ಲಾಯಿಲ: ಪ್ರಸನ್ನ ಕಾಲೇಜು ಆಫ್ ಫಾರ್ಮಸಿ ಲಾಯಿಲ ಬೆಳ್ತಂಗಡಿ ಇಲ್ಲಿನ ಸೆಕೆಂಡ್ ಮತ್ತು 4ನೇ ಸೆಮಿಸ್ಟರ್ ನ ವಿದ್ಯಾರ್ಥಿಗಳು ನವಂಬರ್ 2023ರಲ್ಲಿ ನಡೆದಂತಹ ರಾಜೀವ್ ಗಾಂಧಿ ಅರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ ಕರ್ನಾಟಕ, ಸೆಮಿಸ್ಟರ್ ಪರೀಕ್ಷೆಯಲ್ಲಿ ಉನ್ನತ ಅಂಕಗಳನ್ನು ಗಳಿಸಿ ತೇರ್ಗಡೆ ಗೊಂಡಿದ್ದಾರೆ.ಇನ್ನು ಸೆಕೆಂಡ್ ಸೆಮಿಸ್ಟರ್ ವಿದ್ಯಾರ್ಥಿಯಾಗಿರುವ ಅಮೃತಾ ಕೆ ಇವರು ಪ್ರಥಮ ಸ್ಥಾನ ಗಳಿಸಿದ್ದಾರೆ.
( 86.89%) ಹಾಗೂ ಸುಶ್ಮಿತಾ ಇವರು ದ್ವಿತೀಯ(82.34%)ಸ್ಥಾನ ಗಳಿಸಿದ್ದಾರೆ. ಹಾಗೆ ಮೂರನೇ ಸೆಮಿಸ್ಟರ್ ವಿದ್ಯಾರ್ಥಿನಿಯಾದ ದಿಯಾ ಇವರು ಪ್ರಥಮ (74.85%) ಸ್ಥಾನವನ್ನು ಪಡೆದಿದ್ದಾರೆ. ಹಾಗೂ ಫಾತಿಮತ್ ತಫಿಮಾ ಇವರು (74.7%) ದ್ವಿತೀಯ ಸ್ಥಾನವನ್ನು ಪಡೆದಿದ್ದಾರೆ. ಇನ್ನು ಒಟ್ಟಾರೆಯಾಗಿ 20 ಮಂದಿ ವಿದ್ಯಾರ್ಥಿಗಳು ಡಿಸ್ಟಿಂಕ್ಷನ್ ಸ್ಥಾನವನ್ನು ಪಡೆದು ಪ್ರಸನ್ನ ಕಾಲೇಜ್ ಆಫ್ ಫಾರ್ಮಸಿಯ ಉನ್ನತ ಮಟ್ಟಕ್ಕೆ ಏರಿಸಿದ್ದಾರೆ.
ಇವರಿಗೆ ಕಾಲೇಜು ಆಡಳಿತ ಮಂಡಳಿ, ಪ್ರಾಂಶುಪಾಲರು ಹಾಗೂ ಶಿಕ್ಷಕ ವೃಂದದಿಂದ ಅಭಿನಂದನೆ ಸಲ್ಲಿಸಿದೆ.