Site icon Suddi Belthangady

ಸುಲ್ಕೇರಿಮೊಗ್ರು ಸ.ಹಿ.ಪ್ರಾ.ಶಾಲೆಯಲ್ಲಿ ಟಿ-ಶರ್ಟ್ ವಿತರಣೆ

ಸುಲ್ಕೇರಿಮೊಗ್ರು: ಸ.ಹಿ.ಪ್ರಾಥಮಿಕ ಶಾಲೆ ಸುಲ್ಕೇರಿಮೊಗ್ರು ಶಾಲಾ ಮಕ್ಕಳಿಗೆ ಪ್ರಸಿದ್ಧ ಕಂಪೆನಿಯಾದ ಅಮೃತ್ ಆರ್ಗ್ಯಾನಿಕ್ (ಸಾವಯವ) ಫರ್ಟಿಲೈಜರ್ ಚಿತ್ರದುರ್ಗ ಇವರು ಶಿಕ್ಷಕ ನಾಗಭೂಷಣ್ ಇವರ ಹುಟ್ಟು ಹಬ್ಬದ ಪರವಾಗಿ ಶಾಲಾ ಮಕ್ಕಳಿಗೆ ಟಿ-ಶರ್ಟ್ ನೀಡಬೇಕೆಂಬ ವಿನಂತಿ ಮೇರೆಗೆ ಸಂತೋಷದಿಂದ ಒಪ್ಪಿ ಶಾಲಾ ಎಲ್ಲಾ ಮಕ್ಕಳಿಗೆ, ಅಧ್ಯಾಪಕ ವೃಂದದವರಿಗೂ, ಅಡುಗೆ ಸಿಬ್ಬಂದಿಯವಾರಿಗೂ ಉಚಿತವಾಗಿ ನೀಡಿರುತ್ತಾರೆ.

ನಾಗಭೂಷಣ್ ಹುಟ್ಟುಹಬ್ಬ ಪ್ರಯುಕ್ತ ಶಾಲೆಯಲ್ಲಿ ಭಜನೆ ಕಾರ್ಯಕ್ರಮ ನಡೆಯಿತು.ನಂತರ ಸಭೆಯಲ್ಲಿ ಅಮೃತ್ ಆರ್ಗ್ಯಾನಿಕ್ ಕಂಪೆನಿಯ ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಸೇಲ್ಸ್ ಆಫೀಸರ್ ಪ್ರಶಾಂತರವರು ಸಾಂಕೇತಿಕವಾಗಿ ಟಿ-ಶರ್ಟ್ ನೀಡಿ ಶುಭ ಹಾರೈಸಿದರು.

ಸಭೆಯಲ್ಲಿ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಯ ಅಧ್ಯಕ್ಷೆ ರೇವತಿ, ಉಪಾದ್ಯಕ್ಷೆ ನಳಿನಿ, ಸದಸ್ಯರಾದ ಪ್ರೇಮ, ಅಂಗನವಾಡಿ ಸಹಾಯಕಿ ಪ್ರೇಮ, ಅಡಿಗೆ ಸಿಬ್ಬಂದಿ ಪುಷ್ಪ, ಲೀಲಾ, ಅಧ್ಯಾಪಕ ವೃಂದ ಉಪಸ್ಥಿತರಿದ್ದರು.

ಅಧ್ಯಾಪಿಕೆ ಶಾಂತಿ ಡಿಸೋಜ ಕಾರ್ಯಕ್ರಮ ನಿರೂಪಿಸಿದರು, ಪ್ರಾಸ್ತಾವಿಕವಾಗಿ ಅಧ್ಯಾಪಕ ನಾಗಭೂಷಣ್ ಮಾತಾಡಿ, ಮುಖ್ಯೋಪಾಧ್ಯಾಯರಾದ ಸುಬ್ರಹ್ಮಣ್ಯ ರವರು ಸ್ವಾಗತಿಸಿ, ಧನ್ಯವಾದವಿತ್ತರು.ಗೌರವ ಶಿಕ್ಷಕಿ ಶ್ವೇತಾ ಸಹಕರಿಸಿದರು.

Exit mobile version