ಪುತ್ತೂರು: ಕಳೆದ 3 ವರುಷಗಳಿಂದ ಶಿಕ್ಷಕರ ಅರ್ಹತಾ ಪರೀಕ್ಷೆಗೆ (ಟಿ.ಇ.ಟಿ) ಅತ್ಯುತ್ತಮ ಬೋಧಕ ವೃಂದದ ಮುಖೇನ ಗರಿಷ್ಠ ಗುಣಮಟ್ಟದ ತರಬೇತಿ ನೀಡಿ, ಅತ್ಯುತ್ತಮ ಫಲಿತಾಂಶವನ್ನು ಪಡೆಯುತ್ತಿರುವಂಥಹ, ಸರಕಾರಿ ಹಾಗೂ ಖಾಸಗಿ ಉದ್ಯೋಗಕ್ಕೆ ಪ್ರಯತ್ನಿಸುತ್ತಿರುವ ಆಭ್ಯರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗೆ ತರಬೇತಿ ನೀಡಿ ಸಾವಿರಾರು ಆಭ್ಯರ್ಥಿಗಳು ಉದ್ಯೋಗ ಪಡೆಯುವಲ್ಲಿ ವಿದ್ಯಾಮಾತಾ ಅಕಾಡೆಮಿ ತುಂಬಾನೇ ಪ್ರಯತ್ನ ಪಟ್ಟಿದೆ.
ಅದೇ ರೀತಿ ಟಿ.ಇ.ಟಿ ಯಲ್ಲೂ ಕಳೆದ ಮೂರು ವರುಷಗಳಿಂದ ವಿದ್ಯಾಮಾತಾ ಮೂಲಕ ಟ್ರೈನಿಂಗ್ ಪಡೆದು ,ಪರೀಕ್ಷೆ ಎದುರಿಸಿರೋ ಎಲ್ಲ ಅಭ್ಯರ್ಥಿಗಳು ಕೂಡ ಉತ್ತೀರ್ಣರಾಗೋ ಮೂಲಕ ಅತ್ಯುತ್ತಮ ಫಲಿತಾಂಶ ಬಂದಿದ್ದು, ಪ್ರಸಕ್ತ ಸಾಲಿನಲ್ಲೂ ಕೂಡ ಹಾಜರಾದ 43 ಅಭ್ಯರ್ಥಿಗಳು ಪರೀಕ್ಷೆ ಎದುರಿಸಿ, ಶೇಕಡ ನೂರು ಫಲಿತಾಂಶ ತಂದು ಸಂಸ್ಥೆಯ ಹೆಸರನ್ನು ಮತ್ತಷ್ಟೂ ಎತ್ತರಕ್ಕೆ ಏರಿಸಿದ್ದಾರೆ.
ಪುತ್ತೂರಿನಲ್ಲಿ ಕೇಂದ್ರ ಕಛೇರಿ ಹೊಂದಿ, ಇದೀಗ ಸುಳ್ಯದಲ್ಲೂ ಶಾಖೆ ಹೊಂದಿರುವ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಕೇಂದ್ರ ವಿದ್ಯಾಮಾತಾ ಅಕಾಡೆಮಿಯಲ್ಲಿ ಸತತ ಮೂರು ವರ್ಷಗಳಿಂದ ಶಿಕ್ಷಕರ ಅರ್ಹತಾ ಪರೀಕ್ಷೆಯಲ್ಲಿ ತರಬೇತಿ ಪಡೆದ ಅಭ್ಯರ್ಥಿಗಳಲ್ಲಿ, ಬಹುತೇಕ ಆಭ್ಯರ್ಥಿಗಳು ಪ್ರಥಮ ಪ್ರಯತ್ನದಲ್ಲೇ ಉತ್ತೀರ್ಣರಾಗಿದ್ದಾರೆ.ಈ ವರ್ಷವೂ 43 ವಿದ್ಯಾರ್ಥಿಗಳು ಉತ್ತೀರ್ಣರಾಗುವುದರ ಮೂಲಕ ಉತ್ತಮ ಫಲಿತಾಂಶವನ್ನು ದಾಖಲಿಸಿದ್ದಾರೆ.
