Site icon Suddi Belthangady

ಕೋಟಿ ಚೆನ್ನಯ ಸೇವಾ ಸಂಘ ಕುಕ್ಕೆಡಿ ನಿಟ್ಟಡೆ ವತಿಯಿಂದ ಗುರು ನಮನ ಕಾರ್ಯಕ್ರಮ

ವೇಣೂರು: ಕೋಟಿ ಚೆನ್ನಯ್ಯ ಸೇವಾ ಸಂಘದಿಂದ ಗುರು ನಮನ ಕಾರ್ಯಕ್ರಮ ಮಂಜುಶ್ರೀ ಭಜನಾ ಮಂದಿರದಲ್ಲಿ ನಡೆಯಿತು.

ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಸ್ಮಿತೆಶ್ ಬಾರ್ಯ ಮಾತನಾಡಿ ಮದ್ಯರಾತ್ರಿಯ ಕತ್ತಲೆಯಲ್ಲಿ ಎದ್ದು ಹೋದ ಸಿದ್ದಾರ್ಥ ಬುದ್ಧನಾಗಿ ಪ್ರಬುದ್ಧನಾಗಿ ದ್ವೇಷದಿಂದ ದ್ವೇಷವನ್ನು ಗೆಲ್ಲಲು ಅಸಾಧ್ಯ.ಪ್ರೀತಿಯಿಂದ ದ್ವೇಷವನ್ನು ಗೆಲ್ಲಬಹುದು.ತನ್ನ ತಾನು ಗೆದ್ದ ಬಳಿಕ ಲೋಕವನ್ನು ಗೆಲ್ಲಬಹುದು ಹೀಗೆ ಮೌನಕ್ರಾಂತಿಯ ಮೂಲಕ ಸಮಾಜ ಪರಿವರ್ತನೆಯನ್ನು ಮಾಡಿದ ಪರಿವರ್ತನಾ ಶಿಲ್ಪಿ ಬ್ರಹ್ಮ ಶ್ರೀ ನಾರಾಯಣ ಗುರು ಭಾರತೀಯ ಪುನರುಜ್ಜೀವನದ ಪಿತಾಮಹ ಇವರ ತತ್ವ ಸಿದ್ದತಾಂತಗಳನ್ನು ಅಕ್ಷರಶಃ ಪರಿಪಾಲನೆ ಮಾಡಿಕೊಂಡು ಬಂದಿದುರುವ ಕೋಟಿ ಚೆನ್ನಯ ಸೇವಾ ಸಂಘ ಸಮಾಜಕ್ಕೆ ಮಾದರಿ ಎಂದರು.

ಗ್ರಾಮ ಪಂಚಾಯತ್ ಅಧ್ಯಕ್ಷೆ ಅನಿತಾ ಶುಭಕೋರಿದರು.

ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ರತ್ನಾಕರ ಸಾಲ್ಯಾನ್ ಅಂಕರ್ಜಾಲು ವಹಿಸಿ ಮಾತನಾಡಿ ಸಂಘದ ಸಕ್ರಿಯ ಯೋಜನೆಗಳನ್ನು ತಿಳಿಸಿ ಸಮಾಜಕ್ಕೆ ಮಾದರಿಯಾಗುತ್ತಿರುವ ನಮ್ಮ ಸಂಘಟನೆಯನ್ನು ಇನ್ನಷ್ಟು ಬಲಿಷ್ಠಗೊಳಿಸಲು ಸಹಕಾರ ಸದಾ ಇರಲಿ ಎಂದರು.

ಕು.ಅನನ್ಯ,ಕು. ಪ್ರತಿಕ್ಷಾ, ಕು.ಪ್ರಜ್ಞಾ,ಕು. ದಾಕ್ಷಾ ಪ್ರಾರ್ಥಿಸಿದರು.ಸಂಘದ ಗೌರವ ಅಧ್ಯಕ್ಷ ಅಮ್ಮಾಜಿ ಪೂಜಾರಿ ಇವರ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು.ಕಾರ್ಯದರ್ಶಿ ರವಿ ಉಲ್ತುರ್ ವರದಿ ವಾಚಿಸಿದರು.ಯಶಾಲಾತಿ ಅಮ್ಮಾಜಿ ಕೋಟ್ಯಾನ್ ಇವರು ಮಕ್ಕಳಿಗೆ ಆಟೋಟ ಸ್ಫರ್ಧೆ ಹಾಗೂ ಮನೋರಂಜನೆ ಕಾರ್ಯಕ್ರಮ ನಡೆಸಿಕೊಟ್ಟರು.ವಿದ್ಯಾ ಕ್ಷೇತ್ರದಲ್ಲಿ ಸಾಧನೆಗೈದ ಕು.ಪ್ರಜ್ಞಾ ಪಿ.ಯು.ಸಿ ವಿದ್ಯಾರ್ಥಿನಿಯನ್ನು ಗೌರವಿಸಲಾಯಿತು.ನಾಟಿ ವೈದ್ಯೆ ಮುತ್ತು ಪೂಜಾರ್ತಿ, ಸಹಕಾರ ನೀಡುತ್ತಿರುವ ಲೋಕಯ್ಯ ಪೂಜಾರಿ ಕಂಗಿತ್ತುಲ್ ಇವರನ್ನು ಗೌರವವಿಸಲಾಯಿತು.

ಪದ್ಮನಾಭ ಬಿಯಾದಡಿ, ಸತೀಶ್ ಕೆರಿಯರ್, ಪ್ರದೀಪ್ ಕೂಟೇಲ್, ಜಗದೀಶ್ ಬುಲೆಕ್ಕರ, ನಿತಿನ್ ಪಾರೋಟ್ಟು, ಸತೀಶ್ ಮಂಜೊಲೋಕ್, ರಾಜೇಂದ್ರ ಕೋಟ್ಯಾನ್, ಚಂದ್ರ ಬರಮೇಲು ಸಹಕರಿಸಿದರು.

ಲೋಕಯ್ಯ ಪೂಜಾರಿ ಕಾರ್ಯಕ್ರಮ ನಿರೂಪಿಸಿದರು.ನವೀನ್ ಬುಲೆಕ್ಕರ ವಂದಿಸಿದರು.

Exit mobile version