ಬೆಳ್ತಂಗಡಿ: ಜನರಪರವಾಗಿ ಪ್ರಶ್ನೆ ಮಾಡಬಾರದು, ವಿರೋದ ಪಕ್ಷದವರು ಯಾರೂ ಕೇಂದ್ರ ಸರಕಾರದ ಯಾವ ನಡೆಯನ್ನೂ ಪ್ರಶ್ನೆ ಎತ್ತಬಾರದೆಂದು ರಾಜಪ್ರಭುತ್ವದಂತೆ ಸರ್ವಾದಿಕಾರೀ ನಡೆಯ ಭಾಗವೇ ಈ 140 ಎಂ.ಪಿಗಳ ಅಮಾನತ್ತುಗೊಳಿಸಿ ವಿರೋಧ ಪಕ್ಷಗಳ ಬಾಯಿ ಮಚ್ಚಿಸುವ ಬಿಜೆಪಿ ಪಕ್ಷದ ಕುತಂತ್ರ ರಾಜಕಾರಣ ಇದಾಗಿದೆ ಎಂದು ಸಿಪಿಐ(ಎಂ) ರಾಜ್ಯ ಸಮಿತಿಯ ಮಾಜಿ ಕಾರ್ಯದರ್ಶಿ ಪಕ್ಷದ ಮುಖಂಡ ಜಿ.ಎನ್. ನಾಗರಾಜ್ ಅವರು ಹೇಳಿದರು.
ಅವರು ಡಿ.22ರಂದು ಕೇಂದ್ರ ಸರಕಾರವು 140ಎಂಪಿಗಳ ಅಮಾನತ್ತು ಮಾಡಿರುವುದನ್ನು ವಿರೋಧಿಸಿ ದೇಶದಾದ್ಯಂತ ನಡೆಸುತ್ತಿರುವ ಹೋರಾಟದ ಭಾಗವಾಗಿ ಬೆಳ್ತಂಗಡಿ ತಾಲೂಕು ಕಚೇರಿ ಎದುರು ನಡೆದ ಪ್ರತಿಭಟನೆಯನ್ನು ಉದ್ದೆಶಿಸಿ ಮಾತಾಡಿದರು.ಲೋಕಸಭೆಗೆ ಭದ್ರತೆ ಇಲ್ಲದಾಗಿದೆ ಅಕ್ರಮ ದಾಳಿ ಹುಸಿ ಬಾಂಬ್ ದಾಳಿ ನಡೆಯುವಂತಾಗಿದೆ.ಈ ಭದ್ರತಾ ವೈಫಲ್ಯಗಳ ಬಗ್ಗೆ ಗೃಹ ಸಚಿವರು ಉತ್ತರ ನೀಡಬೇಕು ಎಂದು ಹೇಳಿದ ವಿರೋದ ಪಕ್ಷದ ಸದಸ್ಯರನ್ನು ಅಮಾನತ್ತುಗೊಳಿಸಿರುವುದು ಖಂಡನೀಯ ಎಂದರು.
ಲೋಕ ಸಭೆಯಲ್ಲೂ ಎಲ್ಲಾ ವಿರೋಧವನ್ನು ಹತ್ತಿಕ್ಕಿ ಆಡಳಿತ ನಡೆಸುವ ಬಿಜೆಪಿ ಪಕ್ಷದ ಈ ನಡೆ ಭಾರತದ ದೇಶಕ್ಕಂಟಿದ ಅತಿ ದೊಡ್ಡ ಕಪ್ಪು ಚುಕ್ಕೆ ಆಗಿದೆ ಎಂದರು.ಹಿಟ್ಲರ್ ಹೇಗೆ ಜರ್ಮನಿಯಲ್ಲಿ ಪ್ರಜಾಸತ್ತೆಯ ನಾಶ ಮಾಡಿದನೋ ಅದೇ ರೀತಿಯಲ್ಲಿ ಭಾರತದಲ್ಲಿ ಪ್ರಜಾಸತ್ತೆಯ ನಾಶಕ್ಕೆ ಆರ್.ಎಸ್.ಎಸ್. ಮುಂದಾಗಿದೆ ಎಂಬುದಕ್ಕೆ ಇದು ಪುಷ್ಟಿ ನೀಡುತ್ತಿದೆ.ದೇಶ ಉಳಿಸಲು 2024ರ ಚುನಾವಣೆಯಲ್ಲಿ ಬಿಜೆಪಿಯನ್ನು ಜನರೇ ಅಮಾನತ್ತುಗೊಳಿಸಿ ಅಂದರೆ ಸೋಲಿಸಿ ದೇಶ ಉಳಿಸಲು ಸಿದ್ದರಾಗಬೇಕು ಎಂದು ಅವರು ಕರೆ ನೀಡಿದರು.