ಐದು ವರುಷದ ಮಗುವಿಗೆ ಬೋಧಿಸುವ ಅಬಾಕಸ್, ವೇದಿಕ್ ಗಣಿತ, ಮಾನಸಿಕ ಸಾಮರ್ಥ್ಯ ತರಗತಿಯಿಂದ ಹಿಡಿದು 40 ವಯೋಮಾನದವರ ತನಕವೂ ವಿವಿಧ ಹಂತ ಮೂಲಕ ವಿದ್ಯಾಮಾತಾ ಅಕಾಡೆಮಿಯಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿಯನ್ನು ನೀಡಲಾಗುತ್ತಿದೆ.
ಸ್ಪರ್ಧಾತ್ಮಕ ಪರೀಕ್ಷೆಗಳ ಬಗ್ಗೆ ಜಾಗೃತಿ ಇಲ್ಲ ಎನ್ನುವ ಕೂಗಿನ ಮಧ್ಯೆ ಉದ್ಯೋಗ ಕೌಶಲ್ಯತೆ, ಸ್ಪರ್ಧಾತ್ಮಕ ಪರೀಕ್ಷೆಗಳ ತಯಾರಿಯ ವಿಷಯದಲ್ಲಿ ವಿದ್ಯಾಮಾತಾ ಅಕಾಡೆಮಿಯು ತನ್ನೆಲ್ಲಾ ಅಭ್ಯರ್ಥಿಗಳನ್ನು ನುರಿತ ಭೋಧಕ ತಂಡದ ಮೂಲಕ ನಿರಂತರ ತರಬೇತಿಗೊಳಿಸಿ , ಸಾಕಷ್ಟು ತಯಾರಿ ಮಾಡಿ , ಆ ಮೂಲಕ ಆಭ್ಯರ್ಥಿಗಳೆಲ್ಲಾ ಅತ್ಯಂತ ಯಶಸ್ಸನ್ನು ಕಂಡಿದ್ದಾರೆ. ಇದೀಗ ಟಿ.ಇ.ಟಿ. ಫಲಿತಾಂಶ ಪ್ರಕಟಗೊಂಡಿದ್ದು , ನೂರು ಶೇಕಡ ಫಲಿತಾಂಶ ಬಂದಿರುವುದಕ್ಕೆ ಅಕಾಡೆಮಿ ಅಧ್ಯಕ್ಷ ಭಾಗ್ಯೇಶ್ ರೈ ಯವರು ಸಂತಸ ವ್ಯಕ್ತಪಡಿಸಿ , ಅದ್ಬುತ ಸಾಧನೆ ಮಾಡಿದ ಎಲ್ಲಾ ಅಭ್ಯರ್ಥಿಗಳನ್ನು ಅಭಿನಂದಿಸಿ, ಅವರ ಮುಂದಿನ ಭವಿಷ್ಯಕ್ಕೆ ಹಾರೈಸಿದ್ದಾರೆ.
