ಶಿಶಿಲ ಗ್ರಾಮದ ಕೋಟೆ ಬಾಗಿಲು ಸುರೇಶ್ ಗೌಡ ಎಂಬಾತ ತನ್ನ ಪತ್ನಿ ಮೋಹಿನಿ ಮತ್ತು ಮಗಳಿಗೆ ಮಾರಾಣಾಂತಿಕ ಹಲ್ಲೆ ನಡೆಸಿರುವುದನ್ನು ತೀವ್ರವಾಗಿ ಖಂಡಿಸಿ ಆರೋಪಿಗೆ ಕಠಿಣ ಶಿಕ್ಷೆ ಆಗುವಂತೆ ಮತ್ತು ಆರೋಪಿಗೆ ಗ್ರಾಮಸ್ಥರು ಯಾರೂ ಕೂಡ ಸಹಕಾರ ಮಾಡದಂತೆ ಆಗ್ರಹಿಸಿ ಶ್ರೀ ಮತ್ಸ್ಯಶಿವ ದುರ್ಗಾ ಭಜನಾ ಮಂಡಳಿಯ ವತಿಯಿಂದ ಶಿಶಿಲ ಗ್ರಾಮ ಪಂಚಾಯತ್ ನ ಅಧ್ಯಕ್ಷರು ಮತ್ತು ಅಭಿವೃದ್ದಿ ಅಧಿಕಾರಿಯವರ ಮೂಲಕ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಭಜನಾ ಮಂಡಳಿಯ ಪದಾಧಿಕಾರಿಗಳು ಮತ್ತು ಎಲ್ಲ ಸದಸ್ಯರು ಉಪಸ್ಥಿತರಿದ್ದರು.