Site icon Suddi Belthangady

ನಾರಾವಿ ಮಾರುತಿ ಸುಝುಕಿ ಕಾರು ಮಾಂಡೋವಿ ಮೋಟರ್ಸ್ ನಿಂದ 100ನೇ ಕಾರು ಕೀ ಹಸ್ತಾಂತರ ಸಮಾರಂಭ

ನಾರಾವಿ: ದ.ಕ ಜಿಲ್ಲೆಯ ಪ್ರತಿಷ್ಠಿತ ಮಾರುತಿ ಸುಝುಕಿ ಕಾರುಗಳ ಅಧಿಕೃತ ಮಾರಾಟಗಾರರಾದ ಮಾಂಡೋವಿ ಮೋಟಾರ್ಸ್ ಪ್ರೈ.ಲಿ.ಮಂಗಳೂರು ಇವರ ನೂತನ ಶಾಖೆ ನಾರಾವಿಯಲ್ಲಿ ನೂರನೇ ಕಾರಿನ ಕೀಲಿ ಹಸ್ತಾಂತರ ಕಾರ್ಯಕ್ರಮ ನ.24ರಂದು ನಡೆಯಿತು.

ಈ ಸಂದರ್ಭದಲ್ಲಿ ನೂತನ ಕಾರಿನ ಕೀಲಿಯನ್ನು ಗ್ರಾಹಕರಾದ ಕರುಣಾಕರ ಜೈನ್ ನಾರಾವಿ, ಪದ್ಮಪ್ರಸಾದ್ ಜೈನ್ ನಾರಾವಿ, ಸುಬ್ರಹ್ಮಣ್ಯ ಭಟ್ ಪಣಕಾಜೆ, ಹಬೀಬ್ ಮುತ್ರಿಮಜಲು ರವರಿಗೆ ಹಸ್ತಾಂತರಿಸಲಾಯಿತು.

ಗಣ್ಯರಾದ ನಾರಾವಿ ಗ್ರಾಮ ಪಂಚಾಯತ್ ಅಧ್ಯಕ್ಷ ರಾಜವರ್ಮ ಜೈನ್, ಉದ್ಯಮಿ ರೋಶನ್ ಹೆಗ್ಡೆ, ಉದ್ಯಮಿ ಸುರೇಂದ್ರ ಕುಮಾರ್ ಹಾಗೂ ರವಿಕುಮಾರ್ ಅರಸಿಕಟ್ಟೆ ಉಪಸ್ಥಿತರಿದ್ದರು.

ಮಾಂಡೋವಿ ಮೋಟಾರ್ಸ್ ಮಂಗಳೂರು ಗ್ರಾಮಾಂತರ ಸೇಲ್ಸ್ ಮ್ಯಾನೇಜರ್ ಸುಜಿತ್ ಕಾರ್ಯಕ್ರಮ ನಿರೂಪಿಸಿ, ನೆಕ್ಸ ಸಹಾಯಕ ಸೇಲ್ಸ್ ಜನರಲ್ ಮ್ಯಾನೇಜರ್ ಅಕ್ಷಯ್ ಕುಮಾರ್ ವಂದಿಸಿದರು.

ವರ್ಕ್ ಮ್ಯಾನೇಜರ್ ಗಣೇಶ್ ಕುಲಾಲ್ ನಾರಾವಿ, ಸೇಲ್ಸ್ ಆಫೀಸರ್ ಕಿಶೋರ್ ಕುಮಾರ್, ಸುಹಾಸ್ ಜೈನ್, ಲೋಕೇಶ್, ಸುಮಂತ್ ರಾಜ್ ಉಪಸ್ಥಿತರಿದ್ದರು.

ಅತೀ ಕಡಿಮೆ ಸಮಯದಲ್ಲಿ ನಾರಾವಿ ಗ್ರಾಮೀಣ ಪ್ರದೇಶದಲ್ಲಿ ನೂರು ಕಾರುಗಳ ಮಾರಾಟಕ್ಕೆ ಸಹಕರಿಸಿದ ಎಲ್ಲಾ ನಾರಾವಿ ಪರಿಸರದ ಸಹೃದಯದ ಗ್ರಾಹಕರಿಗೆ ಮಾಂಡೋವಿ ಮೋಟಾರ್ಸ್ ಆಡಳಿತ ಮಂಡಳಿ ಕೃತಜ್ಞತೆ ಸಲ್ಲಿಸಿದೆ.ಟೀಮ್ ಸೇಲ್ಸ್ ಮ್ಯಾನೇಜರ್ ಚರಣ್ ಕುಮಾರ್ ಸ್ವಾಗತಿಸಿ ಸತ್ಕರಿಸಿದರು.

Exit mobile version