ಪದ್ಮುಂಜ ಇಲ್ಲಿಯ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ವಾರ್ಷಿಕ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಕಣಿಯೂರು ಗ್ರಾಮ ಪಂಚಾಯತ್ ಅಧ್ಯಕ್ಷ ಯಶವಂತ ಎನ್ ರವರ ಅಧ್ಯಕ್ಷತೆಯಲ್ಲಿ ಜರಗಿತು.
ಪದ್ಮುಂಜ ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷ ಪುರುಷೋತ್ತಮ ಗೌಡ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದರು.ಬೆಳ್ತಂಗಡಿ ಸರಕಾರಿ ಪ್ರಥಮ ದರ್ಜೆ ಕಾಲೇಜು ಉಪನ್ಯಾಸಕ ರವಿ ಮಂಡ್ಯ ರವರು ಮುಖ್ಯ ಅತಿಥಿಗಳಾಗಿ ಮಾತನಾಡಿ ಮೊದಲನೆಯದಾಗಿ ಸರಕಾರಿ ಶಾಲೆಯಲ್ಲಿ ವ್ಯಾಸಂಗ ಮಾಡುವ ವಿದ್ಯಾರ್ಥಿಗಳಿಗೆ ಅಭಿನಂದನೆ ಸಲ್ಲಿಸಿದರು.
ಮುಂದುವರಿದು ಮಾತನಾಡಿದ ಅವರು ವಿದ್ಯಾರ್ಥಿಗಳು ವ್ಯಾಸಾಂಗ ಮಾಡುವ ಉದ್ದೇಶ ಕೇವಲ ಹೆಚ್ಚು ಹೆಚ್ಚು ಅಂಕ ಪಡೆಯುವುದು ಮಾತ್ರ ಸಾಧನೆಯಾಗಬಾರದು.ವಿದ್ಯೆಯೊಂದಿಗೆ ತನ್ನ ನಡೆ ನುಡಿ ವಸ್ತ್ರಾದಾರಣೆ ಆಚಾರ ವಿಚಾರಗಳು ಪಾಶ್ಚಾತ್ಯ ಸಂಸ್ಕೃತಿಯನ್ನು ಅನುಕರಣೆ ಮಾಡುವುದರ ಬದಲು ಸ್ವದೇಶಿ ಸಂಸ್ಕೃತಿಯನ್ನು ಅನುಕರಣೆ ಮಾಡುವುದರ ಮೂಲಕ ತಂದೆ ತಾಯಿ ವಿದ್ಯಾದಾನ ಮಾಡಿದ ಗುರು ಹಿರಿಯರ ಆಶೀರ್ವಾದ ಪಡೆಯವುದರ ಮೂಲಕ ಜೀವಿಸಿದರೆ ಮಾತ್ರ ನಿಮ್ಮ ಜೀವನ ಸಾರ್ಥಕ ಎಂದರು.
ವೇದಿಕೆಯಲ್ಲಿ ಉಪಾಧ್ಯಕ್ಷ ಪುರಂದರ ಶೆಟ್ಟಿ ಪಣೆಕ್ಕರ, ಸಿಎ ಬ್ಯಾಂಕ್ ಅಧ್ಯಕ್ಷ ರಕ್ಷಿತ್ ಶೆಟ್ಟಿ ಪಣೆಕ್ಕರ, ವಿದ್ಯಾರ್ಥಿ ನಾಯಕ ಅರುಣ್, ವಕೀಲರಾದ ಉದಯ ಬಿಕೆ, ಗ್ರಾ.ಪಂ ಮಾಜಿ ಅಧ್ಯಕ್ಷೆ ಗಾಯತ್ರಿ ಉಪಸ್ಥಿತರಿದ್ದರು.
ವಿವಿಧ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ ದಿವ್ಯಲತಾ ನಡೆಸಿಕೊಟ್ಟರು.ಪ್ರಾಂಶುಪಾಲರಾದ ಪ್ರಭಾ ರವರು ಸ್ವಾಗತಿಸಿದರು.ಉಪನ್ಯಾಸಕಿ ಶಂಕರಿಯವರ ಕಾರ್ಯಕ್ರಮ ನಿರೂಪಿಸಿದರು.