ಕೊಯ್ಯೂರು: ಸರಕಾರಿ ಪ್ರೌಢಶಾಲೆಯಲ್ಲಿ ನ.23ರಂದು ಶಾಲಾ ರಜತ ಮಹೋತ್ಸವ ಆಚರಣೆಯ ಅಂಗವಾಗಿ ಶಾಲೆಯಲ್ಲಿ ಶಾಲಾ ವಿದ್ಯಾರ್ಥಿಗಳಿಗೆ ಕ್ರೀಡಾಕೂಟ ಏರ್ಪಡಿಸಲಾಗಿತ್ತು.
ವೇಣೂರು ವಲಯದ ಮೆಸ್ಕಾಂ ನ ಪವರ್ ಮ್ಯಾನ್ ಹಾಗೂ ಶಾಲೆಯ ಹಿರಿಯ ವಿದ್ಯಾರ್ಥಿ ಚಂದ್ರಶೇಖರ ಗೌಡ ಮಾವಿನಕಟ್ಟೆ ಧ್ವಜಾರೋಹಣ ಮಾಡಿ ಕ್ರೀಡೆಯಲ್ಲಿ ಸಾಧನೆ ಮಾಡುವವನಿಗೆ ಪ್ರತಿ ಕ್ಷಣವೂ ಮುಖ್ಯವಾಗಿರುತ್ತದೆ.ಆದುದರಿಂದ ವಿದ್ಯಾರ್ಥಿಗಳು ಸ್ವಯಂ ಪ್ರಯತ್ನದಿಂದ ಸಾಧನೆ ಮಾಡಬೇಕೆಂದರು.
ವೇಣೂರು ಪೋಲೀಸ್ ಸ್ಟೇಷನ್ ನಲ್ಲಿ ಕಾರ್ಯನಿರ್ವಹಿಸುತ್ತಿರುವ ಪೋಲೀಸ್ ಕಾನ್ಸಟೇಬಲ್ ಹಾಗೂ ಶಾಲೆಯ ಹಿರಿಯ ವಿದ್ಯಾರ್ಥಿ ಮಹಮ್ಮದ್ ನಜೀರ್ ಕ್ರೀಡಾಕೂಟದ ಪಥಸಂಚಲನದ ವಂದನೆ ಸ್ವೀಕರಿಸಿ ದೀಪ ಬೆಳಗಿಸಿ ಕ್ರೀಡಾಕೂಟ ಉದ್ಘಾಟಿಸಿದರು.
ಬಳಿಕ ಮಾತಾಡಿ ಶಾಲೆಯಲ್ಲಿ ರೂಢಿಸಿಕೊಂಡ ಗುಣಗಳು ನಮಗೆ ಜೀವನದಲ್ಲಿ ದಾರಿ ದೀಪವಾಗುತ್ತದೆ. ಆದುದರಿಂದ ಶಿಕ್ಷಕರು ತೋರಿಸಿದ ದಾರಿಯಲ್ಲಿ ಪ್ರಯತ್ನಿಸಿದರೆ ಯಶಸ್ಸು ಖಂಡಿತಾ ಸಿಗುತ್ತದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ಮುಖ್ಯ ಶಿಕ್ಷಕರಾದ ರಾಧಾಕೃಷ್ಣ ತಚ್ಚಮೆ ವಹಿಸಿದ್ದರು ಶಾಲಾ ಎಸ್ ಡಿ ಯಂ ಸಿ ಉಪಾಧ್ಯಕ್ಷ ದಾಮೋದರ ಗೌಡ, ಶಿಕ್ಷಕರುಗಾಳದ ಬೇಬಿ, ದೀಪ್ತಿ ಹೆಗ್ಡೆ, ಗೀತಾ ಉಡುಪಿ, ಮೋಹನದಾಸ, ಬಿ.ಎಡ್ ಪ್ರಶಿಕ್ಷಣಾರ್ಥಿ ಸುರಕ್ಷಾ ಉಪಸ್ಥಿತರಿದ್ದರು.ಸುಧಾಕರ ಶೆಟ್ಟಿ ಸ್ವಾಗತಿಸಿ, ಪ್ರವೀಣ್ ಕುಮಾರ್ ಎಚ್ ವಂದಿಸಿ, ರಾಮಚಂದ್ರ ದೊಡಮನಿ ನಿರೂಪಿಸಿದರು .