ಶಿರ್ಲಾಲು: ಶಿರ್ಲಾಲು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಜೀರ್ಣೋದ್ಧಾರಕ್ಕೆ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರು ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ನೀಡಿದ ರೂ 3 ಲಕ್ಷ ದೇಣಿಗೆ ಹಸ್ತಾಂತರವನ್ನು ಗುರುವಾಯಕೆರೆ ಯೋಜನಾ ಕಚೇರಿ ವ್ಯಾಪ್ತಿಯ ಯೋಜನಾಧಿಕಾರಿ ದಯಾನಂದ ಪೂಜಾರಿ ದೇವಸ್ಥಾನದ ಸಮಿತಿಯ ಪದಾಧಿಕಾರಿಗಳಿಗೆ ಹಸ್ತಾಂತರಿಸಿದರು.
ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಪ್ರಶಾಂತ ಪಾರೆಂಕಿ, ಮಹಾಲಿಂಗೇಶ್ವರ ದೇವಸ್ಥಾನ ಸೇವಾ ಸಮಿತಿ ಅಧ್ಯಕ್ಷ ಆನಂದ ಸಾಲಿಯನ್, ಸೇವಾ ಸಮಿತಿ ಸದಸ್ಯ ಲತಾ ಮತ್ತು ಮಹಿಳಾ ಮಂಡಲ ಅಧ್ಯಕ್ಷೆ ಜಯಂತಿ, ಮಹಿಳಾ ಮಂಡಲ ಕಾರ್ಯದರ್ಶಿ ಮಲ್ಲಿಕಾ, ವಲಯ ಮೇಲ್ವಿಚಾರಕಿ ಸುಮಂಗಲ, ಒಕ್ಕೂಟದ ಅಧ್ಯಕ್ಷ ಕೃಷ್ಣಪ್ಪ ಕೋಟ್ಯನ್ ಮತ್ತು ಪ್ರವೀಣ್ ಪಾಲನೆ, ಸೇವಾ ಪ್ರತಿನಿಧಿ ಚಂದ್ರಾವತಿ, ಜನಜಾಗೃತಿ ಅಧ್ಯಕ್ಷ ನೀಲಯ ಗೌಡ ಹಾಗೂ ಊರಿನ ಗಣ್ಯರು ಉಪಸ್ಥಿತರಿದ್ದರು.