ಈ ಸಂದರ್ಭ ಮಂಡ್ಯದ ಸಿಪಿಐ(ಎಂ) ಮುಖಂಡರಾದ ಕೃಷ್ನೇ ಗೌಡ ಅವರು ಮಾತಾಡುತ್ತಾ ಬೃಷ್ಟಾಚಾರ ತಡೆಯುವೆ ಎಂದ ನರೇಂದ್ರ ಮೋದಿ ಸರಕಾರ ಬೃಷ್ಟತೆಯನ್ನು ಯಾರೂ ಪ್ರಶ್ನಿಸಬಾರದು ಎಂದು ತರ್ಕಿಸುತ್ತಿರುವುದು ಅತ್ಯಂತ ಅಪಾಯಕಾರಿ ನಿಲುವು ಎಂದರು.ಚಿಕ್ಕ ಬಳ್ಳಾಪುರ ಜಿಲ್ಲಾ ಮುಖಂಡರಾದ ಡಾ.ಅನಿಲ್ ಅವರು ಮಾತಾಡುತ್ತಾ ಬಿಜೆಪಿಯು ಪ್ರಜಾಪ್ರಭುತ್ವದ ಮೇಲೆ ನಡೆಸುವ ಈ ದಾಳಿ ಲೋಕಸಭೆಯ ದಾಳಿಗಿಂತಲೂ ಹೇಯಕರವಾಗಿದೆ ಎಂದರು.
ಯಾವ ಆದರ್ಶ ಇಟ್ಟು ತ್ಯಾಗ ಬಲಿದಾನಗಳ ಮೂಲಕ ಸ್ವತಂತ್ರ ಹೋರಾಟ ನಡೆಸಿದ ನಮ್ಮ ಹಿರಿಯರಿಗೆ ಬಿಜೆಪಿ ಮಾಡುವ ಅವಮಾನ ಇದಾಗಿದೆ ಎಂದರು.ಸಿಪಿಐಎಂ ಮುಖಂಡ ಬಿ.ಎಂ.ಭಟ್ ಸ್ವಾಗತಿಸಿ ಹೋರಾಟದ ಉದ್ದೇಶವವನ್ನು ವಿವರಿಸಿದರು.ಕೊನೆಗೆ ಸಿಪಿಐ(ಎಂ) ತಾಲೂಕು ಮುಖಂಡರಾದ ಈಶ್ವರಿ ವಂದಿಸಿದರು.ಈಶ್ವರಿ ಮತ್ತು ಜಯಶ್ರೀ ಅವರಿಂದ ಕ್ರಾಂತಿಗೀತೆ ಬಿಜೆಪಿ ಸರಕಾರದ ಆಡಳಿವನ್ನು ತಿಳಿಯಪಡಿಸುವಂತಿತ್ತು.
ಪಕ್ಷದ ಮುಖಂಡ ಜಯರಾಮ, ಕಾರ್ಮಿಕ ಮುಖಂಡರಾದ ಜಯಶ್ರೀ, ಪುಷ್ಪಾ, ಉಷಾ, ಅಶ್ವಿತ, ಅಭಿಷೇಕ್ ಪದ್ಮುಂಜ, ವಿದ್ಯಾರ್ಥಿ ನಾಯಕ ವಿನುಶರಮಣ, ಹಾಗೂ ಪಕ್ಷದ ಹಲವು ರಾಜ್ಯ ನಾಯಕರುಗಳು ಉಪಸ್ಥಿತರಿದ್ದರು.