ಕಳೆಂಜ: ಜನನಿ ಸಂಜೀವಿನಿ ಮಹಿಳಾ ಒಕ್ಕೂಟದ ಗ್ರಾಮ ಪಂಚಾಯತ್ ಮಟ್ಟದ ವಾರ್ಷಿಕ ಮಹಾಸಭೆ ನ.28 ರಂದು ಇಲ್ಲಿನ ಚರ್ಚ್ ಹಾಲ್ ನಲ್ಲಿ ನಡೆಯಿತು.
ಕಾರ್ಯಕ್ರಮದ ಉದ್ಘಾನೆಯನ್ನು ಕಳೆಂಜ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಮಂಜುನಾಥ ಗೌಡ ಹಾರಿತ್ತ ಕಜೆ ನೆರವೇರಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷೆ ಸಾವಿತ್ರಿ ರೈ ರವರು ವಹಿಸಿದ್ದರು.
ವೇದಿಕೆಯಲ್ಲಿ ಪಂಚಾಯತ್ ಅಭಿವೃದ್ದಿ ಅಧಿಕಾರಿ ಹೊನ್ನಮ್ಮ, ಮೇಲ್ವಿಚಾರಕರಾದ ವೀಣಾಶ್ರೀ, ತಾಲೂಕು ವ್ಯವಸ್ಥಾಪಕರಾದ ನಿತೀಶ್ ಮೊದಲಾದವರು ಉಪಸ್ಥಿತರಿದ್ದರು.ನಿತೀಶ್ ರವರು ಸಂಜೀವಿನಿ ಒಕ್ಕೂಟದ ಮಹತ್ವವನ್ನು ತಿಳಿಸಿದರು.ಇವರ ಉತ್ತಮ ಸಾಧನೆಗೆ ರಾಜ್ಯಮಟ್ಟದ ಅತ್ಯುತ್ತಮ ಸಾಧನೆ ಪ್ರಶಸ್ತಿ ಲಭಿಸಿದ್ದು ಇವರನ್ನು ಒಕ್ಕೂಟದ ವತಿಯಿಂದ ಸನ್ಮಾನಿಸಲಾಯಿತು.
ಒಕ್ಕೂಟದ ವಾರ್ಷಿಕ ವರದಿಯನ್ನು ಕಾರ್ಯದರ್ಶಿ ರವರು ಮಂಡಿಸಿದರು.
ನಂತರ ನೂತನ ಪದಾಧಿಕಾರಿಗಳ ಪದಗ್ರಹಣವನ್ನು ವೀಣಾಶ್ರೀ ರವರು ನೆರವೇರಿಸಿದರು.ಕಾರ್ಯಕ್ರಮದ ಸ್ವಾಗತವನ್ನು ಗೀತಾ ಮತ್ತು ಧನ್ಯವಾದವನ್ನು ಉಷಾ ನೆರವೇರಿಸಿದರು.