Site icon Suddi Belthangady

ಓಡಿಲ್ನಾಳ ದ.ಕ.ಜಿ.ಪಂ.ಉ.ಪ್ರಾ‌.ಶಾಲೆಯಲ್ಲಿ ಶಾಲಾ‌ ವಾರ್ಷಿಕೋತ್ಸವ ಸಾಂಸ್ಕೃತಿಕ ಸಿಂಚನ

ಕುವೆಟ್ಟು: ಸರಕಾರಿ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿದ ಮಕ್ಕಳು ಉನ್ನತ ಸ್ಥಾನವನ್ನು ಪಡೆಯುತ್ತಾರೆ ಎಂಬುವುದು ಇಲ್ಲಿಯ ಓಡಿಲ್ನಾಳ ಶಾಲೆಯ ಹಿರಿಯ ವಿದ್ಯಾರ್ಥಿಗಳೇ ಸಾಕ್ಷಿ.ಸರಕಾರಿ ಶಾಲೆಯನ್ನು ಉಳಿಸಿ ಬೆಳೆಸುವ‌ ಕರ್ತವ್ಯ ನಮ್ಮದಾಗಬೇಕು ಎಂದು ಶಾಸಕ ಹರೀಶ್ ಪೂಂಜ ಹೇಳಿದರು.

ಅವರು ಡಿ.9 ರಂದು ಶಾಲಾ ಶಿಕ್ಷಣ ಇಲಾಖೆ ದ.ಕ.ಜಿ.ಪಂ.ಉ.ಪ್ರಾ‌.ಶಾಲೆ ಓಡಿಲ್ನಾಳ ಇದರ ಶಾಲಾ‌ ವಾರ್ಷಿಕೋತ್ಸವ ಸಾಂಸ್ಕೃತಿಕ ಸಿಂಚನ ಕಾರ್ಯಕ್ರಮದ ಬೆಳಗ್ಗಿನ ಸಭಾ ಕಾರ್ಯಮದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿ ಮಾತಾನಾಡಿದರು.

ಕುವೆಟ್ಟು ಗ್ರಾ.ಪಂ.ಅಧ್ಯಕ್ಷೆ ಬಾರತಿ ಎಸ್.ಶೆಟ್ಟಿ ಧ್ವಜಾರೋಹಣ ಮಾಡಿದರು.ಕಾರ್ಯಕ್ರಮವನ್ನು‌ ದೀಪ ಬೆಳಗಿಸಿ ಚಾಲನೆ ನೀಡಿದರು ಶಾಲಾ ಎಸ್.ಡಿ.ಯಂ.ಸಿ ಉಪಾಧ್ಯಕ್ಷೆ ಸಮೀಮ ಅಧ್ಯಕ್ಷತೆ ವಹಿಸಿದ್ದರು.

ವೇದಿಕೆಯಲ್ಲಿ ಎಸ್.ಡಿ.ಯಂ‌.ಸಿ ಅಧ್ಯಕ್ಷ ರಾಜ್ ಪ್ರಕಾಶ್ ಶೆಟ್ಟಿ ಪಡ್ಡೈಲು, ಕುವೆಟ್ಟು ಗ್ರಾ.ಪಂ.ಸದಸ್ಯೆ ಆನಂದಿ, ಹಿರಿಯ ವಿಧ್ಯಾರ್ಥಿ ಸಂಘದ ಅಧ್ಯಕ್ಷ‌ ಅರುಣ್ ಸುಮಿತ್ ಡಿಸೋಜ, ವರ್ಗಾವಣೆಗೊಂಡ ಶಿಕ್ಷಕಿ ದೀಪಾವತಿ, ಹಿರಿಯ ವಿಧ್ಯಾರ್ಥಿ ಪದ್ಮಾವತಿ, ವಿದ್ಯಾರ್ಥಿ ನಾಯಕ ಪಾಝಿಲ್, ಶಾಲಾ ಮುಖ್ಯೋಪಾಧ್ಯಾಯನಿ ಉಷಾ ಪಿ.ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ನೂತನವಾಗಿ ನಿರ್ಮಿಸಿದ ಶಾಲಾ ಅವರಣದ ಗೇಟು, ಅಂಗಣಕ್ಕೆ ಅಳವಡಿಸಿದ ಇಂಟರ್ ಲಾಕ್, ಗಾರ್ಡನ್ ಇದರ ಉದ್ಘಾಟನೆ ನಡೆಯಿತು.ದೈಹಿಕ ಶಿಕ್ಷಕ ನಿರಂಜನ್, ಸಹ ಶಿಕ್ಷಕಿ ಸುಜಾತ, ಶಿಕ್ಷಕಿ ಶಾರದ ಮಣಿ, ನಯನ ಟಿ, ಜಿಪಿಟಿ ಶಿಕ್ಷಕಿ ವೀಣಾ ಕೆ.ಎಸ್, ವಿಲ್ಮೆಂಟ್ ಸೆರಾವೋ, ಜಿಪಿಟಿ ಶಿಕ್ಷಕಿ ಅಕ್ಷತಾ, ಗೌರವ ಶಿಕ್ಷಕಿ ಸುಮತಿ ಹಾಗೂ ಎಸ್.ಡಿ.ಯಂ.ಸಿ ಸದಸ್ಯರು, ಅಕ್ಷರ ದಾಸೋಹ ಸಿಬಂದಿಗಳು ಸಹಕರಿಸಿದರು.

Exit mobile version