Site icon Suddi Belthangady

ಗೋವಾ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಹೃದಯಾಘಾತದಿಂದ ಉಜಿರೆಯ ಚಂದ್ರಶೇಖರ್ ನಿಧನ

ಬೆಳ್ತಂಗಡಿ: ಉಜಿರೆಯ ಸಂಸ್ಕೃತ ವಿದ್ವಾಂಸರಾಗಿದ್ದ ದಿ.ಡಾ.ಇ.ಮಹಾಬಲ ಭಟ್ ರವರ ಪುತ್ರ ಚಂದ್ರಶೇಖರ್ (46ವ) ಗೋವಾದಲ್ಲಿ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.

ಗೋವಾದ ವರ್ಣ ರೈಲ್ವೆ ನಿಲ್ದಾಣದಲ್ಲಿ ಇವರು ಇಳಿಯಬೇಕಾಗಿದ್ದು, ಆದರೆ ಮಲಗಿದ ಸ್ಥಿತಿಯಲ್ಲೇ ಇದ್ದರು.ಅವರನ್ನು ರೈಲ್ವೆ ನಿಲ್ದಾಣದಲ್ಲಿ ಮಲಗಿಸಿ ರೈಲು ಮುಂದಕ್ಕೆ ಸಾಗಿತ್ತು ಎಂಬ ಮಾಹಿತಿಯನ್ನು ಕುಟುಂಬಸ್ಥರು ಸುದ್ದಿಗೆ ತಿಳಿಸಿರುತ್ತಾರೆ.

ಚಂದ್ರಶೇಖರ್ ರವರ ಆಧಾರ್ ಕಾರ್ಡ್ ಆಧಾರದ ಮೇಲೆ ಗೋವಾ ಪೊಲೀಸರು ಮಂಗಳೂರು ಪೊಲೀಸರ ಮುಖಾಂತರ ಕುಟುಂಬಸ್ಥರನ್ನು ಸಂಪರ್ಕಿಸಿ ಗುರುತು ಪತ್ತೆ ಹಚ್ಚಿದ್ದಾರೆ.

ಚಂದ್ರಶೇಖರ್ ರವರು ತಾಯಿ ಕಸ್ತೂರಿ ಎಂ.ಭಟ್, ಪತ್ನಿ ರಾಘವಿ ಮತ್ತು ಮಗಳನ್ನು ಅಗಲಿದ್ದಾರೆ.

Exit mobile version