Site icon Suddi Belthangady

ಉಜಿರೆ ಅನುಗ್ರಹ ಶಾಲಾ ವಾರ್ಷಿಕೋತ್ಸವ: ಅನುಗ್ರಹವೇ ನನಗೆ ಮಾದರಿ: ಡಾ.ಸೌರಭ್ ರೈ

ಉಜಿರೆ: ಅನುಗ್ರಹ ಶಿಕ್ಷಣ ಸಂಸ್ಥೆಗಳ ವಾರ್ಷಿಕೋತ್ಸವವು ಶಾಲಾ ಸಭಾಭವನದಲ್ಲಿ ಕ್ಯಾಥೋಲಿಕ್ ಶಿಕ್ಷಣ ಸಂಸ್ಥೆಗಳ ನಿಯೋಜಿತ ಕಾರ್ಯದರ್ಶಿಗಳಾದ ವಂ! ಫಾ! ಪ್ರವೀಣ್ ಲಿಯೋ ಲಸ್ರಾದೋ ರವರ ಅಧ್ಯಕ್ಷತೆಯಲ್ಲಿ ಡಿ.02ರಂದು ನೆರವೇರಿತು.

ಆಗಮಿಸಿರುವ ಅಬ್ಯಾಗತರನ್ನು ಶಾಲಾ ಬ್ಯಾಂಡಿನ ಮೂಲಕ ಪೂರ್ಣ ಕುಂಭ ಸ್ವಾಗತದೊಂದಿಗೆ ವೇದಿಕೆಗೆ ಬರಮಾಡಿಕೊಳ್ಳಲಾಯಿತು.ಶಾಲಾ ಮಕ್ಕಳ ಪ್ರಾರ್ಥನೆಯ ಬಳಿಕ ಶಾಲಾ ಸಂಚಾಲಕರಾದ ವಂ! ಫಾ! ಜೇಮ್ಸ್ ಡಿ’ಸೋಜ ರವರು ಸ್ವಾಗತ ಭಾಷಣದ ಮೂಲಕ ಎಲ್ಲರನ್ನೂ ಸ್ವಾಗತಿಸಿದರು.ಶಾಲಾ ಪ್ರಾಚಾರ್ಯರಾದ ವಂ! ಫಾ! ವಿಜಯ್ ಲೋಬೊ ರವರು ಶಾಲಾ ವರದಿಯನ್ನು ವಾಚಿಸಿದರು.ಆಯ್ದ ಬಹುಮಾನಗಳ ವಿತರಣೆಯನ್ನು ಮುಖ್ಯ ಅತಿಥಿಯಾದ ಡಾ.ಸೌರಭ್ ರೈ ಯವರು ಮಾಡಿದರು.

ಇದೇ ಸಂದರ್ಭದಲ್ಲಿ ವಿಭಾಗೀಯ ರಾಜ್ಯ ಮಟ್ಟದಲ್ಲಿ ಆಡಿದ ಮಕ್ಕಳನ್ನು ಗೌರವಿಸಲಾಯಿತು.ಪುಟ್ ಬಾಲ್ ಪಂದ್ಯಾಟದಲ್ಲಿ ರಾಷ್ಟ ಮಟ್ಟಕ್ಕೆ ಆಯ್ಕೆಯಾದ ಶಾಲಾ ವಿದ್ಯಾರ್ಥಿನಿಯರಾದ ರೋಸಾ ಜೋಯ್ ಹಾಗೂ ದೀಪಿಕಾ ಇವರನ್ನು ವಿಶೇಷವಾಗಿ ಗೌರವಿಸಲಾಯಿತು.ಈ ಕ್ರೀಡಾ ಪಟುಗಳಿಗೆ ಪೋತ್ಸಾಹದಾಯಕವಾಗಿ ‘ಬದುಕು ಕಟ್ಟೋಣ ಬನ್ನಿ’ ಸಂಸ್ಥೆಯಿಂದ ಉಚಿತ ಟ್ರ್ಯಾಕ್ ಶೂ ಗಳನ್ನು ಸಂಸ್ಥೆಯ ಸಂಚಾಲಕ ಮೋಹನ್ ಕುಮಾರ್ ರವರು ನೀಡಿ ಎಲ್ಲಾ ಮಕ್ಕಳನ್ನು ಉತ್ತಮ ರೀತಿಯಲ್ಲಿ ವೈಯುಕ್ತಿಕವಾಗಿ ಸನ್ಮಾನಿಸಿ ಮಕ್ಕಳಿಗೆ ಶುಭ ಹಾರೈಸಿದರು.

