Site icon Suddi Belthangady

ದಯಾ ವಿಶೇಷ ಶಾಲೆಯಲ್ಲಿ ಕ್ರಿಸ್ಮಸ್ ಹಬ್ಬ ಆಚರಣೆ

ಲಾಯಿಲ: ಡಿ.19ರಂದು ದಯಾ ವಿಶೇಷ ಶಾಲೆಯಲ್ಲಿ ಕ್ರಿಸ್ಮಸ್ ಹಬ್ಬವನ್ನು ಆಚರಿಸಲಾಯಿತು.

ಈ ಕಾರ್ಯಕ್ರಮದಲ್ಲಿ ಅಧ್ಯಕ್ಷತೆಯನ್ನು ಕಪುಚಿನ್ ಕೃಷಿಕ್ ಸೇವಾ ಕೇಂದ್ರದ ನಿರ್ದೇಶಕರು ಹಾಗೂ ಸಂಚಾಲಕ ವಂ ಫಾದರ್ ವಿನೋದ್ ಮಸ್ಕರೇನ್ಹಸ್ ರವರು, ಮುಖ್ಯ ಅತಿಥಿಯಾಗಿ ವಂ ಫಾ. ಲೋಯೆಲ್ ಲೋಫೆಝ್ ಹಾಗೂ ಶಾಲೆಯ ಮುಖ್ಯ ಶಿಕ್ಷಕಿ ದಿವ್ಯರವರು, ಕ್ರಿಸ್ಮಸ್ ಆಚರಣೆಯ ಕೇಂದ್ರ ಬಿಂದು ಆದ ಸಾಂತ ಕ್ಲಾಸ್ ವೇದಿಕೆಯಲ್ಲಿ ಉಪಸ್ಧಿತರಿದ್ದರು.

ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ವ.ಫಾ ವಿನೋದ್ ಮಸ್ಕರೇನ್ಹಸ್ ರವರು ಕ್ರಿಸ್ತನ ಜನನ ಹಾಗೂ ಅವರ ಸರಳ ಜೀವನದ ಕುರಿತು ವಿಸ್ತರವಾಗಿ ತಿಳಿಸಿ ಕೇಕ್ ಕತ್ತರಿಸಿ ಸಿಹಿಯನ್ನು ಹಂಚುವುದರ ಮೂಲಕ ಕ್ರಿಸ್ಮಸ್ ಹಬ್ಬದ ಶುಭವನ್ನು ಕೊರಿದರು.

ಮುಖ್ಯ ಅತಿಥಿಯಾದ ವಂ.ಫಾ.ಲೋಯೆಲ್ ಲೋಫೆಝ್ ರವರು ಮಕ್ಕಳ ಬಗೆಗಿನ ಪ್ರೀತಿಯನ್ನು ವ್ಯಕ್ತಪಡಿಸಿ ಕ್ರಿಸ್ಮಸ್ ಸಂದೇಶವನ್ನು ಸಾರಿದರು, ಯೇಸು ಕ್ರೀಸ್ತರವರ ಹುಟ್ಟು ಹಬ್ಬವನ್ನು ಕೇಕ್ ಕತ್ತರಿಸುವ ಮೂಲಕ ಶಾಲೆಗಳಲ್ಲಿ, ಚರ್ಚಗಳಲ್ಲಿ ಆಚರಿಸುತ್ತೇವೆ ಆದರೆ ವಿಶೇಷ ಮಕ್ಕಳೊಂದಿಗೆ ಆಚರಿಸುವ ಇಂದಿನ ಹಬ್ಬ ತುಂಬ ವಿಶಿಷ್ಠವಾಗಿದೆ, ಸರ್ವಶಕ್ತನಾದ ದೇವರು ನಮ್ಮೆಲ್ಲಾರನ್ನು ಆಶೀರ್ವಾದಿಸಲಿ ಎಂದು ಶುಭಕೊರಿದರು.

ದಯಾ ಶಾಲೆಯ ಮಕ್ಕಳು ಯೇಸು ಕ್ರಿಸ್ತನ ಜನನವನ್ನು ರೂಪಕ ನೃತ್ಯದ ಮೂಲಕ ಪ್ರದರ್ಶಿಸಿದರು.

ಕಾರ್ಯಕ್ರಮವನ್ನು ಕುಮಾರಿ ಸ್ವಾತಿ ಇವರು ನಿರೂಪಿಸಿ, ರಶ್ಮಿ ವಂದಿಸಿದರು.

Exit mobile version