ಮೇಲಂತಬೆಟ್ಟು: ದ.ಕ.ಜಿ.ಪ.ಹಿರಿಯ ಪ್ರಾಥಮಿಕ ಶಾಲೆ ಮೇಲಂತಬೆಟ್ಟು ಪ್ರಾರಂಭಗೊಂಡು 100 ವರ್ಷ ಪೂರೈಸಿದ ಹಿನ್ನಲೆ ಡಿ.22 ಮತ್ತು 23 ರಂದು ಶತಮಾನೋತ್ಸವ ವಿವಿಧ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ ಎಂದು ಶಾಲಾ ಶತಮಾನೋತ್ಸವ ಸಮಿತಿ ಅಧ್ಯಕ್ಷ ಕೆ.ಎಸ್.ಯೋಗೀಶ್ ಕುಮಾರ್ ನಡಕ್ಕರ ಹೇಳಿದರು.ಅವರು ಡಿ.18 ರಂದು ಶಾಲೆಯಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
1923 ಜನವರಿ 23 ರಂದು ಪ್ರಾರಂಭವಾದ ಈ ಶಾಲೆಯಲ್ಲಿ ಅನೇಕರು ಇಲ್ಲಿ ವಿದ್ಯೆ ಪಡೆದಿದ್ದಾರೆ.ಶಾಲಾ ನವೀಕರಣದ ಬಗ್ಗೆ ರೂ.23 ಲಕ್ಷದ ಅಂದಾಜು ಹಲವು ಯೋಜನೆ ಹಮ್ಮಿಕೊಳ್ಳಲಾಗಿದೆ. ವಿಧಾನ ಪರಿಷತ್ ಶಾಸಕ, ಈ ಶಾಲಾ ಹಳೆ ವಿದ್ಯಾರ್ಥಿ ಕೆ.ಹರೀಶ್ ಕುಮಾರ್ ರೂ.10 ಲಕ್ಷ, ಬಿ.ಕೆ.ಹರಿಪ್ರಸಾದ್ ರೂ.5 ಲಕ್ಷ ನೀಡುವ ಭರವಸೆ ನೀಡಿದ್ದಾರೆ.ಸಚಿವ ಮಧು ಬಂಗಾರಪ್ಪ ಹೊಸ ಶಾಲಾ ಕಟ್ಟಡ ನಿರ್ಮಾಣಕ್ಕೆ ರೂ.20 ಲಕ್ಷ ಅನುದಾನದ ಭರವಸೆ ನೀಡಿದ್ದಾರೆ.ಶತಮಾನೋತ್ಸವದ ಅಂಗವಾಗಿ ಹಳೆ ಕಟ್ಟಡ ದುರಸ್ಥಿ, ರಂಗ ಮಂದಿರ, ಶೌಚಾಲಯ ಕಾಮಗಾರಿ ಮಾಡಲಾಗಿದೆ.ಶತಮಾನೋತ್ಸವ ವಿವಿಧ ಗಣ್ಯರ ಉಪಸ್ಥಿತಿಯಲ್ಲಿ ನಡೆಯಲಿದ್ದು ಈ ಸಂದರ್ಭದಲ್ಲಿ “ನಿಶಾನ್” ಸ್ಮರಣೆ ಸಂಚಿಕೆ ಬಿಡುಗಡೆಗೊಳ್ಳಲಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಶಾಲಾ ಮುಖ್ಯ ಶಿಕ್ಷಕಿ ರೂಪ ಎಂ.ಬಿ., ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಸಚಿನ್ ಕುಮಾರ್ ನೂಜೋಡಿ, ಎಸ್ ಡಿ ಎಂ ಸಿ ಅಧ್ಯಕ್ಷ ಪ್ರವೀಣ್, ಶಾಲಾ ಶತಮಾನೋತ್ಸವ ಸಮಿತಿಯ ಉಪಾಧ್ಯಕ್ಷೆ ಜೇಸಿಂತಾ ಮೋನಿಸ್, ಗ್ರಾಮ ಪಂಚಾಯತ್ ಅಧ್ಯಕ್ಷೆ ಸವಿತಾ, ಸಮಿತಿಯ ಜೊತೆ ಕಾರ್ಯದರ್ಶಿ, ಕೋಶಾಧಿಕಾರಿ ದಮಯಂತಿ, ಧರ್ಮದರ್ಶಿ ಯೋಗೀಶ್ ಪೂಜಾರಿ, ಹರ್ಷ ಹೆಚ್.ಆರ್, ಶಿಕ್ಷಕ ವಿಜಯ ಕುಮಾರ್ ಉಪಸ್ಥಿತರಿದ್ದರು.