ಧರ್ಮಸ್ಥಳ: ಪೊದುಂಬಿಲ ನಾರ್ಯದ ಬನದಡ್ಡ ವಠಾರದಲ್ಲಿ ಸಾರ್ಲ ಪಟ್ಟದ ಸತ್ಯ ಕೊರಗಜ್ಜ ತುಳು ಯಕ್ಷಗಾನ ಬಯಲಾಟ ವಿಜಯಲಕ್ಷ್ಮಿ ಚಂದ್ರ ಕುಮಾರ್ ಶೆಟ್ಟಿಯವರ ನೇತೃತ್ವದಲ್ಲಿ ನಡೆಯಿತು.
ಐದು ವರ್ಷಗಳಿಂದ ನಾಗಶಕ್ತಿ ಮೇಳ ನಡೆಸಿಕೊಂಡು ಬಂದು ಕಳೆದ ಎರಡು ವರ್ಷಗಳಿಂದ ಮಂಗಳಾ ದೇವಿ ಮೇಳ ನಡೆಸುತ್ತಿರುವ ಸಂತೋಷ್ ಶೆಟ್ಟಿ ಕಡಲ ಇವರ ಮಾರ್ಗದರ್ಶನದಲ್ಲಿ ಮಂಗಳಾದೇವಿ ಮೇಳದ ಹೆಸರಾಂತ ಕಲಾವಿದರು ಯಕ್ಷಗಾನದಲ್ಲಿ ಉತ್ತಮ ಪ್ರದರ್ಶನ ನೀಡಿದರು.
ಪ್ರಧಾನ ಭಾಗವತ ಯೋಗೇಶ್ ಶರ್ಮ ಆಳದಂಗಡಿ ಇವರ ಪದ್ಯಕ್ಕೆ ಮನಸೋತ ಪ್ರೇಕ್ಷಕರು ಮಲ್ಲಿಗೆ ಹೂವಿನ ಹಾರ ಹಾಕಿ ಗೌರವಿಸಿದರು.