ಪುದುವೆಟ್ಟು: ನವೆಂಬರ್ 23 ರಂದು ಪುದುವೆಟ್ಟು ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕೆಮ್ಮಟೆ ಇಲ್ಲಿಯ ಮಕ್ಕಳ ರಕ್ತದ ಗುಂಪನ್ನು ನೋಡುವ ಕಾರ್ಯಕ್ರಮವು ಶಾಲೆಯ ಮೈದಾನದಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ಶಾಲೆಯ ಪ್ರಾಂಶುಪಾಲರು ಪ್ರೀತಿ ಕುಮಾರಿ ಮತ್ತು ಅಬೂಬಕ್ಕರ್ ಎಸ್.ಡಿ.ಎಂ.ಸಿ ಕೆಮ್ಮಟ ಹಾಗೂ ಶಾಲೆಯ ಎಲ್ಲ ಶಿಕ್ಷಕ-ಶಿಕ್ಷಕಿಯರು ಭಾಗವಹಿಸಿದರು.
ಬೆಳಗ್ಗೆ 11 ಗಂಟೆಗೆ ಸುಮಾರಿಗೆ ಕಾರ್ಯಕ್ರಮ ಆರಂಭಗೊಂಡಿದ್ದು, ಸಂತ ಜೋಸೆಫ್ ಆಸ್ಪತ್ರೆ ಇದರ ಲ್ಯಾಬ್ ತಂತ್ರಜ್ಞಯದ ಮಹಮ್ಮದ್ ಉಜೈರ್ ಮತ್ತು ಮಿಶ್ರಿಯ ಹಾಗೂ ಆಸ್ಪತ್ರೆಯ ಆಂಬುಲೆನ್ಸ್ ಚಾಲಕ ಸಿನಾನ್ ಚಾರ್ಮಾಡಿ ಉಪಸ್ಥಿತರಿದ್ದರು.