Site icon Suddi Belthangady

ಬೆಳ್ತಂಗಡಿ ವಕೀಲರ ಸಂಘದಿಂದ ಸಂವಿಧಾನ ದಿನಾಚರಣೆಯ ಅಂಗವಾಗಿ ತಾಲೂಕು ಮಟ್ಟದ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಭಾಷಣ ಸ್ಪರ್ಧೆ

ಬೆಳ್ತಂಗಡಿ: ವಕೀಲರ ಸಂಘ ಬೆಳ್ತಂಗಡಿ ವತಿಯಿಂದ ಸಂವಿಧಾನ ದಿನಾಚರಣೆಯ ಅಂಗವಾಗಿ ಬೆಳ್ತಂಗಡಿ ತಾಲೂಕು ಮಟ್ಟದ ಹೈಸ್ಕೂಲ್ ವಿದ್ಯಾರ್ಥಿಗಳಿಗೆ ಭಾರತದ ಸಂವಿಧಾನ ಎಂಬ ವಿಷಯದ ಬಗ್ಗೆ ಭಾಷಣ ಸ್ಪರ್ಧೆಯನ್ನು ವಕೀಲರ ಭವನ ಬೆಳ್ತಂಗಡಿಯಲ್ಲಿ ಆಯೋಜಿಸಲಾಗಿತ್ತು.

ಈ ಕಾರ್ಯಕ್ರಮದ ಉದ್ಘಾಟನೆಯನ್ನು ಕ್ಷೇತ್ರ ಶಿಕ್ಷಣಾಧಿಕಾರಿಯಾದ ತಾರಕೇಶ್ವರಿಯವರು ನೆರವೇರಿಸಿದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಕೀಲರ ಸಂಘದ ಅಧ್ಯಕ್ಷ ವಸಂತ ಮರಕಡ ವಹಿಸಿದ್ದರು.

ಬೆಳ್ತಂಗಡಿ ವಕೀಲರ ಸಂಘದ ಉಪಾಧ್ಯಕ್ಷ ಸಿ.ಅಶೋಕ್ ಕರಿಯನೆಲ, ಬೆಳ್ತಂಗಡಿ ಯುವವಕೀಲರ ವೇದಿಕೆ ಅಧ್ಯಕ್ಷ ಸಂದೀಪ್ ಡಿಸೋಜ, ಖಜಾಂಚಿ ಪ್ರಶಾಂತ್ ಎಂ.ವೇದಿಕೆಯಲ್ಲಿ ಉಪಸ್ಥಿತರಿದ್ದರು.
ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ನವೀನ್ ಬಿ. ಕೆ ನಿರೂಪಿಸಿದರು.

ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಬೆಳ್ತಂಗಡಿ ವಕೀಲರ ಸಂಘದ ಅಧ್ಯಕ್ಷ ವಸಂತ ಮರಕಡ, ಮುಖ್ಯ ಅತಿಥಿಗಳಾಗಿ ಬೆಳ್ತಂಗಡಿ ಹಿರಿಯ ಶ್ರೇಣಿ ನ್ಯಾಯಾಧೀಶರು ದೇವರಾಜು,
ಪ್ರಧಾನ ನ್ಯಾಯಾಧೀಶರು ಸಂದೇಶ್ ಕೆ ಜೆ, ಹೆಚ್ಚುವರಿ ಸವಿನ್ ನ್ಯಾಯಾಧೀಶ ವಿಜಯೇಂದ್ರ ಟಿ ಎಚ್ ಉಪಸ್ಥಿತರಿದ್ದರು.
ಮುಖ್ಯ ಅತಿಥಿ ನೆಲೆಯಲ್ಲಿ ಬೆಳ್ತಂಗಡಿ ವಕೀಲರ ಸಂಘದ ಹಿರಿಯ ನ್ಯಾಯವಾದಿ ಬಿ ಕೆ ಧನಂಜಯ ರಾವ್ ಸಂವಿಧಾನದ ಕುರಿತಾಗಿ ಚುಟುಕಾಗಿ ಅರ್ಥ ವಿವರಣೆಗೈದರು.

ಈ ಸಂದರ್ಭದಲ್ಲಿ ಕುಂದಾಪುರದಲ್ಲಿ ನಡೆದ ಸಾಂಸ್ಕೃತಿಕ ಕಲರವ ನಲ್ಲಿ ಭಾಗವಹಿಸಿದ ಎಲ್ಲಾ ವಕೀಲರನ್ನು ಗೌರವಿಸಲಾಯಿತು.

ಪ್ರಥಮ: ಶರಣ್ಯ 9ನೇ ತರಗತಿ, ಜಿ.ಪಿ.ಯು.ಸಿ. ವೇಣೂರು
ದ್ವಿತೀಯ: ಡಿ ಜಿ ಮಹಿಮಾ 8ನೇ ತರಗತಿ, ಎಸ್.ಡಿ.ಎಂ ಧರ್ಮಸ್ಥಳ
ತೃತೀಯ: ಪಲ್ಲವಿ 10 ನೇ ತರಗತಿ, ಎಸ್.ಡಿ.ಎಂ ಆಂಗ್ಲ ಮಾಧ್ಯಮ(CBSC) ಶಾಲೆ ಉಜಿರೆ
ತೀರ್ಪುಗಾರರಾಗಿ ವಕೀಲರುಗಳಾದ ಶಿವಕುಮಾರ್ ಎಸ್.ಎಂ, ಶ್ರೀಕೃಷ್ಣ ಶೆಣೈ ಭಾಗವಹಿಸಿದ್ದರು.

ಕಾರ್ಯಕ್ರಮದಲ್ಲಿ ವಕೀಲ ಸಂಘದ ಪ್ರಧಾನ ಕಾರ್ಯದರ್ಶಿ ನವೀನ್ ಬಿಕೆ ಧನ್ಯವಾದವಿತ್ತರು.

Exit mobile version