ಬೆಳ್ತಂಗಡಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್(ರಿ) ಬೆಳ್ತಂಗಡಿ ತಾಲೂಕಿನ, ಉಜಿರೆ ವಲಯದ, ಕಲ್ಮಂಜ ಕಾರ್ಯಕ್ಷೇತ್ರದ ದೇಜಮ್ಮರವರಿಗೆ ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ವಿಶೇಷವಾಗಿ ಮಂಜೂರು ಮಾಡಿರುವ ವೀಲ್ ಚೇರ್ ರನ್ನು ಉಜಿರೆ ಪಂಚಾಯತ್ ಮಾಜಿ ಅಧ್ಯಕ್ಷೆ ಪುಷ್ಪವತಿ ಆರ್ ಶೆಟ್ಟಿ, ತಾಲೂಕು ಯೋಜನಾಧಿಕಾರಿಯವರಾದ ಸುರೇಂದ್ರ ರವರು ವಿತರಿಸಿದರು.
ಈ ಸಂದರ್ಭ ಕಲ್ಮಂಜ ಭಜನಾ ಮಂಡಳಿಯ ಅಧ್ಯಕ್ಷ ಮಂಜುನಾಥ ಶೆಟ್ಟಿ, ಊರಿನ ಗಣ್ಯರಾದ ಲಿಂಗಪ್ಪ ಲಿಂಗಾಯಿತು, ಜಯಾನಂದ ಪೂಜಾರಿ, ಶೌರ್ಯ ವಿಪತ್ತು ಘಟಕದ ಸದಸ್ಯ ಸುಧೀರ್ ಉಜಿರೆ, ತಾಲೂಕಿನ ಕೃಷಿ ಅಧಿಕಾರಿಯಾದ ರಾಮ್ ಕುಮಾರ್, ಉಜಿರೆ ವಲಯದ ಮೇಲ್ವಿಚಾರಕಿ ವನಿತಾ, ಸೇವಾಪ್ರತಿನಿಧಿ ಪ್ರೇಮ ಉಪಸ್ಥಿತರಿದ್ದರು.