ಬೆಳ್ತಂಗಡಿ: ಶಾಂತಿ, ಪ್ರೇಮ, ಸೌಹಾರ್ದತೆಯಿಂದ ಬಾಳಬೇಕು ನಮ್ಮಲ್ಲಿರುವ ಅಂತಯು೯ದ್ಧವನ್ನು ಕೊನೆಗೊಳಿಸಿ ವಿಶ್ವಕ್ಕೆ ಏಸುಕ್ರಿಸ್ತರು ಸಾರಿದ ಸಹೋದರತೆ ಐಕ್ಯತೆಯ ಗುಣಗಳನ್ನು ಬೆಳೆಸಿಕೊಂಡಾಗ ನಿಜವಾದ ಮಾನವರಾಗಲು ಸಾಧ್ಯ ಎಂದು ಚರ್ಚ್ ಅನುದಾನಿತ ಹಿ.ಪ್ರಾ ಶಾಲೆಯಲ್ಲಿ ಆಚರಿಸಿದ ಕ್ರಿಸ್ಮಸ್ ಹಬ್ಬದ ಅಧ್ಯಕ್ಷ ಸ್ಥಾನದಿಂದ ವಂ.ಫಾದರ್ ವಾಲ್ಟರ್ ಡಿ ಮೆಲ್ಲೊ ಆಶೀರ್ವಚನ ನೀಡಿದರು.ಹಾಗೂ ಕ್ರಿಸ್ಮಸ್ ಮತ್ತು ಹೊಸ ವರ್ಷದ ಶುಭಾಶಯಗಳು ನೀಡಿ ಎಲ್ಲರಿಗೂ ಶುಭ ಹಾರೈಸಿದರು.
ವೇದಿಕೆಯಲ್ಲಿ ಶಾಲಾ ಶಿಕ್ಷಕರಕ್ಷಕ ಸಂಘದ ಉಪಾಧ್ಯಕ್ಷ ಯಶವಂತ್, ಮುಖ್ಯೋಪಾಧ್ಯಾನಿ ರೆನ್ನಿ ವಾಸ್ ಉಪಸ್ಥಿತರಿದ್ದರು.ಹೆಲೆನ್ ತಾವ್ರೊ ಸ್ವಾಗತವಿತ್ತು, ರೀಟಾ ಸೆರಾವೊ ಧನ್ಯವಾದ ನೀಡಿದರು.ಶಾಲಾ ಮಕ್ಕಳಿಂದ ಕ್ರಿಸ್ಮಸ್ ಕಾರ್ಯಕ್ರಮ ನೆರವೇರಿತು.ಪೋಷಕರು, ರಕ್ಷಕ ಶಿಕ್ಷಕ ಸಂಘದ ಸದಸ್ಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.ವಿದ್ಯಾರ್ಥಿನಿ ಪ್ರಿನ್ಸಿಯ ಮೊನಿಸ್ ಕಾರ್ಯಕ್ರಮ ನಿರೂಪಿಸಿದಳು.