ವೇಣೂರು: ದ.ಕ. ಹಾಲು ಒಕ್ಕೂಟ ಮಂಗಳೂರು ಇದರ ಗುಂಡೂರಿ ಹಾಲು ಉತ್ಪಾದಕರ ಸಹಕಾರ ಸಂಘದ ನೇತೃತ್ವದಲ್ಲಿ ಕುಕ್ಕೇಡಿ, ಪಡಂಗಡಿ, ಪೆರಿಂಜೆ ಅಂಡಿಂಜೆ, ಕರಿಮಣೇಲು, ಮೂಡುಕೋಡಿ, ಹೊಸಪಟ್ಣ, ಗಾಂಧಿನಗರ, ಆರಂಬೋಡಿ ಹಾಲು ಉತ್ಪಾದಕರ ಸಹಕಾರಿ ಸಂಘಗಳು ಹಾಗೂ ವೇಣೂರು ಪ್ರಾ.ಕೃ.ಪ.ಸ. ಸಂಘದ ಸಹಯೋಗದಲ್ಲಿ ಮಿಶ್ರತಳಿ ಹೆಣ್ಣು ಕರುಗಳ ಪ್ರದರ್ಶನ, ವಿಚಾರಗೋಷ್ಠಿ ಹಾಗೂ ಹೈನುಗಾರಿಕಾ ಪರಿಕರಗಳ ಪ್ರದರ್ಶನ ಕಾರ್ಯಕ್ರಮವು ಗುಂಡೂರಿಯ ಶ್ರೀ ಸತ್ಯನಾರಾಯಣ ಭಜನ ಮಂದಿರದ ವಠಾರದಲ್ಲಿ ಜರಗಿತು.
ಮಿಶ್ರತಳಿ ಹೆಣ್ಣು ಕರುಗಳ ಪ್ರದರ್ಶನದ ಉದ್ಘಾಟನೆಯನ್ನು ತುಂಬೆದಲೆಕ್ಕಿ ಭಜನ ಮಂಡಳಿ ಅಧ್ಯಕ್ಷ ರಮೇಶ್ ಪೂಜಾರಿ ಪಡ್ಡಾಯಿಮಜಲು ನೆರವೇರಿಸಿದರು. ವಿವಿಧ ತಳಿಯ ಸುಮಾರು ೧೮೫ ಕರುಗಳು ಪ್ರದರ್ಶನದಲ್ಲಿ ಪಾಲ್ಗೊಂಡಿದ್ದವು.
ವಿಚಾರಗೋಷ್ಠಿಯಲ್ಲಿ ಜಾನುವಾರುಗಳ ನಿರ್ವಹಣೆ ಹಾಗೂ ಲಾಭದಾಯಕ ಹೈನುಗಾರಿಕೆ ಬಗ್ಗೆ ಹಾಲು ಒಕ್ಕೂಟದ ವ್ಯವಸ್ಥಾಪಕ ಡಾ| ರಾಮಕೃಷ್ಣ ಭಟ್, ಜಾನುವಾರುಗಳಲ್ಲಿ ಬಂಜೆತನ ಸಮಸ್ಯೆ ಹಾಗೂ ಹೆಣ್ಣು ಕರುಗಳ ಸಾಕಾಣಿಕೆ ಬಗ್ಗೆ ಒಕ್ಕೂಟದ ಉಪ ವ್ಯವಸ್ಥಾಪಕರಾದ ಡಾ| ಚಂದ್ರಶೇಖರ್ ಭಟ್, ಹಸಿರುಮೇವು ಹಾಗೂ ಪಶು ಆಹಾರದ ಬಳಕೆ ಬಗ್ಗೆ ಒಕ್ಕೂಟದ ವಿಸ್ತರಣಾಧಿಕಾರಿ ನಿರಂಜನ ಬಿ.ಎಸ್. ಮಾಹಿತಿ ನೀಡಿದರು. ಒಕ್ಕೂಟದ ಉಪವ್ಯವಸ್ಥಾಪಕರಾದ ಡಾ| ಸತೀಶ್ ರಾವ್ ಕಾರ್ಯಕ್ರಮ ಸಂಯೋಜಿಸಿದ್ದರು.
ಸಮಾರೋಪ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗುಂಡೂರಿ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಕುಮಾರು ಹೆಗ್ಡೆ ಅಧ್ಯಕ್ಷತೆ ವಹಿಸಿದ್ದರು. ಒಕ್ಕೂಟದ ನಿರ್ದೇಶಕರುಗಳಾದ ಬಿ. ನಿರಂಜನ ಭಾವಂತಬೆಟ್ಟು, ಪದ್ಮನಾಭ ಶೆಟ್ಟಿ ಅರ್ಕಜೆ, ವ್ಯವಸ್ಥಾಪಕ ನಿರ್ದೇಶಕ ಡಿ. ವಿವೇಕ್, ಪಶು ಸಂಗೋಪನೆ ಇಲಾಖೆಯ ಡಾ| ದಿನೇಶ್, ವೇಣೂರು ಪ್ರಾ.ಕೃ.ಪ.ಸ. ಸಂಘದ ಅಧ್ಯಕ್ಷ ಸುಂದರ ಹೆಗ್ಡೆ ಬಿ.ಇ., ವಿವಿಧ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷರುಗಳಾದ ಪಿ. ದೇಜಪ್ಪ ಶೆಟ್ಟಿ ಕರಿಮಣೇಲು, ಮೋಹನ ಅಂಡಿಂಜೆ, ಸುಧಾಕರ ಪೂಜಾರಿ ಪೆರಿಂಜೆ, ಜಗದೀಶ್ ನಾಯಕ್ ಗಾಂಧಿನಗರ, ಪ್ರಭಾಕರ ಹುಲಿಮೇರು ಆರಂಬೋಡಿ, ನಿರ್ಮಲ್ ಕುಮಾರ್ ಕುಕ್ಕೇಡಿ, ಮ್ಯಾಕ್ಸಿಂ ಸಿಕ್ವೆರಾ ಪಡಂಗಡಿ, ಪ್ರಕಾಶ್ ಭಟ್ ಮೂಡುಕೋಡಿ, ಅಶೋಕ್ ಕಜಿಪಟ್ಟ ಹೊಸಪಟ್ಣ, ಗುಂಡೂರಿ ಸಂಘದ ಉಪಾಧ್ಯಕ್ಷ ಜೋಸ್ಲಿ ಫೆರ್ನಾಂಡಿಸ್, ಕಾರ್ಯದರ್ಶಿ ರಾಜು ಪೂಜಾರಿ, ವಿವಿಧ ಸಹಕಾರಿ ಸಂಘಗಳ ಕಾರ್ಯದರ್ಶಿಗಳು, ನಿರ್ದೇಶಕರುಗಳು ಉಪಸ್ಥಿತರಿದ್ದರು.
ಗುಂಡೂರಿ ಶ್ರೀ ಸತ್ಯನಾರಾಯಣ ಭಜನ ಮಂಡಳಿ ಅಧ್ಯಕ್ಷ ಪಿ. ರಮೇಶ್ ಪೂಜಾರಿ ಪಡ್ಡಾಯಿಮಜಲು ಸ್ವಾಗತಿಸಿ, ಉಪಾಧ್ಯಕ್ಷ ಹರೀಶ್ ಕುಮಾರ್ ಪೊಕ್ಕಿ ವಂದಿಸಿದರು. ವಿಸ್ತರಣಾಧಿಕಾರಿ ಸುಚಿತ್ರಾ ನಿರ್ವಹಿಸಿದರು.