Site icon Suddi Belthangady

ಧರ್ಮಸ್ಥಳ ಸ್ನಾನ ಘಟ್ಟದಲ್ಲಿ ಮೆಣಸಿನ ವ್ಯಾಪಾರಿಯ ಬೈಕ್ ಕಳವು

ಧರ್ಮಸ್ಥಳ : ತಾಲೂಕಿನ ಅಲ್ಲಲ್ಲಿ ಒಣ ಮೆಣಸು ಮಾರಾಟ ಮಾಡುತ್ತಿರುವ ಚಿಕ್ಕಮಗಳೂರು ಜಿಲ್ಲೆ ಕುರುಬರ ಬೂದಿಹಾಳ ಗ್ರಾಮದ ಕೆ.ಟಿ.ಕೃಷ್ಣ ಶೆಟ್ಟಿ ಎಂಬವರ ಬೈಕ್ ಕಳ್ಳತನವಾದ ಬಗ್ಗೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ನೇತ್ರಾವತಿಯ ಸ್ನಾನಘಟ್ಟದಲ್ಲಿ ಬೈಕ್ ನಿಲ್ಲಿಸಿ ಸ್ನಾನಕ್ಕೆ ಹೋಗಿ ವಾಪಸು ಬಂದಾಗ ಪಾರ್ಕಿಂಗ್ ಜಾಗದಲ್ಲಿ ನಿಲ್ಲಿಸಿದ್ದ ಸುಮಾರು 30 ಸಾವಿರ ರೂ. ಮೌಲ್ಯದ ಬೈಕ್ ಕಳ್ಳತನವಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

Exit mobile version