Site icon Suddi Belthangady

ಕಕ್ಕಿಂಜೆ: ಅನ್ನಾರು ನಿವಾಸಿ ಚಂದ್ರಕಲಾ ಹೃದಯಾಘಾತದಿಂದ ನಿಧನ

ಚಿಬಿದ್ರೆ ಗ್ರಾಮದ ಅನ್ನಾರು ನಿವಾಸಿ ಚಂದ್ರಕಲಾ (31) ಹೃದಯಾಘಾತದಿಂದ ನಿಧನರಾದರು.ಹಲವು ವರ್ಷಗಳಿಂದ ಹೃದಯಕ್ಕೆ ಸಂಬಂಧ ಪಟ್ಟ ಅನಾರೋಗ್ಯದಿಂದ ಬಳಲುತ್ತಿದ್ದರು.

ಇವರು ನೆರಿಯ ಗ್ರಾಮದ ಬಾಂದಡ್ಕದಲ್ಲಿ ತಾಯಿ ಮನೆಯಲ್ಲಿ ಅನಾರೋಗ್ಯದ ಹಿನ್ನೆಲೆಯಲ್ಲಿ ವಾಸವಾಗಿದ್ದು, ನ.29ರಂದು ಸಂಜೆ ಸುಮಾರು 7 ಗಂಟೆಗೆ ಎದೆ ನೋವು ಕಾಣಿಸಿಕೊಂಡ ಕಾರಣ ಆಸ್ಪತ್ರೆಗೆ ಸಾಗಿಸಲಾಯಿತು.

ಆಸ್ಪತ್ರೆ ತಲುಪುವ ಅಷ್ಟರಲ್ಲಿ ಪ್ರಾಣ ಹೋಗಿತ್ತು.ಮೃತರು ಗಂಡ, ಅತ್ತೆ, ತಂದೆ, ತಾಯಿ, ಅಕ್ಕ ಮತ್ತು ಇಬ್ಬರು ಸಹೋದರನ್ನು ಅಗಲಿದ್ದಾರೆ.

Exit mobile version