ಶಿಕ್ಷಣ ಸಂಸ್ಥೆಯ ಒಳಚರಂಡಿ ವ್ಯವಸ್ಥೆಗೆ ಮತ್ತು ಇಂಟರ್ ಲಾಕ್ ಅಳವಡಿಸಲು ವಿಶೇಷ ಅನುದಾನ ನೀಡಿದ ಶಾಸಕ ಹರೀಶ್ ಪೂಂಜಾರವರು ಕಾರ್ಯಕ್ರಮಕ್ಕೆ ಆಗಮಿಸಿ ಶುಭ ಕೋರಿದರು.

ಇನೋರ್ವ ಮುಖ್ಯ ಅತಿಥಿ ಶಾಲಾ ಹಳೆ ವಿದ್ಯಾರ್ಥಿ ಮಂಗಳೂರಿನ ಎ.ಜೆ.ಆಸ್ಪತ್ರೆಯ ನರರೋಗ ತಜ್ಞ ಡಾ! ಸೌರಭ್ ರೈ ಯವರನ್ನು ಸನ್ಮಾನಿಸಿ ಗೌರವಿಸಲಾಯಿತು.ಅವರು ಅನುಗ್ರಹ ಸಂಸ್ಥೆಯು ತನ್ನ ಮೇಲಿಟ್ಟಿರುವ ಪ್ರೀತಿ ವಿಶ್ವಾಸಕ್ಕೆ ತಾನು ಸದಾ ಬದ್ಧನಾಗಿರುವೆನೆಂದು ತಿಳಿಸಿದರು.ಮುಂದಿನ ಬಹುಮಾನ ವಿತರಿಸಿ ಮಾತನಾಡಿದ ವಂ! ಫಾ! ಪ್ರವೀಣ್ ಲಿಯೋ ಲಸ್ರಾದೊ ರವರು ಅನುಗ್ರಹ ಸಂಸ್ಥೆಯ ಎಲ್ಲಾ ಶೈಕ್ಷಣಿಕ ಕ್ರಿಯಾಚಟುವಟಿಕೆಗಳಿಗೆ ಮೆಚ್ಚುಗೆಯನ್ನು ವ್ಯಕ್ತಪಡಿಸಿ ಇಲ್ಲಿಯ ಕಾರ್ಯ ಯೋಜನೆಗಳು ಇತರ ಶಾಲೆಗಳಿಗೂ ಮಾದರಿಯಾಗಲೆಂದು ಹೇಳುತ್ತಾ ಕಾರ್ಯಕ್ರಮಕ್ಕೆ ಶುಭ ಕೋರಿದರು.

ವೇದಿಕೆಯಲ್ಲಿ ಪಾಲನಾ ಮಂಡಳಿ ಉಪಾಧ್ಯಕ್ಷ ಆಂಟನಿ ಫೆರ್ನಾಂಡೀಸ್, ಶಿಕ್ಷಕ ರಕ್ಷಕ ಸಂಘದ ಉಪಾಧ್ಯಕ್ಷರಾದ ಡಾ! ಪ್ರಶಾಂತ್ ಕುಮಾರ್, ಶಾಲಾ ವಿದ್ಯಾರ್ಥಿ ನಾಯಕರು ಉಪಸ್ಥಿತರಿದ್ದರು.ವಿನಯಲತಾರವರು ನಿರೂಪಿಸಿದ ಕಾರ್ಯಕ್ರಮದಲ್ಲಿ ರವಿ ಕುಮಾರ್‌ರವರು ಧನ್ಯವಾದವನ್ನು ಅರ್ಪಿಸಿದರು. ಅಪರಾಹ್ನ ಶಾಲಾ ಮಕ್ಕಳಿಂದ ವೈವಿದ್ಯಮಯವಾದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರಗಿದವು.

Exit mobile version