ಬೆಳ್ತಂಗಡಿ: ಡಿ.ಕೆ.ಆರ್.ಡಿ.ಎಸ್ (ರಿ)ಬೆಳ್ತಂಗಡಿ, ನವಜೀವನ ಆರೈಕೆ ಮತ್ತು ಬೆಂಬಲ ಕೇಂದ್ರ ನೇತೃತ್ವದಲ್ಲಿ ಡಿ.23ರಂದು ಕ್ರಿಸ್ಮಸ್ ಆಚರಣೆಯನ್ನು ಬೆಳ್ತಂಗಡಿ ಸಾಂತೋಮ್ ಟವರ್ ನಲ್ಲಿ ಆಯೋಜಿಸಲಾಯಿತು.
ಮುಖ್ಯ ಅತಿಥಿಯಾಗಿ ಬೆಳ್ತಂಗಡಿ ಧರ್ಮಪ್ರಾಂತ್ಯದ ಫ್ಯಾಮಿಲಿ ಅಪೋಸ್ತಲೆಟ್ ನಿರ್ದೇಶಕರಾದ ವಂದನೀಯ ಫಾ. ಥೋಮಸ್ ಪುಲ್ಲಾಟ್ ಆಗಮಿಸಿ, ಕೇಕ್ ಕಟ್ ಮಾಡಿ, ಪೌಷ್ಠಿಕ ಆಹಾರ ವಿತರಿಸಿ ಕ್ರಿಸ್ಮಸ್ ಸಂದೇಶ ನೀಡಿದರು.
ಕುಮಾರಿ ಪೀಯಾ ಮತ್ತು ಅವರ ತಾಯಿ ಬೀನಾ ಹಾಗೆಯೇ ಅವರೊಂದಿಗೆ ವಾಮದಪದವು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಬಿ.ಎಸ್.ಡಬ್ಲ್ಯೂ ವಿದ್ಯಾರ್ಥಿಗಳು ಡಿ.ಕೆ.ಆರ್.ಡಿ.ಎಸ್ ಸಂಸ್ಥೆಯ ಸಂಯೋಜಕಿ ಕು.ಶ್ರೇಯಾ ಸೇರಿ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಪುಷ್ಪರಾಜ್ ರವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಡಿ.ಕೆ.ಆರ್.ಡಿ.ಎಸ್ ಸಂಸ್ಥೆಯ ನಿರ್ದೇಶಕರಾದ ವಂದನೀಯ ಫಾ. ಬಿನೋಯಿ ಎ.ಜೆ.ರವರು ಪ್ರಾಸ್ತಾವಿಕವಾಗಿ ಮಾತನಾಡಿ ಕ್ರಿಸ್ಮಸ್ ಸಂದೇಶ ನೀಡಿದರು.ಕು.ಶ್ರೇಯಾ ರವರು ಪ್ರಾರ್ಥನೆ ಹಾಡಿದರು.ಮಹಿಳಾ ಸಶಕ್ತತಾ ಕಾರ್ಯಕ್ರಮದ ಕಾರ್ಯಕರ್ತರಾದ ಮಾರ್ಕ್ ಡಿ ಸೋಜರವರು ಎಲ್ಲರನ್ನು ಸ್ವಾಗತಿಸಿ, ಡಿ.ಕೆ.ಆರ್.ಡಿ.ಎಸ್ ವಿದ್ಯಾನಿಧಿ ಯೋಜನೆಯ ಸಂಯೋಜಕ ಥೋಮಸ್ ರವರು ವಂದಿಸಿದರು. ಕಾರ್ಯಕರ್ತರಾದ ಮಾರ್ಕ್ ಡಿಸೋಜ ರವರು ನಿರೂಪಿಸಿದರು. ಸರಕಾರಿ ಪ್ರಥಮ ದರ್ಜೆ ಕಾಲೇಜು ವಾಮದಪದವು ಸಮಾಜ ಕಾರ್ಯದ ವಿಧ್ಯಾರ್ಥಿಗಳು ಹಾಗೂ ಡಿ. ಕೆ.ಆರ್. ಡಿ ಎಸ್. ಸಿಬ್ಬಂದಿ ವರ್ಗದವರು ಕಾರ್ಯಕ್ರಮದ ಯಶಸ್ವಿಗೆ ಸಹಕರಿಸಿದರು.
ರಾಷ್ಟ್ರಗೀತೆಯೊಂದಿಗೆ ಕಾರ್ಯಕ್ರಮವನ್ನು ಮುಕ್ತಾಯಗೊಳಿಸಿತು.