ಧರ್ಮಸ್ಥಳ: ಶ್ರೀ ರಾಮಕ್ಷೇತ್ರ ಮಹಾಸಂಸ್ಥಾನಮ್ ಶ್ರೀ ರಾಮ ಸಮಿತಿ, ರಾಜ್ಯ ಆರ್ಯ ಈಡಿಗ ಆಟೋ ಚಾಲಕರ ಸಂಘದ ವತಿಯಿಂದ ಡಿ.3 ರಂದು ಬೆಂಗಳೂರು ಮಹಾಲಕ್ಷ್ಮಿ ಬಡಾವಣೆಯ ಗೆಳೆಯರ ಬಳಗದ ಡಾ.ರಾಜ್ ಕುಮಾರ್ ಸಭಾಂಗಣದಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ 169 ನೇ ಜಯಂತಿ ಮತ್ತು ಶ್ರೀ ರಾಮ ಕ್ಷೇತ್ರ ಮಹಾ ಸಂಸ್ಥಾನಮ್ ನ ಪೀಠಾಧಿಪತಿ ಸದ್ಗುರು ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಅವರಿಗೆ ಗುರುವಂದನಾ ಕಾರ್ಯಕ್ರಮ ನಡೆಯಿತು.
ಬಳಿಕ ಸಭೆಯನ್ನುದ್ದೇಶಿಸಿ ಸದ್ಗುರು ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರು ಆಶೀರ್ವಚನ ನೀಡಿ ಒಂದೇ ಮತ, ಒಂದೇ ಜಾತಿ, ಒಂದೇ ಕುಲ ಎಂಬ ನಾರಾಯಣ ಗುರುಗಳ ಸಂದೇಶ ಹಿಂದೆಂದಿಗಿಂತಲೂ ಇಂದು ಹೆಚ್ಚು ಪ್ರಸ್ತುತವಾಗಿದೆ.ನಾರಾಯಣ ಗುರುಗಳ ಸಂದೇಶವನ್ನೇ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಸಂವಿಧಾನದದಲ್ಲಿ ನಾರಾಯಣ ಗುರುಗಳ ಸಂದೇಶ ಮತ್ತು ಸಂವಿಧಾನದ ತತ್ವಗಳು ಸರಿಯಾಗಿ ಅನುಷ್ಠಾನಗೊಂಡರೆ ದೇಶದಲ್ಲಿ ಜಾತಿಪದ್ಧತಿ ಸಂಪೂರ್ಣವಾಗಿ ನಿರ್ಮೂಲನೆಯಾಗುತ್ತದೆ ಎಂದರು.
ರಾಜ್ಯ ಸರಕಾರದ ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವ ಮಂಕಾಳೆ ವೈದ್ಯ, ಉದ್ಯಮಿ ಗೋವಿಂದ ಬಾಬು ಪೂಜಾರಿ, ಕಾಂಗ್ರೆಸ್ ನಾಯಕ ಲಗ್ಗೆರೆ ನಾರಾಯಣಸ್ವಾಮಿ, ಮಂಗಳೂರು ಶ್ರೀ ನಾರಾಯಣಗುರು ಕಾಲೇಜಿನ ಉಪನ್ಯಾಸಕ ಕೇಶವ್ ಬಂಗೇರ ಧಾರ್ಮಿಕ ಉಪನ್ಯಾಸ ನೀಡಿದರು.
ಸಭೆಯಲ್ಲಿ ಹಿರಿಯ ನ್ಯಾಯವಾದಿ ಎ.ಕೆ.ವಸಂತ, ಕಾರ್ಯಕ್ರಮದ ಸಂಚಾಲಕರಾದ ಆಟೋ ಗಂಗಾಧರ, ಎಚ್.ಎಸ್. ಶ್ರೀವತ್ಸ, ಎಚ್.ರಾಜು ಪೂಜಾರಿ, ಭಟ್ಕಳ ನಾಮದಾರಿ ಸಂಘದ ಅಧ್ಯಕ್ಷ ಕೃಷ್ಣ ನಾಯ್ಕ, ಸುಬ್ರಾಯ ನಾಯ್ಕ ಹಾಗೂ ಈಶ್ವರ ನಾಯ್ಕ ಸಹಿತ ಸಮಾಜದ ಗಣ್ಯರು, ಹಿರಿಯರು ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಅವರಿಗೆ ಗುರುವಂದನೆ ಸಲ್ಲಿಸಿದರು.