Site icon Suddi Belthangady

ರೈತರು ಫ್ರುಟ್ಸ್ ಐಡಿ ಮಾಡಿಸಿಕೊಳ್ಳಿ: ಪೃಥ್ವಿ ಸಾನಿಕಂ- ಪತ್ರಿಕಾಗೋಷ್ಠಿ

ಬೆಳ್ತಂಗಡಿ: ರಾಜ್ಯ ಸರಕಾರದ ಫ್ರುಟ್ಸ್ ಐಡಿ ಮಾಡಿಸಿಕೊಳ್ಳಬೇಕು.ಈ ಯೋಜನೆಯ ಫಲವನ್ನು ಎಲ್ಲ ರೈತರು ಪಡೆದುಕೊಳ್ಳಬಹುದು.ರೈತರು ಆಧಾರ್ ಲಿಂಕ್ ಮಾಡಿ ನೋಂದವಣಿ ಮಾಡಿಸಿಕೊಳ್ಳಬಹುದು ಎಂದು ತಹಶೀಲ್ದಾರ್ ಪೃಥ್ವಿ ಸಾನಿಕಂ ಹೇಳಿದರು.ಅವರು ನ.29ರಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

ಎಲ್ಲಾ ರೈತರು ಫ್ರುಟ್ಸ್ ಐಡಿ ಮಾಡಿಸುವುದರಿಂದ ಪ್ರಕೃತಿಕ ವಿಕೋಪದಿಂದ ಬೆಳೆನಾಶದಲ್ಲಿ ಈ ಯೋಜನೆಯ ಮೂಲಕ ನಿಮ್ಮ ಖಾತೆಗೆ ಹಣ ಜಮಾವಾಗುತ್ತದೆ.ವಿರ್ದಿಷ್ಟ ಎಕರೆಗೆ ಈ ಯೋಜನೆ ಸೀಮಿತವಾಗುದಿಲ್ಲ. ತಮ್ಮ ಐಡಿಯನ್ನು ದಾಖಲಿಸಲು ಗ್ರಾಮ ಲೆಕ್ಕಾಧಿಕಾರಿ, ಎ.ಡಿ. ತೋಟಾಗಾರಿಕೆಯಲ್ಲಿ ಸಂಪರ್ಕಿಸಿಸಬಹುದು.ಐಡಿ ಮಾಡಲು ಆಧಾರ್‌ಕಾರ್ಡ್ ಮತ್ತು ಬ್ಯಾಂಕ್‌ಪಾಸ್ ಪುಸ್ತಕದ ಅವ್ಯಶಕತೆಯಿದೆ ಎಂದರು.

ಲೋಕಸಭೆ ಚುನವಾಣೆ ಬರುತ್ತಿದೆ 18 ವರ್ಷವಾದರು ಮತಾದಾರವ ಪಟ್ಟಿಗೆ ತಮ್ಮ ಹೆಸರನ್ನು ನೋಂದಾವಣಿ ಮಾಡಿಕೊಳ್ಳಬೇಕು.ನೋಂದವಾಣಿ ಮಾಡಲು 1/4/2024 ಕೊನೆಯ ದಿನಾಂಕವಾಗಿದ್ದು ತಮ್ಮ ಹೆಸರನ್ನು ಹತ್ತಿರ ಬಿಎಲ್‌ಓ, ಕಾಲೇಜಿನಲ್ಲಿ, ತಾಲೂಕು ಕಚೇರಿಯ ಚುನಾವಾಣ ಕೇಂದ್ರದಲ್ಲಿ ದಾಖಲೆಯನ್ನು ಸಲ್ಲಿಸಬಹುದು.ಕಡತ ವಿಲೇವಾರಿಗಳು ತಡೆಯಾಗುವುದನ್ನು ತಪ್ಪಿಸಲು ಇ ಆಫೀಸ್ ತೆರದಿದೆ. ಅಧಿಕಾರಿಗಳು ಕಂಪ್ಯೂಟರ್‌ನಲ್ಲಿ ಇದನ್ನು ಅವಳಡಿಸಿದ್ದು ಯಾವ ಅಧಿಕಾರಿಗಳ ಬಳಿ ಎಷ್ಟು ಕಡತಗಳು ಬಾಕಿವೆ ಎಂದು ತಿಳಿಯುತ್ತದೆ. ತಿಂಗಳಿಗೆ ಒಮ್ಮೆ ಎಷ್ಟು ಕಡತಗಳು ಬಾಕಿವೆ ಎಂದು ನೋಡಲಾಗುತ್ತದೆ.ಕಡವನ್ನು ಸಲ್ಲಿಸುವರು ಅಧಿಕಾರಿಗಳಿಂದ ಇ ಆಫೀಸ್ ನಂಬ್ರವನ್ನು ಪಡೆದುಕೊಂಡು ಹೋಗಬೇಕು ಎಂದು ತಿಳಿಸಿದ್ದಾರೆ.

Exit mobile version