ಧರ್ಮಸ್ಥಳ: ಶ್ರೀ ಕ್ಷೇತ್ರ ಧರ್ಮಸ್ಥಳದ ದೀಪೋತ್ಸವದ ಅಂಗವಾಗಿ ಡಿ.8 ರಂದು ಅಮೃತವರ್ಷಿಣಿ ಸಭಾಭವನದಲ್ಲಿ ಸರ್ವಧರ್ಮ ಸಮ್ಮೇಳನ 2023, 91 ನೇ ಅಧಿವೇಶನ ನಡೆಯಿತು.
ಕಾರ್ಯಕ್ರಮದ ಮೊದಲು ಮೆರವಣಿಗೆ ಮೂಲಕ ಅತಿಥಿಗಳ ಪ್ರವೇಶ ನಡೆದು ಉಜಿರೆ ಬಿ.ಎನ್.ವೈ.ಎಸ್. ಮತ್ತು ಶ್ರೀ ಧ.ಮಂ. ಮಹಾವಿದ್ಯಾಲಯದ ವಿದ್ಯಾರ್ಥಿಗಳು ಪ್ರಾರ್ಥಿಸಿದರು.
ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಸ್ವಾಗತಿಸಿದರು.
ಸಮ್ಮೇಳನದ ಉದ್ಘಾಟನೆಯನ್ನು ಬೆಂಗಳೂರು ಅಕಾಡೆಮಿ ಫಾರ್ ಕ್ರಿಯೇಟಿವ್ ಸ್ಥಾಪಕರು ಶ್ರೇಷ್ಠ ವಿದ್ವಾಂಶ ಡಾ. ಗುರುರಾಜ ಕರ್ಜಗಿ ನೆರವೇರಿಸಿದರು.
ಅಧ್ಯಕ್ಷತೆಯನ್ನು ವಹಿಸಿದ್ದ ತುಮಕೂರು ಶ್ರೀ ಕ್ಷೇತ್ರ ಸಿದ್ದಗಂಗಾ ಮಠದ ಶ್ರೀ ಸಿದ್ಧಲಿಂಗ ಸ್ವಾಮಿಗಳು ಭೈರವೇಶ್ವರ ಪುರಾಣ ಗ್ರಂಥ ಲೋಕಾರ್ಪಣೆಗೈದರು.
ಡಾ.ವಿ.ಬಿ.ಆರತಿ ಬೆಂಗಳೂರು, ಮಹಮ್ಮದಗೌಸ ಹವಾಲ್ದಾರ್, ವಿಜಯಪುರ, ಎಮ್ ಆರ್ ವೆಂಕಟೇಶ್, ಹಿರಿಯ ನ್ಯಾಯವಾದಿಗಳು ಉಪನ್ಯಾಸ ನೀಡಿದರು.ಶ್ರದ್ದಾ ಅಮಿತ್, ಉಪನ್ಯಾಸಕ ಸುನೀಲ್ ಪಂಡಿತ್ ಸನ್ಮಾನ ಪತ್ರ ವಾಚಿಸಿದರು. ಸ್ವಾಗತ ಸಮಿತಿಯ ಡಿ. ಸುರೇಂದ್ರ ಕುಮಾರ್, ಡಾ. ಹೇಮಾವತಿ ವಿ. ಹೆಗ್ಗಡೆ,ಡಿ. ಹರ್ಪೇಂದ್ರ ಕುಮಾರ್ ಉಪಸ್ಥಿತರಿದ್ದರು.
ಧರ್ಮಸ್ಥಳ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಶ್ರೀನಿವಾಸ ರಾವ್ ವಂದಿಸಿದರುಉಪನ್ಯಾಸಕ ಡಾ. ಶ್ರೀಧರ ಭಟ್ ನಿರೂಪಿಸಿದರು.