ಆಭ್ಯರ್ಥಿಗಳ ವಿವರ:
ಜಯಲಕ್ಷ್ಮಿ ಬೆಟ್ಟಂಪಾಡಿ ,ವರ್ಷ ಮುಳಿಯಾರ್ ದರ್ಬೆ , ಜ್ಯೋತಿಪ್ರಿಯ ಬಾಳುಗೋಡು ಸುಳ್ಯ, ಪವಿತ್ರ ಬಿ.ಎ. ಕುರುಬರಹಳ್ಳಿ ಬೆಂಗಳೂರು, ಪ್ರೀತಿ ಸಾಲ್ಯಾನ್ ನಿಡ್ಪಳ್ಳಿ , ಪ್ರತೀತ ಜೈನ್ ಕಾರ್ಕಳ , ತೀರ್ಥಕುಮಾರಿ ಬಿಳಿನೆಲೆ ಕಡಬ, ನವ್ಯ ತೊಡಿಕ್ಕಾನ ಸುಳ್ಯ ,ಸುನಯನ ನೆಕ್ಕಿಲಾಡಿ , ಮಮತಾ ಕೋಡಿಂಬಾಳ ಕಡಬ, ಸೌಮ್ಯ ಎಸ್ ಲಗ್ಗೆರೆ ಬೆಂಗಳೂರು, ಅರ್ಪಿತ.ಪಿ ಪಡುಬೆಟ್ಟು ಬೆಳ್ತಂಗಡಿ, ಅಕ್ಷತ ಹೆಚ್.ಎಲ್.ನರಿಮೊಗರು, ವೀಣಾ. ಆರ್ ಕೋಟೆಬಾಗಿಲು ಮೂಡಬಿದ್ರೆ , ಸಮತ.ಪಿ ಈಶ್ವರಮಂಗಲ, ವಿದ್ಯಾಶ್ರೀ ಪಿ ಸಾಲ್ಮರ, ಧನ್ಯಶ್ರೀ .ಡಿ.ವಿ ಗೋಳ್ತಮಜಲು ಬಂಟ್ವಾಳ, ಆಶಾ.ಬಿ ಬಪ್ಪಳಿಗೆ , ಮಂಜುಳಾ. ಕೆ ಕುರಿಯ, ಸೌಮ್ಯ ಪಿ.ಟಿ ಪದ್ಮುಂಜ ಬೆಳ್ತಂಗಡಿ, ಹರ್ಷಿಣಿ ಕೆ.ಎಂ ನೇರಳಕಟ್ಟೆ ಬಂಟ್ವಾಳ, ನೀಲಮ್ಮ ಬೆಳಗನ ಹಳ್ಳಿ ಕೋಲಾರ, ಪುಷ್ಪಾವತಿ.ಎಂ ಐವರ್ನಾಡು ಸುಳ್ಯ, ಸೌಜನ್ಯ. ವಿ ಶೆಟ್ಟಿ, ಬಾಳೆಪುಣಿ ಬಂಟ್ವಾಳ, ಸುಪರ್ಣ ಕೆ.ಎಸ್ ಆರ್ಯಾಪು, ಭುವನ್ ಕುಕ್ಕುಜಡ್ಕ ಸುಳ್ಯ, ಚೈತ್ರ ಆಲೆಟ್ಟಿ ಸುಳ್ಯ, ರಮೀಜಾ ಬೆಳಿಯೂರು ಬಂಟ್ವಾಳ, ಪೂಜಾ.ಎಲ್ ಪಡುಕೋಡಿ ಕೂಳೂರು, ಲೋಲಾಕ್ಷಿ ಬಳ್ಪ ಕಡಬ, ವಿದ್ಯಾ.ಕೆ ಬಡ್ಡಡ್ಕ ಸುಳ್ಯ, ಅಶ್ವಿನಿ.ಎನ್ ಐವರ್ನಾಡು ಸುಳ್ಯ, ಶ್ರೀದೇವಿ .ರೈ ಕೆಮ್ಮಿಂಜೆ , ರಮ್ಯಾ.ಬಿ ಪಂಜಳ , ವಿಜಯಶ್ರೀ. ಜಿ.ಎಲ್ ಸೋಣಂಗೇರಿ ಸುಳ್ಯ, ಅರ್ಪಿತ ಕೆ.ಎ ಕಳಂಜ ಸುಳ್ಯ, ವಿದ್ಯಾ ಅಶೋಕನಗರ ಮಂಗಳೂರು, ವೀಣಾ ಕುಮಾರಿ ಪರ್ಪುಂಜ , ರಮ್ಯಾ ಉಮೇಶ್ ಎಸ್ ಕೋಡಿ ಮಂಗಳೂರು, ಕಾವ್ಯ ಕೊರಟಗೆರೆ ತುಮಕೂರು, ನಯನ ಮಂಗಳೂರು, ಶಶಿ ಕುಂಬ್ರ ಹಾಗೂ ಚೈತನ್ಯ.ಪಿ.ಎ ಅರಿಯಡ್ಕ ಉತ್ತೀರ್ಣರಾದ ಅಭ್ಯರ್ಥಿಗಳಾಗಿದ್ದು , ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಸದ್ಯ ಖಾಸಗಿ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.ಇವರೆಲ್ಲಾ ವಿದ್ಯಾಮಾತಾ ಅಕಾಡೆಮಿಯ ಮೂಲಕ ರಾತ್ರಿ 8 ರಿಂದ 9 ರ ವರೆಗಿನ ನಿತ್ಯ ಒಂದು ಗಂಟೆಗಳ ಕಾಲ ಆನ್ಲೈನ್ ತರಗತಿಗಳಲ್ಲಿ ತರಬೇತಿಯನ್ನು ಪಡೆದುಕೊಂಡಿದ್ದರು.
