ಬೆಳ್ತಂಗಡಿ: ನ.30ರಂದು ಮಹಿಳಾ ವೃಂದದಲ್ಲಿ ಮಕ್ಕಳ ದಿನಾಚರಣೆ ಪ್ರಯುಕ್ತ ಮಕ್ಕಳಿಗೆ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಯಿತು
ಕಾರ್ಯಕ್ರಮದ ಉದ್ಘಾಟಕರಾಗಿ ಎಂಎಲ್‌ಸಿ ಪ್ರತಾಪ್ ಸಿಂಹ ನಾಯಕ್ ರವರು ಆಗಮಿಸಿದ್ದು, ಮಕ್ಕಳು ಮಣ್ಣಿನ ಮುದ್ದೆ ಇದ್ದಂತೆ, ಅವರನ್ನು ಸರಿಯಾದ ರೂಪ ನೀಡುವುದು ಹೆತ್ತವರ ಕರ್ತವ್ಯವಾದರೆ, ಅವರಿಗೆ ಶಕ್ತಿ ತುಂಬುವ ಕೆಲಸವನ್ನು ಸಂಘ-ಸಂಸ್ಥೆ ಮಾಡಬೇಕು.ಆ ನಿಟ್ಟಿನಲ್ಲಿ ಮಹಿಳಾ ವೃಂದ ಮಹತ್ವದ ಪಾತ್ರವಹಿಸಿದೆ ಎಂದು ಈ ಸಂದರ್ಭದಲ್ಲಿ ಹೇಳಿದರು.
ಸಂಧ್ಯಾ ಪಾಳಂದೆ ಅವರ ಪ್ರಾರ್ಥನೆಯೊಂದಿಗೆ ಆರಂಭವಾದ ಕಾರ್ಯಕ್ರಮದಲ್ಲಿ ಉಮಾ ಆರ್ ರಾವ್ ಅವರು ಸ್ವಾಗತಿಸಿ, ಉದ್ಘಾಟಕರ ಪರಿಚಯವನ್ನು ಕಾರ್ಯದರ್ಶಿ ವೀಣಾ ವಿನೋದ್ ಅವರು ಮಾಡಿದರು.
ಕಾರ್ಯಕ್ರಮದ ನಿರೂಪಣೆಯನ್ನು ರಶ್ಮಿ ಪಟವರ್ಧನ್ ರವರು ಮಾಡಿದರು.ಅಧ್ಯಕ್ಷೆ ಆಶಾ ಸತೀಶ್ ರವರು ಮಕ್ಕಳಿಗೆ ಶುಭಾಶಯ ಕೋರಿದರು.
ಸ್ಪರ್ಧೆಗಳ ತೀರ್ಪುಗಾರರಾಗಿ ಮಂಗಳ ರತ್ನಾಕರ್, ಅಧ್ಯಾಪಕಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಬಡಗಕಾರಂದರು ಹಾಗೂ ಭಾರತಿ ದಿವಾಕರ್ ಪ್ರಾಧ್ಯಾಪಕಿ ಸರಕಾರಿ ಪದವಿ ಪೂರ್ವ ಕಾಲೇಜು ಅಳದಂಗಡಿ ಇವರು ಆಗಮಿಸಿ ಮಕ್ಕಳಿಗೆ ಸ್ಪರ್ಧೆಯ ಫಲಿತಾಂಶವನ್ನು ನೀಡಿದರು.
ಮಹಿಳಾ ವೃಂದವು ಮಕ್ಕಳ ವೇದಿಕೆಯನ್ನು ಆಯೋಜಿಸಿದ್ದು, ವಾಣಿ ಆಂಗ್ಲ ಮಾಧ್ಯಮ ಶಾಲೆಯ ಕುಮಾರಿ ನಿಶಾ ಅಧ್ಯಕ್ಷರಾಗಿಯೂ, ಚರ್ಚ್ ಹಿರಿಯ ಪ್ರಾಥಮಿಕ ಶಾಲೆಯ ಕುಮಾರಿ ಪೃಥ್ವಿ ಅತಿಥಿಯಾಗಿಯೂ, ಕುಮಾರಿ ದಿವ್ಯ ದ.ಕ.ಜಿ.ಪ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಇವರು ಮಕ್ಕಳ ವೇದಿಕೆಯ ಕಾರ್ಯಕ್ರಮ ನಿರೂಪಣೆ ಮಾಡಿದರು.ಕೊನೆಯಲ್ಲಿ ವೀಣಾ ಆರ್ ಮಯ್ಯ ಧನ್ಯವಾದ ನೀಡಿದರು.ಕಾರ್ಯಕ್ರಮದಲ್ಲಿ ಮಹಿಳಾ ವೃಂದದ ಎಲ್ಲಾ ಸದಸ್ಯರು ಉಪಸ್ಥಿತರಿದ್ದರು.