Site icon Suddi Belthangady

ಎಲ್.ಸಿ.ಆರ್ ವಿದ್ಯಾಸಂಸ್ಥೆಯಲ್ಲಿ ವಾರ್ಷಿಕ ಪ್ರತಿಭಾ ಸಂಭ್ರಮ

ಕಕ್ಯಪದವು: ಎಲ್ ಸಿ ಆರ್ ವಿದ್ಯಾಸಂಸ್ಥೆಯಲ್ಲಿ ಡಿ.15ರಂದು ಪ್ರತಿಭಾ ಸಂಭ್ರಮವು ವಿಜೃಂಭನೆಯಿಂದ ನಡೆಯಿತು.

ಮುತ್ತಪ್ಪ ಗೌಡ ಅಗ್ಪಲ ನಿವೃತ್ತ ಮುಖ್ಯ ಶಿಕ್ಷಕರು ದೀಪ ಪ್ರಜ್ವಲಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ, ಸಂಸ್ಥೆಯ ಬಗ್ಗೆ ಶ್ಲಾಘನೀಯ ಮಾತುಗಳನ್ನಾಡಿ ಹೆತ್ತವರು ಮೌಲ್ಯಾಧಾರಿತ ಶಿಕ್ಷಣಕ್ಕೆ ಒತ್ತು ನೀಡಬೇಕು ಜೊತೆಗೆ ಬದುಕುವ ಶಿಕ್ಷಣ ಪ್ರತಿಯೊಂದು ಮಗುವಿಗೂ ಸಿಗಬೇಕು ಎಂದರು.

ಮುಖ್ಯ ಅತಿಥಿಗಳಾಗಿ ರೇವತಿ ಮುದಲಾಡಿ ಅಧ್ಯಕ್ಷರು, ಗ್ರಾಮ ಪಂಚಾಯತ್ ಉಳಿ, ಜಗನ್ನಾಥ ಶೆಟ್ಟಿ ನಿವೃತ್ತ ಮುಖ್ಯ ಶಿಕ್ಷಕರು, ಶ್ರೀ ಪಂಚದುರ್ಗಾ ಪ್ರೌಢ ಶಾಲೆ ಕಕ್ಯಬೀಡು, ಮಹಮ್ಮದ್ ಹನೀಫ್, ಮುಖ್ಯ ಶಿಕ್ಷಕರು, ಸರಕಾರಿ ಪ್ರೌಢ ಶಾಲೆ ಸರಳೀಕಟ್ಟೆ, ಶಿವಾನಂದ ಮೈರಾ, ಸಿ.ಐ.ಡಿ ಅರಣ್ಯ ಸಂಚಾರಿ ದಳ ಮಂಗಳೂರು ಉಪಸ್ಥಿತರಿದ್ದು ವಿಧ್ಯಾರ್ಥಿಗಳಿಗೆ ಶುಭ ಹಾರೈಸಿದರು.

ಸಂಸ್ಥೆಯ ಸಂಚಾಲಕರಾದ ಬಬಿತಾ ಆರ್ ನಾಥ್ ಅಧ್ಯಕ್ಷತೆಯನ್ನು ವಹಿಸಿ ವಿದ್ಯಾರ್ಥಿಗಳ ಸಾಧನೆಯ‌ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸಿದರು.

ಕಾರ್ಯದರ್ಶಿಗಳಾದ ಶಿವಾನಿ.ಆರ್.ನಾಥ್, ಸಂಯೋಜಕರಾದ ಯಶವಂತ್ ಜಿ.ನಾಯಕ್, ಪ್ರಾಂಶುಪಾಲರಾದ ಜೋಸ್ಟನ್ ಲೋಬೋ, ಮುಖ್ಯೋಪಾಧ್ಯಾಯಿನಿ ಕು| ವಿಜಯಾ.ಕೆ ಇವರು ಗೌರವ ಉಪಸ್ಥಿತರಿದ್ದರು.

ವಾರ್ಷಿಕೋತ್ಸವದ ಪ್ರಯುಕ್ತ ಮಕ್ಕಳಿಗೆ ನಡೆಸಿದ ವಿವಿಧ ಸಾಂಸ್ಕೃತಿಕ ಸ್ಪರ್ಧೆಗಳ ಮತ್ತು ಕ್ರೀಡಾ ಚಟುವಟಿಕೆಗಳ ಪ್ರಶಸ್ತಿ ಪ್ರಧಾನ ಮಾಡಲಾಯಿತು.ವಾಣಿಜ್ಯ ಶಾಸ್ತ್ರ ಉಪನ್ಯಾಸಕಿ ಚೈತ್ರಾ ಸ್ವಾಗತಿಸಿ, ಸಹಶಿಕ್ಷಕಿ ಪ್ರಿಯತ ವಂದಿಸಿ, ವಾಣಿಜ್ಯಶಾಸ್ತ ಉಪನ್ಯಾಸಕಿ ಸಮೀರಾ ಮತ್ತು ಸಹಶಿಕ್ಷಕಿ ರಾಜಶ್ರೀ ಕಾರ್ಯಕ್ರಮ ನಿರೂಪಿಸಿದರು.

Exit mobile version