ಮನದಾಳದ ಮಾತುಗಳು:
“ಶಿಕ್ಷಕರ ಅರ್ಹತಾ ಪರೀಕ್ಷೆಯಲ್ಲಿ ತೇರ್ಗಡೆಯಾಗಲು ವಿದ್ಯಾಮಾತಾ ಅಕಾಡೆಮಿಯು ಉತ್ತಮ ತರಬೇತಿಯ ವೇದಿಕೆಯನ್ನು ಕಲ್ಪಿಸಿಕೊಟ್ಟಿದ್ದಕ್ಕೆ ಧನ್ಯವಾದಗಳನ್ನು ಅರ್ಪಿಸುತ್ತೇನೆ. ನನ್ನ ತಂದೆ ವಿಜಯ ಮುಳಿಯಾರ್ ಪುತ್ತೂರಿನ ಫಿಲೋಮಿನಾ ಕಾಲೇಜು ಉಪನ್ಯಾಸಕರಾಗಿದ್ದು, ಅವರ ಮೂಲಕ ನಾನು ವಿದ್ಯಾಮಾತಾ ಅಕಾಡೆಮಿಗೆ ತರಬೇತಿಗೆ ಸೇರಿದ್ದು , ಇದೀಗ ಫಲಿತಾಂಶ ತುಂಬಾ ಖುಷಿ ಕೊಟ್ಟಿದೆ.- ವರ್ಷ ಮುಳಿಯಾರ್ , ಉಪನ್ಯಾಸಕಿ, ವಿವೇಕಾನಂದ ಪದವಿ ಕಾಲೇಜು ಪುತ್ತೂರು
“15 ವರುಷಗಳ ನಂತರ ಮೊದಲ ಪ್ರಯತ್ನದಲ್ಲೇ KAR-TET ಉತ್ತೀರ್ಣಳಾಗಿದ್ದೇನೆ. ಇದಕ್ಕೆ ಕಾರಣ ವಿದ್ಯಾಮಾತಾ ಅಕಾಡೆಮಿಯಿಂದ ನನಗೆ ಸಿಕ್ಕಿರೋ ಉತ್ತಮ ಗುಣಮಟ್ಟದ ತರಬೇತಿ.- ಸೌಮ್ಯ.ಎಸ್ ಬೆಂಗಳೂರು.
ನಾನೂ ಟಿ.ಇ.ಟಿ. ಉತ್ತೀರ್ಣಳಾಗಿರುವುದಕ್ಕೆ ವಿದ್ಯಾಮಾತಾ ಅಕಾಡೆಮಿಯ ತರಬೇತಿ ಕಾರಣ. ಈ ಮೂಲಕ ಸರಕಾರಿ ಶಿಕ್ಷಕಿ ಆಗುವ ನನ್ನ ಕನಸಿಗೆ ಹಾದಿ ಸುಗಮವಾಗಿದೆ.– ರಮೀಜಾ, ಬೆಳಿಯೂರು ಬಂಟ್ವಾಳ.
“ನನ್ನ ಮೊದಲ ಪ್ರಯತ್ನದಲ್ಲಿ ಶಿಕ್ಷಕರ ಅರ್ಹತಾ ಪರೀಕ್ಷೆ ಪಾಸ್ ಆಗಲು ಪ್ರೋತ್ಸಾಹಿಸಿದ ವಿದ್ಯಾಮಾತಾ ಅಕಾಡೆಮಿಗೆ ಧನ್ಯವಾದಗಳು.– ತೀರ್ಥ ಕುಮಾರಿ, ಬಿಳಿನೆಲೆ ಕಡಬ.