Site icon Suddi Belthangady

ಸೋಣಂದೂರು: ಜಿಲ್ಲಾ ಮಟ್ಟದ ಪುರುಷರ 55 ಕೆಜಿ ವಿಭಾಗದ ಮುಕ್ತ ಕಬಡ್ಡಿ ಪಂದ್ಯಾಟ

ಸೋಣಂದೂರು: ಮಹಮ್ಮಾಯಿ ಕಟ್ಟೆ ಪ್ರೆಂಡ್ಸ್ ಸೋಣಂದೂರು ಪಣಕಜೆ ಹಳೇ ವಿದ್ಯಾರ್ಥಿ ಸಂಘ ಸೋಣಂದೂರು ಇದರ ಆಶ್ರಯದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಅಮೆಚೂರು ಅಸೋಸಿಯೇಶನ್ ಇದರ ಸಹಕಾರದೊಂದಿಗೆ ಜಿಲ್ಲಾ ಮಟ್ಟದ ಪುರುಷರ 55 ಕೆಜಿ ವಿಭಾಗದ ಮುಕ್ತ ಕಬಡ್ಡಿ ಪಂದ್ಯಾಟ ಡಿ.3 ರಂದು ಸೋಣಂದೂರು ಶಾಲಾ ವಠಾರದಲ್ಲಿ ಜರಗಿತು.

ಕಾರ್ಯಮವನ್ನು ಸ.ಹಿ.ಪ್ರಾ.ಶಾಲಾ ಮುಖ್ಯೋಪಾಧ್ಯಾಯರು ಅನಿತಾ ರೇಶ್ಮಾ ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿದ ಅವರು ಸೋಲು ಗೆಲುವಿಗಿಂತ ಕ್ರೀಡೆಯಲ್ಲಿ ಬಾಗವಹಿಸುವಿಕೆ ಕ್ರೀಡಾ ಸ್ಪೂರ್ತಿ ಮುಖ್ಯ ದೈಹಿಕವಾಗಿ ಮಾನಸಿಕವಾಗಿ ಚೈತನ್ಯದಾಯಕವಾಗಲಿದೆ ಎಂದರು.ಅತಿಥಿಗಳಾದ ರಾಜರಾಮ್ ಶೆಟ್ಟಿ ಮುಂಡಾಡಿಗುತ್ತು ಕ್ರೀಡಾಂಗಣವನ್ನು ಉದ್ಘಾಟಿಸಿದರು.

ಸಮಾರಂಭದ ಅಧ್ಯಕ್ಷತೆಯನ್ನು ಮಹಾಮ್ಮಾಯಿ ಕಟ್ಟೆ ಪ್ರೆಂಡ್ಸ್ ನ ಅಧ್ಯಕ್ಷ ಯೋಗಿಶ್ ಆರ್ ವಹಿಸಿದ್ದರು.ಮುಖ್ಯ ಅತಿಥಿಗಳಾಗಿ ಸೋಣಂದೂರು ಶಾಲೆಯ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ನಾಗೇಶ್ ಗೌಡ ಯಂ.ಕಲ್ಲಾರಿ ಕಮ್ಯೂನಿಕೇಶನ್ ಮಡಂತ್ಯಾರು ಇದರ ಜಗದೀಶ್ ಆಚಾರ್ಯ, ಮಾಲಾಡಿ ಗ್ರಾ.ಪಂ.ಮಾಜಿ ಅಧ್ಯಕ್ಷ ಬೇಬಿ ಸುವರ್ಣ, ಸದಸ್ಯರಾದ ಗಲಾಬಿ, ಉಮೇಶ್ ಮಾಲಾಡಿ ಆಗಮಿಸಿದ್ದರು.

ವೇದಿಕೆಯಲ್ಲಿ ಜಯರಾಮ್ ಸಾಲಿಯನ್ ಬಳ್ಪುಂಜ, ಸೋಣಂದೂರು ಶಾಲಾ ಹಿರಿಯ ವಿಧ್ಯಾರ್ಥಿ ಸಂಘದ ಅಧ್ಯಕ್ಷ ರೋಶನ್ ಲೋಬೋ ಪಣಕಜೆ ಉಪಸ್ಥಿತರಿದ್ದರು.

ಮಹಾಮ್ಮಯಿ ಪ್ರೆಂಡ್ಸ್ ನ ಗೌರವಾಧ್ಯಕ್ಷ ವೆಂಕಟೇಶ್ ಕುಲಾಲ್, ಉಪಾಧ್ಯಕ್ಷ ಪ್ರತೀಕ್ ನಾಯಕ್, ಪ್ರಧಾನ ಕಾರ್ಯದರ್ಶಿ ಚೇತನ್ ಕುಮಾರ್, ಕಾರ್ಯದರ್ಶಿ ಸಚಿನ್, ಕೋಶಾಧಿಕಾರಿ ಮೋಹನ್ ನಾಯಕ್, ಗೌರವ ಸಲಹೆಗಾರರು ಪ್ರಸಾದ್ ಪ್ರಭು, ರಾಜೇಶ್ ಕುಲಾಲ್, ಸಂಜೀವ, ಸದಸ್ಯರಾದ ಹರೀಶ್ ಪ್ರಭು, ದೀಕ್ಷಿತ್, ಮನೋಜ್ ಕೋಟ್ಯಾನ್, ದೀಪಕ್ ಕುಮಾರ್, ರಮೇಶ್ ಕುಲಾಲ್, ಗುರುಪ್ರಸಾದ್ ಆಚಾರ್ಯ, ಪುನಿತ್, ಆನಂದ ನಾಯ್ಕ್, ಸುನಿಲ್, ಅನಂತ ಆಚಾರ್ಯ, ಅರುಣ್ ಕುಲಾಲ್ ಮುಂಡಾಡಿ, ಪವನ್ ನಾಯಕ್, ಸದಾನಂದ ಕುಲಾಲ್, ಸಂತೋಷ್ ನಾಯಕ್, ವೆಂಕಟೇಶ್, ಸುರೇಶ್, ಹಿರಿಯ ವಿಧ್ಯಾರ್ಥಿ ಸಂಘದ ಕಾರ್ಯದರ್ಶಿ ಸಂಧ್ಯಾ ಶೆಟ್ಟಿ ಮತ್ತಿತರರು ಸಹಕರಿಸಿದರು.

ಸೋಣಂದೂರು ಶಾಲಾ ವಿಧ್ಯಾರ್ಥಿನಿಯರು ಪ್ರಾರ್ಥನೆಗೈದರು, ಶಾಲಾ ಶಿಕ್ಷಕ ರಾಜೇಶ್ ಸ್ವಾಗತಿಸಿ, ಹರೀಶ್ ನಾಯಕ್ ಪಣಕಜೆ ಕಾರ್ಯಕ್ರಮ ನಿರೂಪಿಸಿದರು.ಸಚಿನ್ ಧನ್ಯವಾದವಿತ್ತರು.

Exit mobile version