Site icon Suddi Belthangady

ಉಜಿರೆ ಕಾರ್ತಿಕ್ ಎಂಟರ್ ಪ್ರೈಸಸ್ ನಿಂದ ಅಲ್ಟ್ರಾಟೆಕ್ ಸಿಮೆಂಟ್ ಗ್ರಾಹಕರ ಸಮಾವೇಶ

ಉಜಿರೆ: ಕಾರ್ತಿಕ್ ಎಂಟರ್ ಪ್ರೈಸಸ್ ಇವರ ಸಹಯೋಗದಲ್ಲಿ ಉಜಿರೆ ಎರ್ನೋಡಿ ಕಾರ್ತಿಕ್ ಎಂಟರ್ ಪ್ರೈಸಸ್ ವಠಾರದಲ್ಲಿ ಅಲ್ಟ್ರಾಟೆಕ್ ಸಿಮೆಂಟ್ ಗ್ರಾಹಕರ, ಗುತ್ತಿಗೆದಾರರ, ಮೇಸ್ತ್ರಿಗಳ ಸಮಾವೇಶವು ನ.28ರಂದು ನಡೆಯಿತು.

ಅಲ್ಟ್ರಾಟೆಕ್ ಸಿಮೆಂಟ್ ಕಂಪೆನಿಯ ಉತ್ಪನ್ನ ಓಪಿಸಿ, ಪಿಪಿಸಿ ಸಿಮೆಂಟ್ ಗಳಾದ 33, 43, 53ಗ್ರೇಡ್ ಗಳ ಮಾಹಿತಿ, ಜಾಸ್ತಿ ಗ್ರೇಡ್ ಸಿಮೆಂಟ್ ಬಳಸಿದ ಹಾಗೆ ಬಾಳ್ವಿಕೆ ಜಾಸ್ತಿ, ನೀರು ಜಾಸ್ತಿ ಇರುವ ಜಾಗದಲ್ಲಿ ಈ ಸಿಮೆಂಟ್ ಬಳಸಲು ಉಪಯುಕ್ತವಾಗಿದೆ.ಕಾಂಕ್ರೀಟ್ ಹಾಕಿ 12ದಿನಗಳಲ್ಲಿ ಆಲ್ಟ್ರಾಟೆಕ್ ಸೂಪರ್ ಸಿಮೆಂಟ್ ಕ್ಯೂರಿಂಗ್ ಆಗುತ್ತದೆ.ಸಿಮೆಂಟ್ ಮಿಕ್ಸ್ ಗೆ ಸರಿಯಾದ ನೀರು ಬಳಸಿದಲ್ಲಿ ಸ್ಲ್ಯಾಬ್ ಕ್ರ್ಯಾಕ್ ಬರುವುದಿಲ್ಲ. ಸಿಮೆಂಟ್, ಮರಳು ಮಿಕ್ಸ್ ಆದ 30ನಿಮಿಷದಲ್ಲಿ ಬಳಕೆ ಮಾಡಬೇಕು.ಬಿಲ್ಡಿಂಗ್ ಪ್ರೊಡಕ್ಟ್ ಲಿಕ್ವಿಡ್ ವಾಟರ್ ಪ್ರೂಫ್ ಒಂದು ಬ್ಯಾಗ್ ಸಿಮೆಂಟ್ ಗೆ 200ml ಲಿಕ್ವಿಡ್ ಬಳಸಿದಲ್ಲಿ ಬಿಲ್ಡಿಂಗ್ ಸೋರುವುದಿಲ್ಲ.ಹಳೆ ಕಾಂಕ್ರೀಟ್ ಮತ್ತು ಹೊಸ ಕಾಂಕ್ರೀಟ್ ಜಾಯಿಂಟ್ ಮಾಡಲು ಎಸ್.ಆರ್.ಪಿ ಯನ್ನು ಬಳಸಿದಲ್ಲಿ ಜಾಯಿಂಟ್ ಲೀಕೇಜ್ ಬರುವುದಿಲ್ಲ.ಒಂದು ಕೆಜಿ ಸಿಮೆಂಟ್ ಗೆ ಒಂದು ಲೀಟರ್ ಲಿಕ್ವಿಡ್ ಬಳಸಬೇಕು.ಕಬ್ಬಿಣ ತುಕ್ಕು ಹಿಡಿಯದಾಗೆ, ಸ್ಲ್ಯಾಬ್ ವಿಸ್ತರಣೆಗೆ, ಸ್ಲ್ಯಾಬ್ ಲೀಕೇಜ್, ಟೈಲ್ ಗಮ್, ಪ್ಯಾಕಿಂಗ್ ಗಮ್, ಮೊದಲಾದ ಆಲ್ಟ್ರಾಟೆಕ್ ಸಿಮೆಂಟ್ ಕಂಪೆನಿಯ ಟೆಕ್ನಿಕಲ್ ಇಂಜಿನಿಯರ್ ಶಶಾಂಕ್ ಮಾಹಿತಿ ನೀಡಿದರು.

ಮೊಬೈಲ್ ಲ್ಯಾಬ್ ಟೆಕ್ನಿಷಿಯನ್ ಶ್ರೀವತ್ಸ, ಟೆಕ್ನಿಕಲ್ ಎಕ್ಸಿಕೂಟಿವ್ ಅಭಿನಂದನ್, ಮಾರ್ಕೆಟಿಂಗ್ ರಕ್ಷಿತ್, ಬಿರ್ಲಾ ವೈಟ್ ಸಿಮೆಂಟ್ ಜಮೀರ್ ಹುಸೈನ್, ಸೇಲ್ಸ್ ಎಕ್ಸಿಕೂಟಿವ್ ಅಭಿಲಾಷ್, ಬಿ.ಪಿ.ಡಿ ಟೆಕ್ನಿಕಲ್ ಪ್ರೇಮ್ ಕುಮಾರ್, ಆಲ್ಟ್ರಾಟೆಕ್ ಸಿಮೆಂಟ್ ಕಂಪೆನಿಯ ಹೊಸ ಉತ್ಪನ್ನಗಳ ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ ಕಾರ್ತಿಕ್ ಎಂಟರ್ ಪ್ರೈಸಸ್ ಮಾಲಕ ಧರ್ಮಣ ಗೌಡ, ಕಾರ್ತಿಕ್ ಗೌಡ ಗುತ್ತಿಗೆದಾರರು, ಗ್ರಾಹಕರು, ಮೇಸ್ತ್ರಿಗಳು ಉಪಸ್ಥಿತರಿದ್ದರು.

Exit mobile version