Site icon Suddi Belthangady

ನಿಟ್ಟಡೆ ಸ.ಉ.ಪ್ರಾಥಮಿಕ ಶಾಲಾ ವಾರ್ಷಿಕೋತ್ಸವ

ನಿಟ್ಟಡೆ: ಸರ್ಕಾರಿ ಉನ್ನತಿಕರಿಸಿದ ಪ್ರಾಥಮಿಕ ಶಾಲೆ ನಿಟ್ಟಡೆ ಶಾಲಾ ವಾರ್ಷಿಕೋತ್ಸವ ಡಿ.16ರಂದು ವಿಜೃಂಭಣೆಯಿಂದ ನೆರವೇರಿತು.

ಶಾಲಾ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಮಹಮ್ಮದ್ ಅಶ್ರಫ್ ಧ್ವಜಾರೋಹಣ ಕಾರ್ಯಕ್ರಮ ನೆರವೇರಿಸಿದರು.ನಂತರ ಶಾಲೆಯ ಸೇವಾದಳ ಶಾಖೆಯ ಮಕ್ಕಳಿಂದ ಕವಾಯಿತು ಪ್ರದರ್ಶನ ನಡೆಯಿತು.

ನಂತರದ ಸಭಾ ಕಾರ್ಯಕ್ರಮದ ಉದ್ಘಾಟನೆಯನ್ನು ಕುಕ್ಕೆಡಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಅನಿತಾ ನೆರವೇರಿಸಿ ಶುಭ ಕೋರಿದರು.ಸಹ ಶಿಕ್ಷಕಿ ಅನಿತಾ ಸ್ವಾಗತಿಸಿದರು.ಪ್ರಭಾರ ಮುಖ್ಯ ಶಿಕ್ಷಕಿ ಆರತಿ ಶಾಲಾ ಶೈಕ್ಷಣಿಕ ವರದಿಯನ್ನು ವಾಚಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಲಾ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಮಹಮ್ಮದ್ ಅಶ್ರಫ್ ಅವರ ನೇತೃತ್ವದಲ್ಲಿ ವಾರ್ಷಿಕೋತ್ಸವದ ಅಂಗವಾಗಿ ಮಕ್ಕಳಿಗೆ ನಡೆದ ಶೈಕ್ಷಣಿಕ ಮತ್ತು ಆಟೋಟ ಸ್ಪರ್ಧೆಗಳಲ್ಲಿ ವಿಜೇತರಾದ 201 ಮಕ್ಕಳಿಗೆ ಬಹುಮಾನ ವಿತರಣಾ ಕಾರ್ಯಕ್ರಮ ನಡೆಸಲಾಯಿತು.ಇದೇ ಸಂದರ್ಭದಲ್ಲಿ ಪೋಷಕರಿಗೆ ಹಳೆಯ ವಿದ್ಯಾರ್ಥಿಗಳಿಗೆ ಮತ್ತು ಶಿಕ್ಷಕರಿಗೂ ಕೂಡ ಏರ್ಪಡಿಸಿದ್ದ ಸ್ಪರ್ಧೆಗಳಲ್ಲಿ ಬಹುಮಾನ ಗೆದ್ದವರನ್ನು ಅಭಿನಂದಿಸಲಾಯಿತು.

ವೇದಿಕೆಯಲ್ಲಿ ಶಾಲಾಭಿವೃದ್ಧಿ ಸಮಿತಿಯ ಉಪಾಧ್ಯಕ್ಷರು ಮತ್ತು ಗ್ರಾಮ ಪಂಚಾಯತ್ ಸದಸ್ಯರು ಆದ ರಜನಿ ಉಪಸ್ಥಿತರಿದ್ದರು.ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಗ್ರಾಮ ಪಂಚಾಯತ್ ಸದಸ್ಯರಾದ ತೇಜಾಕ್ಷಿ ಗುಣವತಿ ಪಾಲ್ಗೊಂಡಿದ್ದರು.ಶಿಕ್ಷಣ ಇಲಾಖೆಯ ಕ್ಷೇತ್ರದ ಸಮನ್ವಯಧಿಕಾರಿ ಮೋಹನ್ ಕುಮಾರ್ ಹಾಗೂ ಶಿಕ್ಷಣ ಸಂಯೋಜಕರಾದ ಸಿದ್ಧಲಿಂಗ ಸ್ವಾಮಿ ಇಲಾಖೆ ಪರವಾಗಿ ಉಪಸ್ಥಿತರಿದ್ದರು.

ಸಂಜೆಯ ಕಾರ್ಯಕ್ರಮದಲ್ಲಿ ಪ್ರಭಾರ ಕ್ಷೇತ್ರ ಶಿಕ್ಷಣಾಧಿಕಾರಿ ತಾರಾಕೇಸರಿ ಭಾಗವಹಿಸಿದ್ದರು.ಶಾಲೆಯ ಹಳೆ ವಿದ್ಯಾರ್ಥಿ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಶೇಖರ್ ಕುಕ್ಕೇಡಿ, ಮಾಜಿ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಅಶೋಕ್ ವೇದಿಕೆಯಲ್ಲಿದ್ದರು.

