ಉಜಿರೆ: ಕರ್ನಾಟಕ ಅರೆ ಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಹಾಗೂ ತಾಲೂಕು ಅರೆ ಭಾಷೆ ಅಭಿಮಾನಿ ಬಳಗದ ವತಿಯಿಂದ ಅರೆ ಭಾಷೆ ದಿನಾಚರಣೆಯನ್ನು ಉಜಿರೆಯ ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ಆಚರಿಸಲಾಯಿತು.
ಪದವಿ ಪೂರ್ವ ಶಿಕ್ಷಣ ಇಲಾಖೆಯ ನಿವೃತ್ತ ಉಪನಿರ್ದೇಶಕಿ ಶೀಲಾವತಿ ಕೊಳಂಬೆ ಕಾರ್ಯಕ್ರಮ ಉದ್ಘಾಟಿಸಿ, ಅರೆ ಭಾಷೆ ಅಥವಾ ಗೌಡ ಕನ್ನಡ ವೈಶಿಷ್ಟ್ಯತೆಯನ್ನು ಹಾಗೂ ಅದು ಬೆಳೆದು ಬಂದ ದಾರಿಯನ್ನು ತಿಳಿಸಿದರು.
ಯೆನೆಪೋಯ ಆಸ್ಪತ್ರೆಯ ಯೋಗ ಹಾಗೂ ವಿಜ್ಞಾನ ಕಾಲೇಜಿನ ಪ್ರಿನ್ಸಿಪಾಲ್ ಡಾ.ಪುನೀತ್ ರಾಘವೇಂದ್ರ ಅವರ ಮಿಣ್ ಪುಳಿ ಎಂಬ ಕಥಾ ಸಂಕಲನ ಬಿಡುಗಡೆಗೊಂಡಿತು.
ಬೆಳಾಲು ಗ್ರಾ.ಪಂ ಅಧ್ಯಕ್ಷೆ ವಿದ್ಯಾ ಶ್ರೀನಿವಾಸ, ಕೊಯ್ಯೂರು ಗ್ರಾಪಂ ಅಧ್ಯಕ್ಷೆ ದಯಾಮಣಿ ರವೀಂದ್ರನಾಥ್, ಚಾರ್ಮಾಡಿ ಗ್ರಾಪಂ ಅಧ್ಯಕ್ಷೆ ಶಾರದಾ ಹಾಗೂ ಸುಧೀರ್ಘಕಾಲ ತಾಲೂಕು ವೈದ್ಯಾಧಿಕಾರಿಯಾಗಿ ಸೇವೆ ಸಲ್ಲಿಸಿದ ಡಾ.ಚಂದ್ರಕಾಂತ್ ಅವರನ್ನು ಸನ್ಮಾನಿಸಲಾಯಿತು.ಸನ್ಮಾನಿತರು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು.ಸಮಾಜದ ಬಂಧುಗಳಿಗೆ ಒಳಾಂಗಣ ಆಟೋಟ ಸ್ಪರ್ದೆಗಳನ್ನು ಏರ್ಪಡಿಸಲಾಗಿತ್ತು.
ಅರೆ ಭಾಷೆ ಅಭಿಮಾನಿ ಬಳಗದ ಅಧ್ಯಕ್ಷೆ ಲೋಕೇಶ್ವರಿ ವಿನಯ ಚಂದ್ರ ಅಧ್ಯಕ್ಷತೆ ವಹಿಸಿದ್ದರು.ಉಪಾಧ್ಯಕ್ಷೆ ಕಮಲಾಕ್ಷಿ ಶಿವಯ್ಯ ಗೌಡ, ಸವಿತಾ ಜಯದೇವ್, ಅಶೋಕ್ ಕುಮಾರ್, ಆನಂದ ಗೌಡ ಮತ್ತಿತರರು ಉಪಸ್ಥಿತರಿದ್ದರು.
ಕಾರ್ಯದರ್ಶಿ ಉಷಾ ಲಕ್ಷ್ಮಣ್ ಸ್ವಾಗತಿಸಿದರು.ಜತೆ ಕಾರ್ಯದರ್ಶಿ ಹರ್ಷಲತಾ ವಂದಿಸಿದರು.