ಬೆಳಾಲು: ಇಲ್ಲಿಯ ಅನಂತೋಡಿ ಶ್ರೀ ಅನಂತಪದ್ಮನಾಭ ದೇವಸ್ಥಾನದ ವಾರ್ಷಿಕ ಜಾತ್ರೆ ಹಾಗೂ ಪರಿವಾರ ದೈವಗಳ ನರ್ತನ ಸೇವೆ ಡಿ.25 ಮತ್ತು 26 ರಂದು ವಿವಿಧ ವೈದಿಕ, ಧಾರ್ಮಿಕ, ಸಾಂಸ್ಕೃಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.
ಡಿ.25 ರಂದು ಬೆಳಿಗ್ಗೆ ತಂತ್ರಿಗಳ ಸ್ವಾಗತ, ದೇವತಾ ಪ್ರಾರ್ಥನೆ, ಗಣಹೋಮ, ತೋರಣ ಮುಹೂರ್ತ, ಉಗ್ರಾಣ ಮುಹೂರ್ತ, ಊರ ಭಕ್ತಾಧಿಗಳಿಂದ ಬೆಳಾಲು ಪೇಟೆಯಿಂದ ಭವ್ಯ ಮೆರವಣಿಗೆಯೊಂದಿಗೆ ಹಸಿರುವಾಣಿ ಸಮರ್ಪಣೆ, ಬಳಿಕ ಅನಂತಪದ್ಮನಾಭ ಮಹಿಳಾ ಕುಣಿತಾ ಭಜನಾ ತಂಡ ಮತ್ತು ಶ್ರೀ ಅನಂತೇಶ್ವರ ಭಜನಾ ಮಂಡಳಿಯಿಂದ ಭಜನೆ, ದೇವರಿಗೆ ಪಂಚಾಮೃತ ಅಭಿಷೇಕ, ಪವಮಾನ
ಕಲಶಾಭಿಷೇಕ, ಪ್ರಸನ್ನ ಪೂಜೆ, ಶ್ರೀ ನಾಗ ದೇವರಿಗೆ ಕಲಶಾಭಿಷೇಕ, ತನು ಸಮರ್ಪಣೆ, ಪರಿವಾರ ದೈವಗಳಿಗೆ ಕಲಶಾಭಿಷೇಕ, ಪರ್ವ ತಂಬಿಲ ಮದ್ಯಾಹ್ನ ಮಹಾ ಪೂಜೆ, ಅನ್ನ ಸಂತರ್ಪಣೆ, ಊರವರಿಂದ ವಿಶೇಷ ಸೇವೆ ಶ್ರೀ ಮಹಾ ವಿಷ್ಣುಯಾಗ, ವಿಷ್ಣು ಸಹಸ್ರನಾಮ ಪಾರಾಯಣ, ರಾತ್ರಿ ಪೂಜೆ ಹಾಗೂ ಶ್ರೀ ದೇವರಿಗೆ ರಂಗ ಪೂಜೆ, ದೇವರ ಬಲಿ ಹೊರಟು ಭೂತಬಲಿ ಉತ್ಸವ. ವಸಂತಕಟ್ಟೆ ಪೂಜೆ, ಮಹಾಪೂಜೆ, ರಾತ್ರಿ ಸಾಂಸ್ಕೃತಿಕ ಕಾರ್ಯಕ್ರಮ ವಿಜಯ ಕುಮಾರ್ ಕೊಡಿಯಾಲ ಬೈಲ್ ನಿರ್ದೇಶನದಲ್ಲಿ ಶಿವದೂತೆ ಗುಳಿಗ ತುಳು ನಾಟಕ ಪ್ರದರ್ಶನಗೊಳ್ಳಲಿದೆ.
ಡಿ.26 ಬೆಳಿಗ್ಗೆ ಗಣಪತಿ ಹೋಮ, ಬಳಿಕ ದೇವರ ಬಲಿ ಹೊರಟು ಉತ್ಸವ, ದರ್ಶನ ಬಲಿ, ಬಟ್ಟಲು ಕಾಣಿಕೆ,ಸಿರಿ ಮುಡಿ ಗಂಧ ಪ್ರಸಾದ ವಿತರಣೆ ಮಧ್ಯಾಹ್ನ ಮಹಾ ಪೂಜೆ, ಅನ್ನ ಸಂತರ್ಪಣೆ, ಸಂಜೆ ಶ್ರೀ ದುರ್ಗಾ ಪೂಜೆ, ರಾತ್ರಿ ಪೂಜೆ, ಪ್ರಸನ್ನ ರಂಗ ಪೂಜೆ ಬಳಿಕ ಧಾರ್ಮಿಕ ಸಭೆ, ನಂತರ ಪರಿವಾರ ದೈವಗಳಾದ ಶ್ರೀ ರಕ್ತೇಶ್ವರಿ, ಭೈರವ, ಕಲ್ಲುರ್ಟಿ, ಪಂಜುರ್ಲಿ ದೈವಗಳಿಗೆ ಸಿರಿಸಿಂಗಾರ ನರ್ತನ ಸೇವೆ ನಡೆಯಲಿದೆ ಎಂದು ದೇವಸ್ಥಾನದ ಆಡಳಿತ ಮೊಕ್ತೇಸರ ಜೀವಂದರ ಕುಮಾರ್ ಜೈನ್, ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಶ್ರೀನಿವಾಸ ಗೌಡ, ಆಸ್ರಣ್ಣ ಗಿರೀಶ್ ಬಾರಿತ್ತಾಯ, ಜಾತ್ರ ಸಮಿತಿಯ ಪ್ರಧಾನ ಸಂಚಾಲಕ ದೇಜಪ್ಪ ಗೌಡ ಅರಣೆಮಾರು ತಿಳಿಸಿದ್ದಾರೆ.