ಊರಿನ ಹಿರಿಯರಾದ ಸುಂದರ್ ಅಮೈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.ಸ್ಥಳೀಯ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಭರತ್ ವೇದಿಕೆಯಲ್ಲಿ ಅಲಂಕರಿಸಿದ್ದರು.

ಶಾಲಾ ಅಭಿವೃದ್ಧಿ ಸಮಿತಿಯ ಪದ ನಿಮಿತ್ತ ಸದಸ್ಯ, ಗ್ರಾಮ ಪಂಚಾಯತ್ ಸದಸ್ಯರಾದ ಜನಾರ್ಧನ ಪೂಜಾರಿ ವೇದಿಕೆಯಲ್ಲಿದ್ದು ಹಿತ ನುಡಿಗಳನ್ನು ನುಡಿದರು.ಸತೀಶ್ ಹೆಗಡೆ ದಾನಿಗಳು ವೇದಿಕೆಯನ್ನು ಅಲಂಕರಿಸಿದ್ದರು.ತಾಯಂದಿರ ಸಮಿತಿಯ ಅಧ್ಯಕ್ಷ ಶಕುಂತಲಾ ವೇದಿಕೆಯಲ್ಲಿದ್ದರು.ಶಾಲಾ ನಾಯಕ ದೀಪೇಶ್ ಮಕ್ಕಳ ಪರವಾಗಿ ವೇದಿಕೆಯಲ್ಲಿದ್ದನು.

ಇದೇ ಸಂದರ್ಭದಲ್ಲಿ ಕೆ.ಎಚ್.ಯೂ.ಸೆ.ಫ್ ನಿವೃತ್ತ ಸಹಾಯಕ ಪೊಲೀಸ್ ಉಪನಿರೀಕ್ಷಕರು ಮೂಡುಬಿದ್ರೆ, ಜಾನಕಿ ನಿವೃತ್ತ ಅಂಗನವಾಡಿ ಶಿಕ್ಷಕಿ, ನಾಗರತ್ನ ವರ್ಗಾವಣೆಗೊಂಡ ಶಿಕ್ಷಕಿ, ಸುನಿಲ್ ನಿವೃತ್ತ ಸೈನಿಕರು ಸುನಿಲ್ ಮತ್ತು ಕೃಷ್ಣ ಪ್ರಸಾದ್ ಭಾರತೀಯ ವಾಯುಸೇನೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವವರು ಇವರನ್ನು ಗೌರವ ಪೂರ್ವಕವಾಗಿ ಸನ್ಮಾನಿಸಲಾಯಿತು.

ಶಾಲಾಭಿವೃದ್ಧಿ ಸಮಿತಿಯ ಸದಸ್ಯರು, ತಾಯಂದಿರು, ಸಮಿತಿಯ ಸದಸ್ಯರು ಸಂಪೂರ್ಣವಾಗಿ ತಮ್ಮನ್ನು ಕಾರ್ಯಕ್ರಮದಲ್ಲಿ ತೊಡಗಿಸಿಕೊಂಡಿದ್ದರು.ಶಾಲಾ ಶಿಕ್ಷಕ ವೃಂದ ಲೀನಾ, ನವ್ಯ, ದಿವ್ಯ, ಮಾಲತಿ, ಜಯಶ್ರೀ ಸನ್ಮಾನಿತರ ವರದಿ ವಾಚಿಸಿದರು.

ಕಾರ್ಯಕ್ರಮವನ್ನು ಅಚ್ಚುಗಟ್ಟಾಗಿ ಸ್ಮಿತಾ ಮತ್ತು ಗಣೇಶ್ ನಿರೂಪಿಸಿದರು.ರಜನಿ ಅವರ ವಂದನಾರ್ಪಣೆಯೊಂದಿಗೆ ಬೆಳಗಿನ ಸಭಾ ಕಾರ್ಯಕ್ರಮವನ್ನು ಮುಕ್ತಾಯಗೊಳಿಸಲಾಯಿತು.ಸಂಜೆ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಅಂಗನವಾಡಿ ಮತ್ತು ನಮ್ಮ ಶಾಲಾ ಮಕ್ಕಳು ವಿವಿಧ ನೃತ್ಯ ಪ್ರಕಾರಗಳ ಮೂಲಕ ಮೆರಗು ನೀಡಿದರು.ಗುಬ್ಬಿಗೂಡು ಎಂಬ ನಮ್ಮ ಶಾಲಾ ಮಕ್ಕಳ ನಾಟಕದೊಂದಿಗೆ ವಾರ್ಷಿಕೋತ್ಸವ ಸಂಪನ್ನಗೊಂಡಿತು.

Exit mobile version