ಕುಕ್ಕೇಡಿ: ಶ್ರೀ ಶಾರದಾಂಬ ಮಹಿಳಾ ಭಜನಾ ಸಮಿತಿ ಶಾರದ ನಗರ ಕುಕ್ಕೇಡಿ, ಬುಳೆಕ್ಕರ ಇದರ ವಾರ್ಷಿಕ ಮಹಾಸಭೆಯು ಸಮಿತಿಯ ಅಧ್ಯಕ್ಷೆ ವಸಂತಿ ಸುರೇಶ್ ಕುಲಾಲ್ರವರ ಅಧ್ಯಕ್ಷತೆಯಲ್ಲಿ ಜರಗಿತು.
ವೇದಿಕೆಯಲ್ಲಿ ಭಜನಾ ಮಂಡಳಿಯ ಅಧ್ಯಕ್ಷ ಪ್ರಕಾಶ್ ಪೂಜಾರಿ, ಕಾರ್ಯಧ್ಯಕ್ಷ ವಿಶ್ವನಾಥ್ ದೇವಾಡಿಗ, ಕುಕ್ಕೇಡಿ ಗ್ರಾ.ಪಂ ಸದಸ್ಯ ಗೋಪಾಲ್ ಶೆಟ್ಟಿ ಹಾಗೂ ಹಾಲು ಉತ್ಪಾದಕ ಸಂಘದ ನಿರ್ದೇಶಕ ದಯಾನಂದ್ ಶೆಟ್ಟಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಅಧ್ಯಕ್ಷರಾಗಿ ಶಕುಂತಳಾ ಕೃಷ್ಣಪ್ಪ ದೇವಾಡಿಗ, ಕಾರ್ಯದರ್ಶಿಯಾಗಿ ಹರ್ಷಿತ ಸುನಿಲ್ ಶೆಟ್ಟಿ, ಜೊತೆ ಕಾರ್ಯದರ್ಶಿಯಾಗಿ ಪ್ರಾಪ್ತಿ, ಉಪಾಧ್ಯಕ್ಷರಾಗಿ ರೇಖಾ, ವಿಶ್ವನಾಥ್ ದೇವಾಡಿಗ, ವೇದಾವತಿ ತುಂಗಪ್ಪ ಪೂಜಾರಿ, ಗೌರವ ಸಲಹೆಗಾರರಾಗಿ ವಸಂತಿ ಸುರೇಶ್, ಮಿತ್ರ ಸುರೇಶ್, ಕಲ್ಯಾಣಿ ದರ್ಬೆ ಹಾಗೂ 40 ಮಂದಿ ಸದಸ್ಯೆಯರನ್ನು ಮುಂದಿನ ಸಾಲಿನ ಪದಾಧಿಕರಿಗಳನ್ನಾಗಿ ಆಯ್ಕೆ ಮಾಡಲಾಯಿತು.