ಅಳದಂಗಡಿ: ನಮ್ಮ ಮಾತೆರ್ಲ ಒಂಜೇ ಕಲಾ ತಂಡ ಅರುವ ಅಳದಂಗಡಿ ಇದರ ವತಿಯಿಂದ ಯಕ್ಷಗಾನ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಡಿ.18ರಂದು ಅಳದಂಗಡಿ ವಠಾರದಲ್ಲಿ ಜರಗಿತು.
ಕಾರ್ಯಕ್ರಮದ ಉದ್ಘಾಟನೆಯನ್ನು ಅಳದಂಗಡಿ ಅರಮನೆಯ ತಿಮ್ಮಣ್ಣರಸರಾದ ಡಾ| ಪದ್ಮಪ್ರಸಾದ ಅಜಿಲರು ನೆರವೇರಿಸಿದರು.ನಮ್ಮ ಮಾತೆಲ್ಲ ಒಂಜೆ ಕಲಾ ತಂಡ ಅರುವ ಇದರ ಗೌರವ ಅಧ್ಯಕ್ಷ ಡಾ।ಎನ್.ಎಂ.ತುಳುಪುಳೆ ಅಧ್ಯಕ್ಷತೆ ವಹಿಸಿದರು.
ಅಳದಂಗಡಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಸರಸ್ವತಿ, ಸೇನೆರೆಬೈಲ್ ಅಳದಂಗಡಿ ಡಾ| ಶಶಿಧರ ಡೋಂಗ್ರೆ, ಕೇಮೊಟ್ಟುಗುತ್ತು ಸುಲ್ಕೇರಿ ಕೆ.ಪ್ರಭಾಕರ ಮಂಜಿತ್ತಾಯ, ಅಳದಂಗಡಿ ವ್ಯ.ಸೆ.ಸ ಸಂಘ ಉಪಾಧ್ಯಕ್ಷ ಸದಾನಂದ ಪೂಜಾರಿ ಉಂಗಿಲಬೈಲು, ಪದ್ಮಾಂಬ ಕುಬಲಾಜಿ ನಾಗಕುಮಾರ್ ಜೈನ್, ಅಳದಂಗಡಿ ಸಮೃದ್ಧಿ ಕಾಂಪ್ಲೆಕ್ಸ್ ಮಾಲಕ ಶ್ರೀನಿವಾಸ್, ಉಜಿರೆ ಎನ್.ಎನ್ ಬಾಟ್ಲಿಂಗ್ ಕಂಪನಿ ಮಾಲಕ ನಿತ್ಯಾನಂದ ನಾವರ,
ಆರ್ & ಆರ್ ಬಹರೈನ್ ಮ್ಯಾನೇಜಿಂಗ್ ಡೈರೆಕ್ಟರ್ ರೋಯಸ್ಟನ್ ಫೆರ್ನಾಂಡಿಸ್, ಬೆಳ್ತಂಗಡಿ ಸುದ್ದಿ ಬಿಡುಗಡೆ ಪತ್ರಿಕೆಯ ಹಿರಿಯ ವರದಿಗಾರ ಹೆರಾಲ್ಡ್ ಪಿಂಟೋ, ಅಳದಂಗಡಿ ನೂರುಲ್ ಇಸ್ಲಾಂ ಜುಮ್ಮಾ ಮಸೀದಿ ಅಧ್ಯಕ್ಷ ಆಸೀಫ್ ಯಾಕುಬ್, ಪಿಲ್ಯ ಬದ್ರಿಯ ಜುಮ್ಮಾ ಮಸೀದಿ ಅಧ್ಯಕ್ಷ ಮಹಮ್ಮದ್ ಜಿ.ಕೆ. ಉಪಸ್ಥಿತರಿದ್ದರು.
ಸುಭಾಶ್ ಅರ್ವ (ಕಿರುತೆರೆ ನಿರ್ದೇಶಕರು), ಬಿ.ರವಿಚಂದ್ರ ಸಾಲ್ಯಾನ್ ಗುಂಡೂರಿ (ನಾಟಕ), ರಾಜ್ಯೋತ್ಸವ ಪ್ರಶಸ್ತಿ ವಿಜೇತರು ಬಿ.ನಾರಾಯಣ ಸಾಲ್ಯಾನ್ ಬರಾಯ (ಯಕ್ಷಗಾನ), ಸುಶಾಂತ್ ಎಸ್. ಪೂಜಾರಿ, ಕುದ್ಯಾಡಿ (ಕ್ರೀಡೆ), ಸತೀಶ್ ದೇವಾಡಿಗ, ಸುಲ್ಕೇರಿ ರಿಮೊಗ್ರು (ಕಂಬಳ), ರವಿ ಕುಮಾರ್, ಅರ್ವ (ಕಂಬಳ), ವಿನೋದ್ ಕುಮಾರ್ ಬಜ್ಪೆ ಸಂಚಾಲಕರು ಶ್ರೀ ಕ್ಷೇತ್ರ ಬಪ್ಪನಾಡು ಯಕ್ಷಗಾನ ಮಂಡಳಿ, ಸೂರಜ್ ಎಂ. ಸುಲ್ಕೇರಿ ಮೊಗ್ರು (ವಾಯುಸೇನೆ), ಮೋನಿಕಾ ನಿಲೋಫರ್ ಡಿಸೋಜ (ಕೃಷಿ ), ಜಾನ್ ಡಿಸೋಜ (ಮಾಸ್ಟರ್ ಗನ್ ), ಹುಸೇನ್ ಶಾಫಿ (ತಾಲೀಮ್ ಮಾಸ್ಟರ್) ಸಾಧಕರಿಗೆ ಸನ್ಮಾನಿಸಿ ಗೌರವಿಸಲಾಯಿತು.
ಅಧ್ಯಕ್ಷ ರವಿ ಪೂಜಾರಿ ಸುಲ್ಕೇರಿಮೊಗ್ರು, ಸಂಚಾಲಕ ಜನಾರ್ದನ ಕೊಡಂಗೆ, ಪ್ರಧಾನ ಕಾರ್ಯದರ್ಶಿ ಗಿರೀಶ್ ಕುಲಾಲ್ ನಾವರ, ಸಹ ಸಂಚಾಲಕ ಶುಭಕರ ಪೂಜಾರಿ ಕುದ್ಯಾಡಿ, ಕಾರ್ಯದರ್ಶಿ ಮಾರ್ಕು ಡಿಸೋಜ ದೈಲ, ಉಪಾಧ್ಯಕ್ಷ ನವೀನ್ ನಾವರ ಹಾಗೂ ಸರ್ವ ಸದಸ್ಯರು ನಮ್ಮ ಮಾತೆಲ್ಲ ಒಂಜೇ ಕಲಾತಂಡ ಅರುವ ಸದಸ್ಯರು ಉಪಸ್ಥಿತರಿದ್ದರು.
ಅಜಿತ್ ಕುಮಾರ್ ಕೊಕ್ರಾಡಿ ಕಾರ್ಯಕ್ರಮ ನಿರೂಪಿಸಿದರು.ಮುಲ್ಕಿ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ಕೃಪಾ ಪೋಷಿತ ದಶಾವತಾರ ಯಕ್ಷಗಾನ ಮಂಡಳಿ ಯಿಂದ ಮಾಯದಪ್ಪೆ ಮಂತ್ರ ಜಾವದೆ ಯಕ್ಷಗಾನ ಬಯಲಾಟ ನಡೆಯಿತು.