ಬೆಳ್ತಂಗಡಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್(ರಿ) ಬೆಳ್ತಂಗಡಿ ತಾಲೂಕಿನ, ಉಜಿರೆ ವಲಯದ, ಉಜಿರೆ ಕಾರ್ಯಕ್ಷೇತ್ರದ ಲೀಲಾ ರವರಿಗೆರವರಿಗೆ ಅನಾರೋಗ್ಯ ಕಾರಣ ಚಿಕಿತ್ಸೆಗಾಗಿ ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ವಿಶೇಷವಾಗಿ ಮಂಜೂರು ಮಾಡಿರುವ ರೂ 20000/-ಮೊತ್ತದ ಮಂಜೂರಾತಿ ಪತ್ರ ಹಾಗೂ ಚೆಕ್ಕನ್ನು ಉಜಿರೆ ಪಂಚಾಯತ್ ಮಾಜಿ ಅಧ್ಯಕ್ಷೆ ಪುಷ್ಪವತಿ ಆರ್ ಶೆಟ್ಟಿ, ತಾಲೂಕು ಯೋಜನಾಧಿಕಾರಿಯವರಾದ ಸುರೇಂದ್ರ ರವರು ವಿತರಿಸಿದರು.
ಈ ಸಂದರ್ಭ ಉಜಿರೆ ಎ ಒಕ್ಕೂಟದ ಅಧ್ಯಕ್ಷೆ ಲೀಲಾವತಿ, ಸಿವಿಲ್ ಇಂಜಿನಿಯರ್ ರಾದ ಪ್ರಮೋದ್ ಕಾಮತ್, ತಾಲೂಕಿನ ಕೃಷಿ ಅಧಿಕಾರಿಯಾದ ರಾಮ್ ಕುಮಾರ್, ಉಜಿರೆ ವಲಯದ ಮೇಲ್ವಿಚಾರಕಿಯಾದ ವನಿತಾ, ಸೇವಾಪ್ರತಿನಿಧಿಯಾದ ಪ್ರೇಮ ಉಪಸ್ಥಿತರಿದ್ದರು.