Site icon Suddi Belthangady

ತೆಂಕಕಾರಂದೂರು ಗ್ರಾಮವನ್ನು ಬಿಟ್ಟು ಹೋಗದ ಚಿರತೆ: ಜನತೆ ಕಂಗಾಲು

ತೆಂಕಕಾರಂದೂರು: ಕಳೆದ ಐದಾರು ತಿಂಗಳಿನಿಂದ ಮುಂಡೂರು, ಕೋಟಿಕಟ್ಟೆ, ಕಾಂತಿಜಾಲು, ಕೇರಿಯಾರು, ಮುಂತಾದ ಕಡೆಗಳಲ್ಲಿ ರಾಜರೋಷವಾಗಿ ತಿರುಗಾಡುತ್ತಿದ್ದ ಹಾಗೂ ಹಲವಾರು ದನ ಕರು ನಾಯಿಗಳನ್ನು ತಿಂದು ಮುಗಿಸಿ ಚಿರತೆ ಇನ್ನೂ ಬೋನಿಗೆ ಬಿದ್ದಿಲ್ಲ ಎಂಬುದು ನಾಗರಿಕರಲ್ಲಿ ಮನೆ ಮಾಡಿದ ಆತಂಕ.

ಸದ್ರಿ ಚಿರತೆ ಇಲ್ಲಿ ಸಾಕು ಪ್ರಾಣಿಗಳೂ ಮಾತ್ರವಲ್ಲದೆ ಮನುಷ್ಯನ ಮೇಲೂ ಯಾವುದೇ ಸಂದರ್ಭದಲ್ಲೂ ದಾಳಿ ಮಾಡಬಹುದು ಎಂಬುದು ಜನರಲ್ಲಿ ರುವ ಆತಂಕ. ಶಾಲಾ ಕಾಲೇಜುಗಳಿಗೆ ಹೋಗುವ ಮಕ್ಕಳು ಹಳ್ಳಿ ಕಡೆ ನಡೆದುಕೊಂಡು ಹೋಗುವ ಜನರು ತುಂಬಾ ಜಾಗರೂಕರಾಗಬೇಕಿದೆ ಎಂಬುದು ಇದೀಗ ಆ ಪರಿಸರದ ಎಲ್ಲರೂ ಅಲ್ಲಲ್ಲಿ ಮಾತನಾಡಿಕೊಳ್ಳುತ್ತಿರುವ ಮಾತುಗಳು.

ಅರಣ್ಯ ಇಲಾಖೆಯ ಬಗ್ಗೆ ಜನರ ಆಕ್ರೋಶ: ಈ ಬಗ್ಗೆ ಅರಣ್ಯ ಇಲಾಖೆಯ ಗಮನಕ್ಕೆ ಪದೇ ಪದೇ ತಿಳಿಸಿದರೂ ಹಂತಕ ಚಿರತೆಯನ್ನು ಸೆರೆ ಹಿಡಿಯುವ ವಿಷಯದಲ್ಲಿ ಅವರ ಯತ್ನ ಸಂಪೂರ್ಣ ವಿಫಲಗೊಂಡಿದೆ ಚಿರತೆ ಈಗಲೂ ತಿರುಗಾಡುತ್ತಿದೆ ಎಂದು ಆ ಭಾಗದ ಜನರು ಆಲವತ್ತುಕೊಂಡಿದ್ದಾರೆ

Exit mobile version