Site icon Suddi Belthangady

ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಯವರಿಗೆ ಲಯನ್ಸ್ ಕ್ಲಬ್ ನಿಂದ ಹುಟ್ಟುಹಬ್ಬದ ಶುಭಾಶಯ

ಬೆಳ್ತಂಗಡಿ: 75 ಸಂವತ್ಸರ ಪೂರೈಸಿ‌ 76 ರ ವಸಂತಕ್ಕೆ ಕಾಲಿಟ್ಟಿರುವ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ, ಬೆಳ್ತಂಗಡಿ ಲಯನ್ಸ್ ಕ್ಲಬ್ಬಿನ ಗೌರವ ಸದಸ್ಯ ಡಾ| ಡಿ.ವೀರೇಂದ್ರ ಹೆಗ್ಗಡೆ ಯವರಿಗೆ ಬೆಳ್ತಂಗಡಿ ಲಯನ್ಸ್ ಕ್ಲಬ್ ವತಿಯಿಂದ ಶುಭಾಶಯ ಸಲ್ಲಿಸಲಾಯಿತು.

ಸ್ಥಾಪಕ ಸದಸ್ಯ ಎಂ.ಜಿ‌‌ ಶೆಟ್ಟಿ ಮತ್ತು ಸುವರ್ಣ ಮಹೋತ್ಸವ ಸಂಭ್ರಮ ವರ್ಷದ ಅಧ್ಯಕ್ಷ ಉಮೇಶ್ ಶೆಟ್ಟಿ ಅವರ ನೇತೃತ್ವದಲ್ಲಿ ಕಾರ್ಯದರ್ಶಿ ಅನಂತಕೃಷ್ಣ, ನಿಕಟಪೂರ್ವ ಅಧ್ಯಕ್ಷ ಡಾ.ದೇವಿ ಪ್ರಸಾದ್ ಬೊಲ್ಮ, ಸದಸ್ಯರುಗಳಾದ ದತ್ತಾತ್ರೇಯ ಗೊಲ್ಲ, ರಾಮಕೃಷ್ಣ ಗೌಡ, ನಿತ್ಯಾನಂದ ನಾವರ, ರವೀಂದ್ರ ಶೆಟ್ಟಿ ಬಳಂಜ, ಕಿರಣ್ ಕುಮಾರ್ ಶೆಟ್ಟಿ, ಲಕ್ಷ್ಮಣ ಪೂಜಾರಿ, ಜಯಂತ ಶೆಟ್ಟಿ, ಜಗನ್ನಾಥ ಶೆಟ್ಟಿ, ಬಿ.ಕೆ.ಸತೀಶ್ ಆಚಾರ್ಯ, ಜಯರಾಮ್ ಭಂಡಾರಿ ಮತ್ತು ರಾಜು ಶೆಟ್ಟಿ ಇವರುಗಳು ಭಾಗವಹಿಸಿ ಶುಭಾಶಯ ಕೋರಿದರು.

Exit mobile version