿಕೆಟ್ ಟೂರ್ನಿಗೆ ಬೆಳ್ತಂಗಡಿ ಜೂನಿಯರ್ ಕಾಲೇಜು ಮೈದಾನದಲ್ಲಿ ಚಾಲನೆ ನೀಡಲಾಯಿತು.

ಬೆಳ್ತಂಗಡಿ ತಹಶೀಲ್ದಾರ್ ಪೃಥ್ವಿ ಸಾನಿಕಮ್ ದೀಪ ಬೆಳಗುವ ಮೂಲಕ ಚಾಲನೆ ನೀಡಿದರು.

ಬೆಳ್ತಂಗಡಿ ಸರ್ಕಲ್ ಇನ್ಸ್ ಪೆಕ್ಟರ್ ನಾಗೇಶ್ ಕದ್ರಿ, ಗೃಹರಕ್ಷಕ ದಳದ ಅಧ್ಯಕ್ಷ ಜಯಾನಂದ್, ಕೆ ಎಸ್ ಆರ್ ಟಿ ಸಿ ಘಟಕ ಧರ್ಮಸ್ಥಳದ ವ್ಯವಸ್ಥಾಪಕ ಉದಯ್ ಕುಮಾರ್ ಶೆಟ್ಟಿ, ಬೆಳ್ತಂಗಡಿ ಪತ್ರಕರ್ತರ ಸಂಘದ ಅಧ್ಯಕ್ಷ ಹೃಷಿಕೇಶ್ ಧರ್ಮಸ್ಥಳ, ವಕೀಲರ ಸಂಘದ ಅಧ್ಯಕ್ಷ ವಸಂತ ಮರಕಡ, ಉಸ್ಮಾನ್ ಅಗ್ನಿಶಾಮಕ ಇಲಾಖೆ, ನಗರ ಪಂಚಾಯತ್ ನ ಕರುಣಾಕರ್, ರಾಜಕೇಸರಿ ಸಂಘದ ಅಧ್ಯಕ್ಷ ಸಂದೀಪ್ ಬೆಳ್ತಂಗಡಿ,ರಾಜಕೇಸರಿಯ ಸಂಸ್ಥಾಪಕ ದೀಪಕ್ ಜಿ ಬೆಳ್ತಂಗಡಿ ಉಪಸ್ಥಿತರಿದ್ದರು.

ರಾಜಕೇಸರಿಯ ವಿಜಯ್ ಸಿಕ್ವೇರಾ ನಿರೂಪಿಸಿದರು.

Exit mobile version