Site icon Suddi Belthangady

ಭಾರತೀಯ ರೆಡ್ ಕ್ರಾಸ್ ಜಿಲ್ಲಾ ಸಂಸ್ಥೆಯಿಂದ ಎಸ್.ಡಿ.ಎಂ ಆಂಗ್ಲ ಮಾಧ್ಯಮ ಶಾಲೆಗೆ ಅತ್ಯುತ್ತಮ ಶಾಲೆ ಪ್ರಶಸ್ತಿ

ಬೆಳ್ತಂಗಡಿ: ಭಾರತೀಯ ರೆಡ್ ಕ್ರಾಸ್  ಜಿಲ್ಲಾ ಸಂಸ್ದೆ ಮಂಗಳೂರು ಹಾಗೂ ಎಕ್ಸಲೆಂಟ್ ಮುಡಬಿದ್ರೆ ಇವರ ಜಂಟಿ ಆಶ್ರಯದಲ್ಲಿ ನಡೆದಂತಹ ಜೂನಿಯರ್ ರೆಡ್ ಕ್ರಾಸ್ ಸಮ್ಮೇಳನ 2023 ರಲ್ಲಿ ಎಸ್ ಡಿ ಎಂ ಆಂಗ್ಲ ಮಾಧ್ಯಮ ಶಾಲೆ ಧರ್ಮಸ್ಥಳ, ಇಲ್ಲಿಯ ಮುಖ್ಯ ಶಿಕ್ಷಕಿ ಪರಿಮಳ ಎಂ ವಿ ಯವರ ಮಾರ್ಗದರ್ಶನದಂತೆ ನಡೆಸಿದಂತಹ ತುಡಿತ ಕಾರ್ಯಕ್ರಮ, ಮಾನವೀಯ ನೆಲೆಯಲ್ಲಿ ಮಾಡಿರುವಂತಹ ರಕ್ತಪರೀಕ್ಷೆ ಹಾಗೂ ರಕ್ತದೊತ್ತಡ ಪರೀಕ್ಷೆಯ ಕಾರ್ಯಗಾರ, ಪ್ರಥಮ ಚಿಕಿತ್ಸೆ ತರಬೇತಿ, ಅಗತ್ಯ ವಸ್ತುಗಳ ಕಿಟ್ ವಿತರಣೆ  ಮೊದಲಾದ ಸೇವೆಯನ್ನು ಗುರುತಿಸಿ ಎಸ್ ಡಿ ಎಂ ಆಂಗ್ಲ ಮಾಧ್ಯಮ ಶಾಲೆಯನ್ನು ಅತ್ಯುತ್ತಮ ಜೂನಿಯರ್ ರೆಡ್ ಕ್ರಾಸ್ ಘಟಕವಾಗಿ ಜಿಲ್ಲಾ ಸಂಸ್ಥೆಯಿಂದ ಗುರುತಿಸಿಕೊಂಡಿದೆ.

ಹಾಗೆ ಅತ್ಯುತ್ತಮ ರೆಡ್ ಕ್ರಾಸ್ ಕೌನ್ಸಿಲರ್ ಆಗಿ ಸಹ ಶಿಕ್ಷಕಿ ಜ್ಯೋತಿ ಲಕ್ಷ್ಮಿಯವರನ್ನು ಜಿಲ್ಲಾ ರೆಡ್ ಕ್ರಾಸ್ ಜಿಲ್ಲಾ ಸಂಸ್ಥೆ ದಕ್ಷಿಣ ಕನ್ನಡ ದಿಂದ ಗುರುತಿಸಿಕೊಂಡು ಸನ್ಮಾನಿಸಲ್ಪಟ್ಟಿರುತ್ತಾರೆ.

Exit mobile version