Site icon Suddi Belthangady

ಧರ್ಮಸ್ಥಳ ಮಂಜುನಾಥೇಶ್ವರ ಕೃಪಾಪೋಷಿತ ಯಕ್ಷಗಾನ ಮಂಡಳಿಯ ತಿರುಗಾಟಕ್ಕೆ ಚಾಲನೆ-ಮೇಳದ ಗಣಪನ‌ ಆರಾಧನೆ, ಬೀಳ್ಕೊಡುಗೆ

ಧರ್ಮಸ್ಥಳ: ಇನ್ನೂರು ವರ್ಷಗಳ ಭವ್ಯ ಇತಿಹಾಸ ಮತ್ತು ಪರಂಪರೆಯನ್ನು ಹೊಂದಿರುವ ಧರ್ಮಸ್ಥಳದ ಶ್ರೀ ಮಂಜುನಾಥೇಶ್ವರ ಕೃಪಾಪೋಷಿತ ಯಕ್ಷಗಾನ ಮಂಡಳಿಯ ಮೇಳದ ಗಣಪನನ್ನು ಇಂದು ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರು ವಿಶೇಷ ಪ್ರಾರ್ಥನೆಯ ನಂತರ ಬೀಳ್ಕೊಟ್ಟರು.

ಮುಂದಿನ ಪತ್ತನಾಜೆಯವರೆಗೆ ಮೇಳದ ಕಲಾವಿದರು ಮೇಳದ ಗಣಪನೊಂದಿಗೆ ಸೇವಾರ್ಥಿಗಳ ಮನೆಗೆ ತೆರಳಿ ವಿವಿಧ ಪೌರಾಣಿಕ ಪ್ರಸಂಗಗಳನ್ನು ಆಡಿ ತೋರಿಸಲಿದ್ದಾರೆ.

ಮೇಳದ ತಿರುಗಾಟಕ್ಕೆ ಚಾಲನೆ ನೀಡುವ ಕಾರ್ಯದ ಜೊತೆ ಗಣಪನನ್ನು ವಿಶೇಷ ಪೂಜೆಯ ನಂತರ ಬಿಳ್ಕೊಡಲಾಯಿತು.

ದೇವಾಲಯದ ಪಾರುಪತ್ತಿಗಾರರು, ಮೇಳದ ವ್ಯವಸ್ಥಾಪಕರು, ಕಲಾವಿದರು, ಧರ್ಮಸ್ಥಳ ಕ್ಷೇತ್ರದ ಪ್ರಮುಖರು, ನೌಕರರು, ಯಕ್ಷಗಾನ ಪ್ರೇಮಿಗಳು ಉಪಸ್ಥಿತರಿದ್ದರು

Exit mobile version