ಪಡಂಗಡಿ: ಶ್ರೀ ಕ್ಷೇತ್ರ ಓಡೀಲು ಮಹಾಲಿಂಗೇಶ್ವರ ದೇವಸ್ಥಾನದ ಬ್ರಹ್ಮಕಲಶೋತ್ಸವದ ಅಂಗವಾಗಿ 2 ಕೋಟಿ ರೂಪಾಯಿ ವೆಚ್ಚದ ವಿವಿಧ ಕಾಮಗಾರಿಯ ಶಂಕುಸ್ಥಾಪನೆ ಡಿ.22 ರಂದು ಓಡೀಲು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವಠಾರದಲ್ಲಿ ದೇವರ ಪುಷ್ಕರಣಿ, ನಾಗನ ಕಟ್ಟೆ, ಸಭಾಭವನ, ಅರ್ಚಕರ ಕೊಠಡಿಗೆ ಶಂಕುಸ್ಥಾಪನೆ ನೆರವೇರಿಸಲಾಯಿತು.
ಶಾಸಕ ಹರೀಶ್ ಪೂಂಜ ಶಂಕುಸ್ಥಾಪನೆಯಲ್ಲಿ ಪಾಲ್ಗೊಂಡು ತುರ್ತ ಕಾರ್ಯದ ನಿಮಿತ್ತ ತೆರಳಿದರು.
ಬಳಿಕ ನಡೆದ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ನವಶಕ್ತಿ ಗುರುವಾಯನಕೆರೆ, ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಶಶಿಧರ್ ಶೆಟ್ಟಿ ಬರೋಡ ಮಾತನಾಡಿ ಎಲ್ಲರೂ ಒಗ್ಗೂಡಿ ದೇವರ ಕೆಲಸವನ್ನು ಮಾಡಬೇಕು. ದೇವರ ವಿಧಿ ವಿಧಾನ ಕಾರ್ಯಗಳನ್ನು ಕ್ರಮ ಬದ್ಧವಾಗಿ ಮಾಡುತ್ತೇವೆ. ದೇವರು ಕೆಲಸ ಮಾಡಿದರೆ ಪ್ರತಿಫಲವನ್ನು ಭಗವಂತನು ನೀಡುತ್ತಾನೆ ಎಂದರು.
ದೇವಸ್ಥಾನದ ಪ್ರಧಾನ ಅರ್ಚಕ ರಘುರಾಮ್ ಭಟ್ ಮಠ, ಅರ್ಚಕ ರಾಘವೇಂದ್ರ ಭಟ್ ಮಠ, ಕಾಶಿ ಶೆಟ್ಟಿ ನವಶಕ್ತಿ, ಮಾಜಿ ಶಾಸಕ ಕೆ. ಪ್ರಭಾಕರ ಬಂಗೇರ, ವಿಜಯ ಕುಮಾರ್ ಶೆಟ್ಟಿ ಪಣಕಜೆ, ಮುಂಬೈ, ಸಂಪತ್ ಕುಮಾರ್ ಜೈನ್ ಪಡಂಗಡಿ, ಕಿರಾತ ಮೂರ್ತಿ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಗೋಪಾಲ ಶೆಟ್ಟಿ ಕೊರ್ಯಾರು, ಎಕ್ಸೆಲ್ ವಿದ್ಯಾಸಂಸ್ಥೆಯ ಅಧ್ಯಕ್ಷ ಸುಮಂತ್ ಕುಮಾರ್ ಜೈನ್, ವೆಂಕಟ್ರಾಯಮಲ್ಯ ಶಿವಗಿರಿ, ಕರುಣಾಕರ ಭಂಡಾರಿ, ಸಂಪತ್ ಕುಮಾರ್ ಜೈನ್, ಗಂಗಾಧರ ರಾವ್ ಕೇವುಡೇಲು, ಶಮಂತ್ ಕುಮಾರ್ ಜೈನ್ ಪಡಂಗಡಿ, ಪ್ರಶಾಂತ್ ಪಡಂಗಡಿ, ಪ್ರವೀಣ್ ಕುಮಾರ್ ಜೈನ್ ಪಾಡ್ಯಾರುಬೀಡು, ಸುಕೇಶ್ ಕುಮಾರ್ ಕಡಂಬು, ಕುವೆಟ್ಟು ಗ್ರಾ.ಪಂ. ಅಧ್ಯಕ್ಷೆ ಭಾರತಿ ಸುರೇಶ್ ಕುಮಾರ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.
ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪ್ರಭಾಕರ ಶೆಟ್ಟಿ ಉಪ್ಪಡ್ಕ ಸ್ವಾಗತಿಸಿ, ಬ್ರಹ್ಮಕಲಶೋತ್ಸವ ಸಮಿತಿಯ ಪ್ರಧಾನ ಕಾರ್ಯದರ್ಶಿ ಚಿದಾನಂದ ಇಡ್ಯ ವಂದಿಸಿ, ಕಾರ್ಯಕ್ರಮ ನಿರೂಪಿಸಿದರು.