Site icon Suddi Belthangady

ಬೆದ್ರಬೆಟ್ಟು: ಮರಿಯಾಂಬಿಕಾ ಆಂಗ್ಲ ಮಾಧ್ಯಮ ಶಾಲಾ ವಾರ್ಷಿಕೋತ್ಸವ ಇಗ್ನೈಟ್ 2023

ಬೆದ್ರಬೆಟ್ಟು: ಮರಿಯಾಂಬಿಕ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಡಿಸೆಂಬರ್ 18 ರಂದು ಶಾಲಾ ವಾರ್ಷಿಕೋತ್ಸವ ಇಗ್ನೈಟ್ 2023ನ್ನು ನಡೆಸಲಾಯಿತು. ಸಭಾ ಕಾರ್ಯಕ್ರಮವು ಬೆಳ್ತಂಗಡಿ ಧರ್ಮ ಪ್ರಾಂತ್ಯದ ಧರ್ಮಾಧ್ಯಕ್ಷರು ಅತಿವಂದನೀಯ ಬಿಷಪ್ ಮಾ ಲಾರೆನ್ಸ್ ಮುಕ್ಕುಝೀ ಇವರ ಅಧ್ಯಕ್ಷತೆಯಲ್ಲಿ, ವಂದನೀಯ ಫಾದರ್ ಶಾಜಿ ಮ್ಯಾಥ್ಯೂ ಕಾರ್ಯದರ್ಶಿಗಳು KCECS, ಆಶಾಲತಾ ಗ್ರಾಮ ಪಂಚಾಯತ್ ಅಧ್ಯಕ್ಷರು ಇಂದಬೆಟ್ಟು, ರಮೇಶ್ ಪೈಲಾರ್ ಸಿಆರ್‌ಪಿ ಬಂಗಾಡಿ ಕ್ಲಸ್ಟರ್, ದೇವಸ್ಯ ವಾಲುಕಾರನ್, ಜೋಸ್ ಕೂನತ್ತನತ್ ಸದಸ್ಯರು ಶಾಲಾ ಆಡಳಿತ ಮಂಡಳಿ, ವಂದನೀಯ ಫಾದರ್ ಸೆಬಾಸ್ಟಿಯನ್ ಶಾಲಾ ಸಂಚಾಲಕರು, ವಂದನೀಯ ಸಿಸ್ಟರ್ ಶೆರಿನ್ ಶಾಲಾ ಮುಖ್ಯ ಶಿಕ್ಷಕಿ, ಮಾಸ್ಟರ್ ಸೃಜನ್ ಕುಮಾರ್ ಶಾಲಾ ನಾಯಕ ಇವರೆಲ್ಲರ ಉಪಸ್ಥಿತಿಯಲ್ಲಿ ಬಹಳ ಅದ್ಧೂರಿಯಾಗಿ ನಡೆಯಿತು.

ಕಾರ್ಯಕ್ರಮದ ನಿರೂಪಣೆಯನ್ನು ಸಹ ಶಿಕ್ಷಕ ಕೃಷ್ಣಪ್ಪ ನಿರ್ವಹಿಸಿದರು. ಶಾಲಾ ಮುಖ್ಯ ಶಿಕ್ಷಕಿ ವಂದನೀಯ ಸಿಸ್ಟರ್ ಶೆರಿನ್ ಎಲ್ಲರನ್ನೂ ಸ್ವಾಗತಿಸಿ, ಮರಿಟ ಪ್ರಿಯಾ ಸೆರವೋ ವಂದಿಸಿದರು.

ಶಾಲಾ ವಿದ್ಯಾರ್ಥಿಗಳು ನಿರಂತರ ಮೂರು ಗಂಟೆಗಳ ಸಾಂಸ್ಕೃತಿಕ ಕಾರ್ಯಕ್ರಮದ ಮೂಲಕ ನೆರೆದಿರುವ ಜನಸ್ತೋಮದ ಮನಸೂರೆಗೊಂಡರು.ಸಾಂಸ್ಕೃತಿಕ ಕಾರ್ಯಕ್ರಮದ ನಿರೂಪಣೆಯನ್ನು ಹತ್ತನೇ ತರಗತಿ ವಿದ್ಯಾರ್ಥಿಗಳಾದ ಮಾಸ್ಟರ್ ಮುಖೇಶ್ ಮತ್ತು ಕುಮಾರಿ ಪ್ರಣಮ್ಯ ನಿರ್ವಹಿಸಿದರು.

ಕಾರ್ಯಕ್ರಮದ ಯಶಸ್ವಿಗೆ ಸಹಕರಿಸಿದ ಎಲ್ಲರನ್ನು ಶಾಲಾ ಸಹ ಶಿಕ್ಷಕಿ ಜಯಲಕ್ಷ್ಮಿ ಇವರು ವಂದಿಸಿದರು.

Exit mobile version