Site icon Suddi Belthangady

ಧರ್ಮಸ್ಥಳ ‘ಗ್ರಾಮ ಏಕ ಬಳಕೆ ಪ್ಲಾಸ್ಟಿಕ್ ಮುಕ್ತ ಗ್ರಾಮ’ ವಸ್ತು ಪ್ರದರ್ಶನ ಮಳಿಗೆ ಸಹಾಯಕ ಕಮಿಷನರ್ ಪುತ್ತೂರು ಗಿರೀಶ್ ನಂದನ್ ಇವರಿಂದ ಉದ್ಘಾಟನೆ

ಧರ್ಮಸ್ಥಳ: ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥ ಸ್ವಾಮಿ ಲಕ್ಷ ದೀಪೋತ್ಸವದ ವಸ್ತು ಪ್ರದರ್ಶನ ಮಂಟಪದ ಸ್ಟಾಲ್ ನಂಬರ್ 156 ರಲ್ಲಿ ಕಲ್ಪವೃಕ್ಷ ಟೀಮ್ ಮೂಡುಬಿದ್ರೆ ಹಾಗೂ ಧರ್ಮಸ್ಥಳ ಗ್ರಾಮ್ ಪಂಚಾಯತ್ ಏಕಬಳಕೆ ಪ್ಲಾಸ್ಟಿಕ್ ಮುಕ್ತ ಗ್ರಾಮ, ಇದರ ಪ್ಲಾಸ್ಟಿಕ್ ಉತ್ಪನ್ನಗಳ ಬದಲಿ ವ್ಯವಸ್ಥೆಯ ಸಾಮಾಗ್ರಿಗಳ ಪ್ರದರ್ಶನ ಮಳಿಗೆ ಮಾಡಲಾಗಿದೆ.

ಸದ್ರಿ ಮಳಿಗೆಯನ್ನು ಸಹಾಯಕ ಕಮಿಷನರ್ ಪುತ್ತೂರು ಗಿರೀಶ್ ನಂದನ್ ಇವರು ದೀಪ ಬೆಳಗಿಸುವುದರ ಮೂಲಕ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಧರ್ಮಸ್ಥಳ ಗ್ರಾಮ ಪಂಚಾಯತ್ ಅಧ್ಯಕ್ಷೆ ವಿಮಲಾ, ಉಪಾಧ್ಯಕ್ಷ ಪಿ.ಶ್ರೀನಿವಾಸ್ ರಾವ್, ಗ್ರಾಮ ಪಂಚಾಯತ್ ಸದಸ್ಯರಾದ ರಾಮಚಂದ್ರರಾವ್, ಶl ಸುನಿತಾ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಉಮೇಶ್ ಕೆ., ಪಂಚಾಯತ್ ಕಾರ್ಯದರ್ಶಿ ದಿನೇಶ್ ಎಂ, ಲೆಕ್ಕಸಹಾಯಕರಾದ ಪ್ರಮೀಳಾ, ಕ್ಷೇತ್ರದ ಆಪ್ತ ಕಾರ್ಯದರ್ಶಿ ವೀರು ಶೆಟ್ಟಿ, ಶ್ರೀ ಕ್ಷೇತ್ರ ಧರ್ಮಸ್ಥಳ ಮ್ಯಾನೇಜರ್ ಸುಭಾಷ್ಚಂದ್ರರಾಜ್, ಸಂಧ್ಯಾ ಭಟ್ ಮೂಡಬಿದ್ರೆ, ಗ್ರಾಮ ಪಂಚಾಯತ್ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.

Exit mobile version