Site icon Suddi Belthangady

ಕಲ್ಮಂಜ: ವಿಕಸಿತ ಭಾರತ ಸಂಕಲ್ಪ ಯಾತ್ರೆಗೆ ಗ್ರಾಮಸ್ಥರಿಂದ ಸ್ವಾಗತ

ಕಲ್ಮಂಜ: ವಿಕಸಿತ ಭಾರತ ಸಂಕಲ್ಪ ಯಾತ್ರೆಯು ಕಲ್ಮಂಜ ಗ್ರಾಮ ಪಂಚಾಯತ್ ಗೆ ಡಿ.15ರಂದು ತಲುಪಿತು.ಈ ಯಾತ್ರಾ ರಥವನ್ನು ಕಲ್ಮಂಜ ಗ್ರಾಮಸ್ಥರು ಅದ್ದೂರಿಯಾಗಿ ಸ್ವಾಗತಿಸಿದರು ಹಾಗೂ ಈ ಯಾತ್ರೆಯಲ್ಲಿ ಕೇಂದ್ರ ಸರ್ಕಾರದ ಪ್ರಧಾನ ಮಂತ್ರಿ ಯೋಜನೆಯ ಹಲವು ಸವಲತ್ತುಗಳ ಮಾಹಿತಿ ಹಾಗೂ ಕಾರ್ಯಕ್ರಮಗಳ ಬಗ್ಗೆ ಜನರಿಗೆ ಮಾಹಿತಿಯನ್ನು ತಿಳಿಸಲಾಯಿತು ಹಾಗೂ ಅನಿಲ ಸಂಪರ್ಕ ಪಡೆದವರ EKYC, ಉಜ್ಜಲ ಯೋಜನೆ ನೋಂದಾವಣೆಯು ನಡೆಯಿತು.

ಈ ಮಾಹಿತಿ ಕಾರ್ಯಕ್ರಮದ ನೂಡಲ್ ಏಜೆನ್ಸಿಯಾಗಿ ಉಜಿರೆ ಯೂನಿಯನ್ ಬ್ಯಾಂಕ್ ಇದರ ಮ್ಯಾನೇಜರವರ ನೇತೃತ್ವದಲ್ಲಿ ಹಾಗೂ ಕಲ್ಮಂಜ ಗ್ರಾಮ ಪಂಚಾಯತ್ ಸಹಯೋಗದೊಂದಿಗೆ ಗ್ರಾಮ ಪಂಚಾಯತಿ ಸಭಾಭವನದಲ್ಲಿ ನೆರವೇರಿತು.

ಈ ಸಂದರ್ಭದಲ್ಲಿ ಯೂನಿಯನ್ ಬ್ಯಾಂಕ್ ಮ್ಯಾನೇಜರ್ ನಿತಿನ್. ಯು. ಮಾಹಿತಿಯನ್ನು ನೀಡಿದರು ಹಾಗೂ ಕಲ್ಮಂಜ ಗ್ರಾಮದ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ ಐದು ಜನರನ್ನು ಗುರುತಿಸಲಾಯಿತು.

ಕ್ರೀಡಾ ಕ್ಷೇತ್ರದಲ್ಲಿ ಶೀನಾ ಯಕ್ಷಗಾನ ಕಲಾವಿದರಾದ ಕೊಳ್ತಿಗೆ ನಾರಾಯಣ ಗೌಡ ಹಾಗೂ ಅಂಚೆ ಇಲಾಖೆಯಲ್ಲಿ ಸೇವೆ ಸಲ್ಲಿಸಿದ ದೇವಪ್ಪ ಆಚಾರ್ಯ ಹಾಗೂ ಕಲ್ಮಂಜ ಗ್ರಾಮದ ಪ್ರಗತಿಪರ ಕೃಷಿಕರಾದ ವಿಶ್ವನಾಥ ಗೌಡ ಹೂoಕ್ರೊಟ್ಟು ಹಾಗೂ ಸರಕಾರಿ ಪ್ರೌಢ ಶಿಕ್ಷಣ ಕಲ್ಮಂಜ ಇದರ 2022-23 ನೇ ಸಾಲಿನ ಎಸ್ ಎಸ್ ಎಲ್ ಸಿ ವಿದ್ಯಾರ್ಥಿ ಕಾರ್ತಿಕ್ ಇವರುಗಳನ್ನು ಸನ್ಮಾನಿಸಲಾಯಿತು ಹಾಗೂ ಕೇಂದ್ರ ಸರಕಾರದ ಯೋಜನೆಯ ಮಾಹಿತಿಯನ್ನು ವಾಹನದಲ್ಲಿ ವಿಡಿಯೋ ಪ್ರದರ್ಶಿಸಿ ಸಾರ್ವಜನಿಕರಿಗೆ ಮಾಹಿತಿ ನೀಡಲಾಯಿತು.

ಈ ಕಾರ್ಯಕ್ರಮದಲ್ಲಿ ಅಧ್ಯಕ್ಷತೆಯನ್ನು ವಿಮಲಾ ಇವರು ವಹಿಸಿಕೊಂಡಿದ್ದರು ಹಾಗೂ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಪೂರ್ಣಿಮಾ ಸಿಎ ಬ್ಯಾಂಕ್ ಮುಂಡಾಜೆ ಇದರ ನಿರ್ದೇಶಕರಾದ ರಾಘವ ಕಲ್ಮಂಜ ಹಾಗೂ ಶಶಿಧರ್ ಕಲ್ಮಂಜ ಇವರು ಉಪಸ್ಥಿತರಿದ್ದರು ಹಾಗೂ ಗ್ರಾಮ ಪಂಚಾಯತ್ ಸದಸ್ಯರು ಉಪಸ್ಥಿತರಿದ್ದರು. ಆಶಾ ಕಾರ್ಯಕರ್ತೆಯರು ಅಂಗನವಾಡಿ ಶಿಕ್ಷಕಿಯರು ಭಾಗವಹಿಸಿದರು.ಸುಮಾರು 400ಕ್ಕೂ ಮಿಕ್ಕಿ ಗ್ರಾಮಸ್ಥರು ಮಾಹಿತಿಯನ್ನು ಪಡೆದುಕೊಂಡರು.ಕಾರ್ಯಕ್ರಮದ ಕೊನೆಯಲ್ಲಿ ಧನ್ಯವಾದನ್ನು ಗ್ರಾಮ ಪಂಚಾಯತ್ ಅಧಿಕಾರಿ ಇಮ್ತಿಯಾಜ್ k ನೀಡಿದರು.

Exit mobile version