Site icon Suddi Belthangady

ವಿದ್ಯಾಮಾತಾ ಅಕಾಡೆಮಿಯಿಂದ ತರಬೇತಿ ಪಡೆದು ಕೆ.ಎಂ.ಎಫ್ ಗೆ ಆಯ್ಕೆಗೊಂಡ ಶಿಲ್ಪಾ ಹೆಚ್.ಎಂ

ಪುತ್ತೂರು: ಕರ್ನಾಟಕ ಮಿಲ್ಕ್ ಫೆಡರೇಶನ್ (K.M.F) ಬೆಂಗಳೂರಿನ ಕೇಂದ್ರ ಕಛೇರಿಗೆ ನಡೆಸಿದ ನೇಮಕಾತಿ ಪರೀಕ್ಷೆಯಲ್ಲಿ ಅತ್ಯುತ್ತಮ ಮೆರಿಟ್ ಅಂಕಗಳೊಂದಿಗೆ ಮೈಸೂರು ಜಿಲ್ಲೆಯ ವಿಜಯನಗರ ನಿವಾಸಿ ಶಿಲ್ಪಾ ಹೆಚ್.ಎಂ ಆಯ್ಕೆ ಆಗಿದ್ದು, ವಿದ್ಯಾಮಾತಾ ಅಕಾಡೆಮಿಯ ಸಾಧನೆಯ ಮುಕುಟಕ್ಕೆ ಇನ್ನೊಂದು ಗರಿ ಲಭಿಸಿದೆ.ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ವೇಳೆ, ಸಹಕಾರ ಸಂಘಗಳ ನೇಮಕಾತಿ ಪರೀಕ್ಷೆ ಬಗ್ಗೆಯೂ ವಿದ್ಯಾಮಾತ ಅಕಾಡೆಮಿಯಲ್ಲಿ ವಿಶೇಷ ತರಬೇತಿಯನ್ನು ನೀಡಲಾಗುತ್ತಿದೆ.

ರಾತ್ರಿ 8 ರಿಂದ 9 ವರೆಗಿನ ನಿತ್ಯ 1 ಗಂಟೆ ಆನ್ಲೈನ್ ತರಬೇತಿಯನ್ನು ಶಿಲ್ಪಾರವವರು ಅಕಾಡೆಮಿಯಿಂದ ಪಡೆದುಕೊಂಡಿದ್ದರು.ಆ ಮೂಲಕ ಅತ್ಯಧಿಕ ಮೆರಿಟ್ ನೊಂದಿಗೆ ಗ್ರೇಡ್ 2 ಹುದ್ದೆಗೆ ಆಗಿರುತ್ತಾರೆ.

ಅಕಾಡೆಮಿಯಲ್ಲಿ ಸಹಕಾರ ತತ್ವ, ಸಾಮಾನ್ಯ ಜ್ಞಾನ ಇತ್ಯಾದಿಗಳ ಬಗ್ಗೆ ವಿಶೇಷ ತರಬೇತಿಯನ್ನು ನೀಡುವುದರ ಮೂಲಕ ಸ್ಥಳೀಯ ಸಹಕಾರಿ ಬ್ಯಾಂಕ್ ಹಾಗೂ K.M.F ನೇಮಕಾತಿ ಪರೀಕ್ಷೆ ಎದುರಿಸೋ ಬಗ್ಗೆ ಉತ್ತೇಜಿಸಲಾಗುತ್ತಿದೆ. ಕಳೆದ ಸಾಲಿನಲ್ಲೂ K.M.F ಇದರ ಮಂಗಳೂರು ಘಟಕಕ್ಕೂ ಮೂವರು ಅಭ್ಯರ್ಥಿಗಳು ಆಯ್ಕೆಯಾಗಿದ್ದರು.

Exit mobile version